ಕನ್ನಡ ಚಿತ್ರರಂಗ ಅಥವಾ ಇನ್ ಯಾವುದೇ ಚಿತ್ರರಂಗವನ್ನು ನಾವು ತೆಗೆದುಕೊಂಡರೆ, ಸೆಲೆಬ್ರಿಟಿಗಳು(celebrity) ಹೆಚ್ಚಾಗಿ ಫೇಮಸ್ ಆದ ಜನರು ಹೊರಗಡೆ ಹೋಗುವಾಗ ಕಾರಿನಲ್ಲಿ ಪ್ರಯಾಣಿಸಿದರೆ ಕಾರಿನ ಕಿಟಕಿ ಹಾಕಿಕೊಂಡು ಗ್ಲಾಸನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಯಾರಿಗೂ ಮುಖ ಕಾಣದಂತೆ ಪ್ರಯಾಣಿಸುತ್ತಾರೆ. ಬೈಕಿನಲ್ಲಿ ಪ್ರಯಾಣ ಮಾಡಿದರು ಕೂಡ ಹೆಲ್ಮೆಟ್ ತರಿಸಿ ಅಭಿಮಾನಿಗಳು ಎದುರಿಗೆ ಸಿಕ್ಕರೂ ಕೂಡ ಸರಿಯಾಗಿ ಮಾತನಾಡಿಸದೆ ಮುಂದೆ ಹೋಗುತ್ತಾರೆ. ಆದರೆ ಬೆರಳೆಣಿಕೆಯಷ್ಟು ಸೆಲೆಬ್ರಿಟಿಗಳು ಮಾತ್ರ ನಾನು ಸೆಲೆಬ್ರಿಟಿ ಆಗಿರಲು ಜನರೇ ಕಾರಣ ಎಂದು ಜನರನ್ನು ಮಾತನಾಡಿಸುತ್ತಾ ಪ್ರೀತಿಯಿಂದ ಪ್ರತಿಕ್ರಿಯೆ ನೀಡುತ್ತಾರೆ. ಅಂತಹವರಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್(karunada Chakraborty Shiva Rajkumar) ಕೂಡ ಒಬ್ಬರು ತಾವು ಒಬ್ಬ ದೊಡ್ಡ ನಟ ಎನ್ನುವುದನ್ನು ಮರೆತು ಶಿವಣ್ಣ(shivanna) ಎಲ್ಲರೊಡನೆ ಪ್ರೀತಿಯಿಂದ ಸೇರಿಕೊಳ್ಳುತ್ತಾರೆ. ಇಂತಹ ಸಾಕಷ್ಟು ಸಂದರ್ಭಗಳನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಲೇ ಇದ್ದೇವೆ ಅಂತಹದ್ದೇ ಮತ್ತೊಂದು ವಿಡಿಯೋ ಇದೀಗ ವೈರಲ್ ಆಗಿದೆ.

 

 

ಡಾಕ್ಟರ್ ರಾಜಕುಮಾರ್ (Dr Rajkumar family)ಕುಟುಂಬದವರು ಎಂದರೆ ಸ್ನೇಹ ಜೀವಿಗಳು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾರೆ. ಉತ್ತಮ ವ್ಯಕ್ತಿತ್ವ ನಡತೆ ಸ್ನೇಹ ಸೌಹಾರ್ಧಕ್ಕೆ ಡಾಕ್ಟರ್ ರಾಜ್ ಫ್ಯಾಮಿಲಿ ಉದಾಹರಣೆಯಾಗಿದೆ. ಪುನೀತ್ ರಾಜಕುಮಾರ್(Punit Rajkumar) ಕೂಡ ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುತ್ತಿದ್ದರು ಹಾಗೆಯೇ ರಾಘವೇಂದ್ರ ರಾಜಕುಮಾರ್(Raghavendra Rajkumar) ಕೂಡ ತಮ್ಮ ಅಭಿಮಾನಿಗಳನ್ನು ಪ್ರೀತಿಯಿಂದಲೇ ಮಾತನಾಡಿಸುತ್ತಾರೆ. ಡಾಕ್ಟರ್ ರಾಜಕುಮಾರ್( Dr Rajkumar) ಕುಟುಂಬ ಎಂದರೆ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶ ವಿದೇಶದಲ್ಲಿ ಸಾಕಷ್ಟು ಗೌರವವನ್ನು ಪಡೆದುಕೊಂಡಿದ್ದಾರೆ.

 

 

ಡಾಕ್ಟರ್ ರಾಜಕುಮಾರ್ ಅವರು ಎಂದರೆ ಸರಳತೆಯ ವ್ಯಕ್ತಿತ್ವದವರು ಎಂದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಪುನೀತ್ ರಾಜಕುಮಾರ್ ರವರು ಸ್ಥಾಪಿಸಿದ ಮೈಸೂರಿನ ಶಕ್ತಿಧಾಮದ ಮಕ್ಕಳನ್ನು ಶಿವರಾಜ್ ಕುಮಾರ್ ಇತ್ತೀಚಿಗೆ ಮೈಸೂರಿನಿಂದ ಬೆಂಗಳೂರಿಗೆ ಪ್ರವಾಸಕ್ಕೆಂದು ಕರೆತಂದು ವಿಧಾನಸೌಧ(vidhana soudha) ,ನಂದಿ ಬೆಟ್ಟ(Nandi Betta) ಬೆಂಗಳೂರಿನ ಸಾಕಷ್ಟು ಪ್ರಮುಖ ಸ್ಥಳಗಳನ್ನು ತೋರಿಸಿದ್ದಾರೆ. ಅಷ್ಟೇ ಅಲ್ಲದೆ ಒಬ್ಬ ಸ್ಟಾರ್ ನಟ ಎನ್ನುವುದನ್ನು ಮರೆತು ಮಕ್ಕಳೊಂದಿಗೆ ಬೆರೆತಿದ್ದಾರೆ. ಅದೇ ರೀತಿ ಹ್ಯಾಟ್ರಿಕ್ ಹೀರೋ ಶಿವಣ್ಣ ಒಮ್ಮೆ ತಮ್ಮ ಪತ್ನಿ ಗೀತಾ (shivanna wife geeta)ರವರ ಜೊತೆ ಕಾರಿನಲ್ಲಿ ಹೊರಗೆ ಹೋಗುವಾಗ ಸಿಗ್ನಲ್ ನಲ್ಲಿ ಕಾರನ್ನು ನಿಲ್ಲಿಸಿದಾಗ ಪಕ್ಕದಲ್ಲಿ ಇನ್ನೊಂದು ಕಾರು ಬಂದು ನಿಂತಿದೆ.

 

 

ಪಕ್ಕದ ಕಾರಿನಲ್ಲಿ ಇದ್ದವರು ಶಿವಣ್ಣನನ್ನು ನೋಡಿ ಹೇಗಿದ್ದೀರ ಸರ್ ಎಂದು ಮಾತನಾಡಿಸಿದ್ದಾರೆ ಅದಕ್ಕೆ ಶಿವಣ್ಣ ಕೂಡ ನಗುತ್ತಲೇ ಉತ್ತರಿಸಿ ನಾನು ಚೆನ್ನಾಗಿದ್ದೇನೆ ಎಂದಿದ್ದಾರೆ. ಅಭಿಮಾನಿಯೂ ನಿಮ್ಮನ್ನು ನೋಡಿ ಬಹಳ ಖುಷಿಯಾಯಿತು ಎಂದು ಹೇಳಿದಾಗ ಶಿವಣ್ಣ ತುಂಬಾ ಧನ್ಯವಾದಗಳು ಊಟ ಆಯ್ತಾ ಏನಿವತ್ತು ಬಿರಿಯಾನಿನಾ? ಎಂದು ಅಭಿಮಾನಿಯನ್ನೂ ಪ್ರಶ್ನಿಸಿದ್ದಾರೆ. ಶಿವಣ್ಣನು ತನ್ನ ಅಭಿಮಾನಿಯ (shiv Rajkumar fan)ಜೊತೆ ಇಷ್ಟು ಸರಳತೆಯಿಂದ ಮಾತನಾಡಿರುವುದನ್ನು ನೋಡಿ ಶಿವಣ್ಣ ರವರ ಅಭಿಮಾನಿಯೂ ಕೂಡ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ತಾವು ಶಿವರಾಜ್ ಕುಮಾರ್ ಜೊತೆ ಮಾತನಾಡಿರುವ ವಿಡಿಯೋವನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ ಇರುವುದು ಒಂದೇ ಹೃದಯ ಅದನ್ನು ಎಷ್ಟು ಬಾರಿ ಗೆಲ್ಲುತ್ತೀರಿ ಶಿವಣ್ಣ ಎಂದು ಅಭಿಮಾನಿಗಳು ಕಾಮೆಂಟ್ ಹಾಕುತ್ತಿದ್ದಾರೆ.

Leave a comment

Your email address will not be published. Required fields are marked *