ಕಿರುತೆರೆ ನಟಿ ಸುಕೃತ ಜೊತೆ ಶೈನ್ ಶೆಟ್ಟಿ ಮದುವೆ ಫಿಕ್ಸ್ ; ದೀಪಿಕಾ ದಾಸ್ ಕಥೆ ಮುಂದೇನು

ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ(shain shetty) ಎಂದರೆ ಎಲ್ಲಾ ಕಡೆ ಫೇಮಸ್ ಅವರ ಹೆಸರನ್ನು ಕೇಳಿದರೆ ಹುಡುಗಿಯರ ಎದೆ ಬಡಿತ ಹೆಚ್ಚಾಗುತ್ತದೆ. ಶೈನ್ ಶೆಟ್ಟಿ ಬಿಗ್ ಬಾಸ್ ನಲ್ಲೂ ಕೂಡ ಭಾಗವಹಿಸಿ ವಿನ್ನರ್ ಆಗಿದ್ದರು ಬಿಗ್ ಬಾಸ್ನ ಶೈನ್ ಶೆಟ್ಟಿ ಅವರು ಬಿಗ್ ಬಾಸ್ ರಿಯಾಲಿಟಿ ಶೋ ಇಂದ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡರು ಇವರು ಒಬ್ಬರು ಸ್ಟೈಲ್ ಐಕಾನ್ ಆಗಿದ್ದು ಇವರ ಮಾತು ಹಾಗೂ ಟ್ಯಾಲೆಂಟ್ ನಿಂದ ಹಲವು ಹುಡುಗಿಯರ ನಿದ್ದೆ ಕೆಡಿಸಿದ್ದಾರೆ.

 

ಶೈನ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ದೀಪಿಕಾ ದಾಸ್ ರವರ ಜೊತೆ ಕ್ಲೋಸ್ ಆಗಿದ್ದರು ತದನಂತರ ಬಿಗ್ ಬಾಸ್ ಮನೆಯಿಂದ ಹೊರ ಬಂದಾಗಲೂ ಕೂಡ ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್(Deepika das) ರವರು ವಿವಾಹವಾಗುತ್ತಾರೆ ಎನ್ನುವ ವದಂತಿಗಳು ಹಬ್ಬಿದವು ಆದರೆ , ಇದೀಗ ಶೈನ್ ಶೆಟ್ಟಿ ರವರು ಕಿರುತೆರೆಯ ನಟಿ ಸುಕೃತ ನಾಗ್ ರವರನ್ನು(sukruta nag) ವಿವಾಹವಾಗುತ್ತಿದ್ದೇನೆ ಎಂದು ಹೇಳಿದ್ದಾರೆ.

 

 

ಕಲರ್ಸ್ ಕನ್ನಡದಲ್ಲಿ ಎರಡು ದಿನಗಳಿಂದ ಅನುಬಂಧ ಅವಾರ್ಡ್ಸ್ ಪ್ರೋಗ್ರಾಮ್ ಪ್ರಸಾರವಾಗುತ್ತಿದೆ. ಆ ಕಾರ್ಯಕ್ರಮದಲ್ಲಿ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿರುವ ಹಾಗೂ ಈ ಹಿಂದೆ ಧಾರವಾಹಿಗಳಲ್ಲಿ ಅಭಿನಯಿಸಿರುವ ಹಾಗೂ ರಿಯಾಲಿಟಿ ಶೋಗಳ ಸ್ಪರ್ಧಿಗಳು ಕೂಡ ಈ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅನುಬಂಧ ಅವಾರ್ಡ್ಸ್ ಗೆ ಸಂಬಂಧಿಸಿದಂತೆ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಒಂದನ್ನು ಹಂಚಿಕೊಂಡಿದ್ದು ಈ ಪ್ರೋಮೊದಲ್ಲಿ ಶೈನ್ ಶೆಟ್ಟಿ ಮೇಲೆ ಹುಡುಗಿಯೊಬ್ಬಳು ಬೀಳುತ್ತಾಳೆ ಆಗ ಶೈನ್ ಶೆಟ್ಟಿ ನನಗಾಗಲೇ ಸುಕೃತ ಎನ್ನುವ ಹುಡುಗಿಯೊಂದಿಗೆ ಮದುವೆ ಫಿಕ್ಸ್ ಆಗಿದೆ ಎಂದು ಹೇಳುತ್ತಾರೆ.

 

 

ತದ ನಂತರ ಸುಕೃತಾಗೆ ಕಾಲ್ ಮಾಡಿದ ಶೈನ್ ಶೆಟ್ಟಿ ಚಿನ್ನು ಮುದ್ದು ಎಂದೆಲ್ಲ ಕರೆದಿದ್ದಾರೆ. ಇದೀಗ ಈ ವಿಡಿಯೋ ವೈರಲ್ಲಾಗಿದ್ದು ಆ ನಟಿ ಕಿರುತೆರೆಯ ಸುಕೃತ ಎನ್ನಲಾಗಿದೆ. ಕಿರುತೆರೆಯ ನಟಿ ಸುಕೃತಾ ರವರು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅಂಜಲಿ ಎನ್ನುವ ಪಾತ್ರವನ್ನು ಮಾಡುತ್ತಿದ್ದರು ಆ ಪಾತ್ರದಿಂದ ಅವರು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡರು ಇದೀಗ ಲಕ್ಷಣ ಎನ್ನುವ ಧಾರಾವಾಹಿಯಲ್ಲಿ ಸುಕೃತಾ ರವರು ನಟಿಸುತ್ತಿದ್ದಾರೆ.

ಶೈನ್ ಶೆಟ್ಟಿ ಕೂಡ ಬಿಗ್ ಬಾಸ್ ಮನೆಯಿಂದ ಹೊರ ಬರುವ ಮೊದಲೇ ಲಕ್ಷ್ಮಿ ಬಾರಮ್ಮ, ಮೀರಾ ಮಾಧವ ಮುಂತಾದ ಧಾರವಾಹಿಗಳಲ್ಲಿ ನಟಿಸಿದ್ದರು. ತದನಂತರ ಬಿಗ್ ಬಾಸ್ ಮನೆಗೆ ಹೋಗಿ ಅದರಲ್ಲಿ ಗೆದ್ದು ಹೊರ ಬಂದರು ಬಿಗ್ ಬಾಸ್ ನ ವಿನ್ನರ್ ಆದ ನಂತರ ಯಾವುದೇ ಧಾರವಾಹಿಯಲ್ಲಿ ಶೈನ ಶೆಟ್ಟಿ ಕಾಣಿಸಿಕೊಂಡಿಲ್ಲ ಸ್ಟೈಲ್ ಐಕನಾಗಿ ಹಲವಾರು ಜಾಹೀರಾತುಗಳಲ್ಲಿ ಕೂಡ ಶೈನ್ ಶೆಟ್ಟಿ ನಟಿಸಿದ್ದಾರೆ. ಇತ್ತೀಚಿಗಷ್ಟೇ ಬಿಡುಗಡೆಯಾದ ರಿಷಬ್ ಶೆಟ್ಟಿ(Rishabh Shetty) ನಿರ್ದೇಶನದ ಕಾಂತರಾ(Kantara) ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕೂಡ ಶೈನ್ ಶೆಟ್ಟಿ ನಟಿಸಿದ್ದಾರೆ.

Leave a Reply

Your email address will not be published.


*