ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋ(sa re ga ma pa reality show) ಇದೀಗಾಗಲೇ 15 ಸೀಜನ್ ಗಳನ್ನು ಮುಗಿಸಿದ್ದು ಸರಿಗಮಪ ರಿಯಾಲಿಟಿ ಶೋನಲ್ಲಿ ಆಂಕರ್ ಅನುಶ್ರೀರವರು(anchor Anushree) ನಿರೂಪಣೆಯನ್ನು ಮಾಡುತ್ತಾರೆ. ಇದೀಗ ಸರಿಗಮಪ ಸೀಸನ್ 15 ರೋಚಕವಾಗಿ ಮೂಡಿ ಬರುತ್ತಿದ್ದು ಇತ್ತೀಚಿಗಷ್ಟೇ ಒಂದು ಹಾಡಿನ ಮೂಲಕ ದಿಯಾ ಹೆಗಡೆ ಎಂಬ ಪುಟಾಣಿ ಎಲ್ಲರ ಗಮನ ಸೆಳೆದಿದ್ದಳು.

 

 

ಇದೀಗ ದಿಯಾ ಹೆಗಡೆ (Diya Hegde)ಹಾಡಿರುವ ಹಾಡು ಎಲ್ಲಾ ಕಡೆ ವೈರಲ್ ಆಗಿದ್ದು ಜಡ್ಜ್ಗಳು ಕೂಡ ಇವಳ ಹಾಡಿಗೆ ಮನಸೋತಿದ್ದಾರೆ. ನೆಟ್ಟಿಗರು ಕೂಡ ದಿಯಾ ಹೆಗಡೆ ಹಾಡನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದು ದಿಯಾ ಹೆಗಡೆ “ನಾ ಮುದುಕಿ ಆದರೇನಾತು” ಎನ್ನುವ ಜನಪದ ಹಾಡೊಂದು ಶುಶ್ರಾವ್ಯವಾಗಿ ಹಾಡಿದ್ದಳು ಸರಿಗಮಪ ಸೀಸನ್ 15ರ ವೇದಿಕೆ ಮೇಲೆ ದಿಯಾ ಹೆಗಡೆ ಈ ಹಾಡನ್ನು ಹಾಡಿದ್ದು ಹಾಡುವಾಗ ಪುಟಾಣಿಯ ಬಾಯಿಯಲ್ಲಿ ಬರುತ್ತಿದ್ದ ಪಟಾಕಿ ಗಾನ ,ನೃತ್ಯ, ಹಾವಭಾವ ಎಲ್ಲವೂ ಕೂಡ ಜನರ ಗಮನವನ್ನು ಸೆಳೆದಿತ್ತು.

 

 

ತನ್ನ ಮೊದಲನೇ ಎಪಿಸೋಡ್ ನಲ್ಲಿ ದಿಯಾ ಹೆಗಡೆ ಆಂಕರ್ ಅನುಶ್ರೀರವರ ಕುರಿತು ಹಾಡನ್ನು ಹಾಡಿದ್ದರು. ತದನಂತರ ಇದೀಗ ಶಿವಣ್ಣರವರನ್ನು ಕುರಿತು ಒಂದು ಹಾಡನ್ನು ಹಾಡಿದ್ದಾರೆ ಆ ಹಾಡು ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಶಿವಣ್ಣ ಕೂಡ ದಿಯಾ ಹೆಗಡೆ ಹಾಡಿದ ಹಾಡನ್ನು ಮೆಚ್ಚಿಕೊಂಡು ನನ್ನ ಬಗ್ಗೆ ಹಾಡನ್ನು ಬರೆದಿದ್ದಾಳೆ ಎಂದರೆ ಇವಳ ಪ್ರತಿಭೆ ಎಷ್ಟಿರಬೇಕು ಎಂದು ಹೊಗಳಿದ್ದಾರೆ.

 

 

ಈಕೆ ದೊಡ್ಡವಳಾದ ಮೇಲೆ ಹಂಸಲೇಖ(hamsalekha) ರವರ ರೀತಿ ಆದರೂ ಆಗಬಹುದು ಎಂದು ದಿಯಾ ಹೆಗ್ಡೆ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ದಿಯಾ ಹೆಗ್ಡೆ(Diya Hegde) ಶಿವಣ್ಣನ ಕುರಿತು ಹಾಡನ್ನು ಹಾಡಿದಾಗ ಅವರು ಓಡಿ ಬಂದು ದಿಯಾ ಹೆಗ್ಡೆ ಎಂದು ಅಪ್ಪಿಕೊಂಡು ಭಾವುಕರಾದರು ತಿಯ ಹೆಗ್ಡೆ ಹಾಡು ನೃತ್ಯ ಎಲ್ಲವನ್ನು ಕೂಡ ಶಿವರಾಜ್ ಕುಮಾರ್ (Shiva Rajkumar)ಅವರು ಮೆಚ್ಚಿಕೊಂಡಿದ್ದಾರೆ.

Leave a comment

Your email address will not be published. Required fields are marked *