ಜೀ ಕನ್ನಡ ವಾಹಿನಿ ಪ್ರಸಾರವಾಗುತ್ತಿದ್ದ ನಾಗಿಣಿ ಧಾರಾವಾಹಿಯ ಮೂಲಕ ಕನ್ನಡದ ಕಿರುತೆರೆಯ ಲೋಕಕ್ಕೆ ದೀಪಿಕಾ ದಾಸ್ ಪರಿಚಯವಾಗಿದ್ದರು ನಾಗಿಣಿ ಧಾರಾವಾಹಿ ಮುಗಿಸಿದ ನಂತರ ಬಿಗ್ ಬಾಸ್ ಸೀಸನ್ 8 ಹಾಗೂ ಬಿಗ್ ಬಾಸ್ ಸೀಸನ್ 9ರಲ್ಲು ದೀಪಿಕಾ ದಾಸ್ ಕಾಣಿಸಿಕೊಂಡಿದ್ದರು ಅಷ್ಟೇ ಅಲ್ಲದೆ ದೀಪಿಕಾ ದಾಸ್ ಕೆಜಿಎಫ್ ಚಿತ್ರದ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ರವರ ಸಂಬಂಧಿಕರಾಗಿದ್ದು ಆದರೂ ಕೂಡ ಅವರು ಎಲ್ಲಿಯೂ ಯಶ್ ಹೆಸರನ್ನು ಹೇಳಿಕೊಳ್ಳುವುದಿಲ್ಲ ದೀಪಿಕಾ ದಾಸ್ ಇದೀಗಾ ಬಿಗ್ ಬಾಸ್ ಸೀಸನ್ 9ರಿಂದ ಹೊರಬಂದು ಸಾಕಷ್ಟು ಸಂದರ್ಶನಗಳಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದಾರೆ.
ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 9ರಿಂದ ಹೊರಬಂದ ನಂತರ ಇವರ ಮದುವೆಯ ವಿಚಾರ ಸಾಕಷ್ಟು ಸುದ್ದಿಯಾಗುತ್ತಿದೆ. ಬಿಗ್ ಬಾಸ್ ಸೀಸನ್ ಎಂಟರಲ್ಲಿ ಶೈನ್ ಶೆಟ್ಟಿ ರವರ ಜೊತೆ ದೀಪಿಕಾ ದಾಸ್ ಮದುವೆಯಾಗುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು ಆದರೆ ಇದೀಗ ದೀಪಿಕಾ ದಾಸ್ ರವರ ಮದುವೆಯನ್ನು ಪ್ರಶಾಂತ್ ಸಂಪರ್ಗಿ ಮುಂದೆ ನಿಂತು ಮದುವೆ ಮಾಡಿಸುತ್ತಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
ದೀಪಿಕಾ ದಾಸ್ ರವರ ತಾಯಿ ಕೂಡ ಈ ಮೊದಲೇ ಸಂದರ್ಶನದಲ್ಲಿ ಮಾತನಾಡಿ ಪ್ರಶಾಂತ್ ಸಾಂಬರ್ಗಿ ದೀಪಿಕಾರವರ ಮದುವೆ ಮಾಡಿಸುತ್ತಾರೆ ಎಂದು ಹೇಳಿದರು ಪ್ರಶಾಂತ್ ಸಂಬರ್ಗಿ ಕಿರುಚಾಡಿಕೊಂಡು ಜಗಳ ಆಡುತ್ತಾ ಇರುತ್ತಾರೆ ಆದರೆ ಎಲ್ಲರಿಗೂ ಕಾಣುವಂತೆ ಅವರಲ್ಲ ಅವರ ಹಾರ್ಟ್ ತುಂಬಾ ಸೆನ್ಸಿಟಿವ್ ಅವರು ಅಣ್ಣನ ಸ್ಥಾನದಲ್ಲಿ ನಿಂತು ನನ್ನ ಮದುವೆ ಮಾಡಿಸುತ್ತೇನೆ ಎಂದು ಹೇಳುತ್ತಿದ್ದಾರೆ ಬಿಗ್ ಬಾಸ್ ಮನೆಯಿಂದ ಬಂದ ನಂತರ ಕೂಡ ನನ್ನ ತಾಯಿಯ ಜೊತೆ ಮಾತನಾಡಿ ಹೇಳಿಕೊಂಡಿದ್ದಾರೆ ಎಂದು ದೀಪಿಕಾ ದಾಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
2023ರಲ್ಲಿ ದೀಪಿಕಾ ದಾಸ್ ಮದುವೆಯಾಗುತ್ತಾರ ಎಂದು ಪ್ರಶ್ನಿಸಿದಾಗ ದೀಪಿಕಾ ಉತ್ತರಿಸಿ ನಾನು ಸಿಂಗಲ್ ಆಗಿರಬೇಕು ಹಾಗೆ ಸಾಕಷ್ಟು ಸಾಧನೆ ಮಾಡಬೇಕು ಸಿಂಗಲ್ ಆಗಿದ್ದಾಗ ಸಾಧನೆಗಳನ್ನು ಮಾಡಬಹುದು ಮದುವೆಯಾದರೆ ಸಾಧನೆ ಮಾಡುವುದು ಸ್ವಲ್ಪ ಕಷ್ಟವಾಗುತ್ತದೆ. ಇನ್ನು ನಾಲ್ಕು ವರ್ಷ ನಾನು ಮದುವೆಯಾಗುವುದಿಲ್ಲ ನನಗೆ ಮದುವೆಯಾಗುವಷ್ಟು ದೊಡ್ಡ ಏಜು ಕೂಡ ಆಗಿಲ್ಲ.
ನನ್ನನ್ನು ಮದುವೆಯಾಗುವ ಹುಡುಗ ಪ್ರಾಮಾಣಿಕವಾಗಿರಬೇಕು ಸುಳ್ಳು ಹೇಳಬಾರದು ಸೌಂದರ್ಯದ ಬಗ್ಗೆ ಏನು ಮಾತನಾಡುವುದಿಲ್ಲ ಒಳ್ಳೆಯ ಹೃದಯ ಇದ್ದರೆ ಸಾಕು ನನಗೆ ಎಲ್ಲಾ ವಿಚಾರದಲ್ಲೂ ಸಪೋರ್ಟ್ ಮಾಡುವ ಕ್ಯಾರೆಕ್ಟರ್ ಇರಬೇಕು ಫನ್ ಅಂಡ್ ಲವ್ವಿಂಗ್ ಕ್ಯಾರೆಕ್ಟರ್ ಆಗಿರಬೇಕು ಆದರೆ ನಾನು ಸದ್ಯಕ್ಕೆ ಮದುವೆಯಾಗುವುದಿಲ್ಲ 4 ವರ್ಷ ಕಳೆದ ನಂತರ ಈ ಕ್ವಾಲಿಟಿ ಇರುವ ಹುಡುಗರಿಗೆ ಆಫರ್ ಇದೆ ಎಂದು ತಮಾಷೆಯಾಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.