ಪ್ರತಿ ದಿನ ನಮ್ಮ ಸುತ್ತಮುತ್ತಲು ಒಂದಲ್ಲ ಒಂದು ಘಟನೆಗಳನ್ನು ನಾವು ನೋಡುತ್ತಿರುತ್ತೇವೆ ಆ ಘಟನೆಗಳೆಲ್ಲ ಚಿತ್ರ ವಿಚಿತ್ರವಾಗಿ ಇರುತ್ತವೆ. ಇತ್ತೀಚೆಗಂತು ಗಂಡ ಹೆಂಡಿರ ಸಂಬಂಧದಲ್ಲಿ ಬಿರುಕು ಮೂಡುವ ಘಟನೆಗಳು ಸರ್ವೇಸಾಮಾನ್ಯವಾಗಿ ಕೇಳ ಸಿಗುತ್ತವೆ. ಸ್ಮಾರ್ಟ್ ಫೋನ್ ಹುಟ್ಟಿಕೊಂಡ ಗಳಿಗೆಯಿಂದಲೂ ಕೂಡ ಕುಟುಂಬದಲ್ಲಿ ಫೋನಿನಿಂದಲೇ ಹಲವಾರು ಸಮಸ್ಯೆಗಳು ಕಾಡುತ್ತವೆ.
ಮೊಬೈಲ್ ಗಳಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ದುರುಪಯೋಗ ಕೂಡ ಇದೆ. ಟಿಕ್ ಟಾಕ್ , ರಿಲ್ಸ್ ಹಾಗೆ ಮುಂತಾದವುಗಳ ಹಿಂದೆ ಬಿದ್ದು ವಿಡಿಯೋಗಳನ್ನು ಮಾಡಿ ದೇಶದಾದ್ಯಂತ ಪ್ರಸಿದ್ಧಿ ಪಡೆದುಕೊಳ್ಳಬೇಕು ಎಂದು ಜನರಲ್ಲಿ ಆಸೆ ಹುಟ್ಟಿಬಿಟ್ಟಿದೆ. ಸಮಾಜಕ್ಕೆ ಉತ್ತಮ ರೀತಿಯಲ್ಲಿ ಸಂದೇಶವನ್ನು ನೀಡುವ ವಿಡಿಯೋಗಳು ಶಾರ್ಟ್ ಫಿಲಂ ಗಳು ನಾವು ಯೂಟ್ಯೂಬ್ ನಲ್ಲಿ ನೋಡುತ್ತಿರುತ್ತೇವೆ ಈ ಲೇಖನ ಕೂಡ ಅಂತಹದ್ದೇ ವಿಷಯವನ್ನು ಒಳಗೊಂಡಿದೆ.
ವ್ಯಕ್ತಿಯೊಬ್ಬ ಮನೆಯಲ್ಲಿ ಹಣ ಕಾಣಿಸುತ್ತಿಲ್ಲ ಎಂದು ತನ್ನ ಮನೆಯ ಕೆಲಸ ಮಾಡುವಳ ಬಳಿ ಹೋಗಿ ಹಣವನ್ನು ನೋಡಿರುವೆಯಾ ಎಂದು ವಿಚಾರಿಸುತ್ತಾನೆ ಆಗ ಆ ಮಹಿಳೆ ನಾನು ಹಣವನ್ನು ತೆಗೆದುಕೊಂಡಿಲ್ಲ ಎಂದು ರಂಪ ಮಾಡಿ ಉಟ್ಟ ಸೀರೆಯನ್ನು ಬಿಚ್ಚಿ ನೋಡಿಕೊಳ್ಳಿ ನಾನು ನಿಮ್ಮ ಹಣವನ್ನು ತೆಗೆದುಕೊಂಡಿಲ್ಲ ಎಂದು ಹೇಳುತ್ತಾಳೆ.
ಆಗ ಮನೆಯ ಯಜಮಾನ ಕೂಡ ಇವಳನ್ನು ನಂಬಿ ಮನೆ ಕೆಲಸದಾಕೆ ಹಣವನ್ನು ತೆಗೆದುಕೊಂಡಿಲ್ಲ ಎಂದು ಹೋಗುವಷ್ಟರಲ್ಲಿ ಪಕ್ಕದಲ್ಲಿ ನಿಂತಿದ್ದ ಮನೆ ಕೆಲಸದಾಕೆಯ ಮಗನನ್ನು ಒಮ್ಮೆ ಗಮನಿಸುತ್ತಾನೆ. ಅವನ ಪ್ಯಾಂಟಿನಿಂದ ಒಂದು ನೋಟು ಕೆಳಗೆ ಬೀಳುತ್ತದೆ ಇದನ್ನು ನೋಡಿದ ಮನೆ ಯಜಮಾನ ಅವನ ಪ್ಯಾಂಟ್ ತೆರೆದು ನೋಡುತ್ತಾನೆ.
ಕಂತೆ ಕಂತೆ ಹಣವನ್ನು ಮಗನ ಪ್ಯಾಂಟಿನಲ್ಲಿ ಇರುವುದನ್ನು ನೋಡಿ ಮನೆ ಯಜಮಾನ ಬೆಚ್ಚಿ ಬೀಳುತ್ತಾನೆ. ಮನೆ ಕೆಲಸದಾಕೆಗೆ ಆಗ ಸಿಕ್ಕಿಬಿದ್ದ ಭಯವಾಗಿ ಗಾಬರಿಯಾಗುತ್ತದೆ. ಆಗಲೇ ಮನೆ ಕೆಲಸದಾಕೆ ಒಂದು ನಾಟಕವನ್ನು ಶುರು ಮಾಡಿ ನಾನು ಈ ಸಂಕಟದಿಂದ ಪಾರಾಗಬೇಕು ಎಂದು ಮನೆಯ ಒಡೆಯರ ಬಳಿ ಜೋರಾಗಿ ಅಳುತ್ತಾ ಬಂದು ನನ್ನನ್ನು ಕ್ಷಮಿಸಿ ನಾನು ತುಂಬಾ ಬಡತನದಲ್ಲಿ ಬೆಳೆದಿದ್ದೇನೆ ನನ್ನ ಚಿಕ್ಕ ಮಗನ ಎದೆಯಲ್ಲಿ ತೂತಾಗಿದೆ ಅದರ ಆಪರೇಷನ್ ಮಾಡಿಸಲು ಹಣ ಬೇಕು ಎಂದೆಲ್ಲ ಸುಳ್ಳು ಹೇಳಿ ಮನೆ ಯಜಮಾನನನ್ನು ನಂಬಿಸುತ್ತಾಳೆ.
ಮನೆಯ ಯಜಮಾನ ಕೂಡ ಇವಳನ್ನು ನಂಬಿ ಆ ಹಣವನ್ನು ಮನೆ ಕೆಲಸದವಳಿಗೆ ನೀಡುತ್ತಾನೆ. ಮನೆ ಕೆಲಸದವಳು ತನಗೆ ಹಣ ಸಿಕ್ಕ ಖುಷಿಯಿಂದ ಮನೆಗೆ ಹೋಗೋಣವೆಂದು ಕೊಳ್ಳುತ್ತಾಳೆ. ಆಗ ಮನೆ ಕೆಲಸದಾಕೆ ಒಂದು ಕರೆ ಬರುತ್ತದೆ ಆ ಕರೆಯಲ್ಲಿ ನಿಮ್ಮ ಮಗಳಿಗೆ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿದೆ ಎಂದು ಯಾರೂ ಹೇಳುತ್ತಾರೆ ಇದನ್ನು ಕೇಳಿದ ಮನೆ ಕೆಲಸದಾಕೆ ದುಃಖದಿಂದ ಯಾರಿಗಾದರೂ ಮೋಸ ಮಾಡಿದರೆ ಕರ್ಮ ಹಿಂತಿರುಗಿಸಿ ನಮಗೆ ಕೊಡುತ್ತದೆ ಎಂದು ಅರಿತುಕೊಂಡು ಮನೆಯ ಕಡೆಗೆ ಓಡುತ್ತಾಳೆ.