ಅನಿರುದ್ ಎನ್ನುವ ಹೆಸರು ಕೇಳಿದ ತಕ್ಷಣ ಜೊತೆ ಜೊತೆಯಲಿ ದಾರಾವಾಹಿ ಆರ್ಯವರ್ಧನ್ ಎನ್ನುವ ಹೆಸರು ನೆನಪಿಗೆ ಬರುತ್ತದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲ್ಲಿ ದಾರವಾಹಿಯ ಮೂಲಕ ಅನಿರುದ್ರವರು ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದರು ಆದರೆ ಅಷ್ಟೇ ಬೇಗ ಧಾರವಾಹಿ ಇಂದ ಕೂಡ ಹೊರ ನಡೆದಿದ್ದಾರೆ. ಜೊತೆ ಜೊತೆಯಲಿ ಧಾರವಾಹಿಯ ನಿರ್ದೇಶಕರ ಜೊತೆ ಅನಿರುದ್ರವರಿಗೆ ಜಗಳವಾದ ಕಾರಣದಿಂದ ಜೊತೆ ಜೊತೆಯಲಿ ಧಾರವಾಹಿ ಇಂದ ನಟ ಅನಿರುದ್ಧರವರನ್ನು ಕೈ ಬಿಡಲಾಗಿದೆ. ಇದೀಗ ನಟ ಅನಿರುದ್ರ ವರಿಗೆ ಒಳ್ಳೆ ಕಾಲ ಕೂಡಿ ಬಂದಿದ್ದು instagram ನಲ್ಲಿ ಸಿಹಿ ಸುದ್ದಿಯನ್ನು ಅನಿರುದ್ರವರು ಫೋಟೋ ಹಾಗೂ ವಿಡಿಯೋಗಳ ಮೂಲಕ ಹಂಚಿಕೊಂಡಿದ್ದಾರೆ.
ಜೊತೆ ಜೊತೆಯಲಿ ಧಾರವಾಹಿಯ ನಿರ್ದೇಶಕ ಹಾಗೂ ಅನಿರುದ್ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾದ ಕಾರಣದಿಂದ ಜೊತೆ ಜೊತೆಯಲಿ ಧಾರವಾಹಿಯಿಂದ ನಟ ಅನಿರುದ್ಧ ರವರನ್ನು ಕೈ ಬಿಡಲಾಗಿತ್ತು. ನಟ ಅನಿರುದ್ಧ ರವರನ್ನು ಎರಡು ವರ್ಷಗಳ ಕಾಲ ಯಾವುದೇ ಕಾರ್ಯಕ್ರಮಗಳು ಅಥವಾ ದಾರವಾಹಿಗಳಲ್ಲಿ ಬಳಸಿಕೊಳ್ಳದಂತೆ ನಿರ್ಮಾಪಕರ ಸಂಘವು ಕೂಡ ಇವರನ್ನು ಕಿರುತೆರೆಯಿಂದ ಬ್ಯಾನ್ ಮಾಡಿತ್ತು. ಆದರೆ ಇದೀಗ ನಟ ಅನಿರುದ್ಧ ಮತ್ತೆ ಕಿರುತೆರೆಗೆ ಮರಳಿದ್ದಾರೆ.
ಕಿರುತೆರೆಯ ಮತ್ತೊಂದು ದಾರವಾಹಿಯ ಮೂಲಕ ನಟ ಅನಿರುದ್ಧ ಕಿರಿತೆರೆಯಲ್ಲಿ ಮತ್ತೊಮ್ಮೆ ಫೇಮಸ್ ಆಗುವುದಕ್ಕೆ ಬರುತ್ತಿದ್ದಾರೆ. ಉದಯ ಚಾನೆಲ್ ನಲ್ಲಿ ಸೂರ್ಯವಂಶ ಎಂದು ಹೊಸ ಧಾರವಾಹಿ ಎಂದು ಶುರುವಾಗುತ್ತಿದ್ದು ಆ ಧಾರವಾಹಿಯಲ್ಲಿ ನಟ ಅನಿರುದ್ಧ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಸೂರ್ಯವಂಶ ಧಾರವಾಹಿ ಹೀಗೆ ಕಲಾ ಸಾಮ್ರಾಟ್ ಎಸ್ ನಾರಾಯಣ ರವರು ಕಥೆ ರಚನೆಯನ್ನು ಮಾಡಿದ್ದು ನಿರ್ದೇಶನವನ್ನು ಕೂಡ ಮಾಡುತ್ತಿದ್ದಾರೆ. ಇದೀಗ ಅನಿರುದ್ ಮತ್ತೆ ಕಿರುತೆರೆಗೆ ಬರುತ್ತಿರುವುದು ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ.
ನಟ ಅನಿರುದ್ ಹೊಸ ಧಾರವಾಹಿ ಆದ ಸೂರ್ಯವಂಶ ಧಾರವಾಹಿಯ ಬಗ್ಗೆ ತಮ್ಮ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಅಕೌಂಟ್ ಗಳಲ್ಲಿ ಹಂಚಿಕೊಂಡಿದ್ದು ನನಗೆ ಈ ಸಿಹಿ ಸುದ್ದಿ ಎಂದು ಹಂಚಿಕೊಳ್ಳಲು ತುಂಬಾ ಸಂತೋಷವಾಗುತ್ತಿದೆ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂರ್ಯವಂಶ ಎನ್ನುವ ದಾರವಾಹಿಯಲ್ಲಿ ನಾನು ನಟಿಸುತ್ತಿದ್ದೇನೆ. ಈ ಧಾರಾವಾಹಿಯು ಕಲಾ ಸಾಮ್ರಾಟ್ ಎಸ್ ನಾರಾಯಣ್ ರವರ ರಚನೆ ಹಾಗೂ ನಿರ್ದೇಶನವನ್ನು ಒಳಗೊಂಡಿದೆ.
ಸೂರ್ಯವಂಶ ಧಾರಾವಾಹಿಯಲ್ಲಿ ನಾನು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದು ಇದು ನಿಮ್ಮೆಲ್ಲರ ಆಶೀರ್ವಾದ ಹಾರೈಕೆಯಿಂದ ಸಾಧ್ಯವಾಗಿದೆ. ನೀವು ಇನ್ನು ಮುಂದೆ ಕೂಡ ನನ್ನ ಜೊತೆಗೆ ಇರುತ್ತೀರಿ ಎಂದು ನಾನು ನಂಬುತ್ತೇನೆ ಎಂದು ತಮ್ಮ instagram ಹಾಗೂ facebook ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಹೊಸ ಧಾರವಾಹಿಯಾದ ಸೂರ್ಯವಂಶ ಧಾರವಾಹಿಗೆ ಇದೀಗಾಗಲೇ ಫೋಟೋಶೂಟ್ ನಡೆಯದಿದ್ದು ಎಸ್ ನಾರಾಯಣ್ ಹಾಗೂ ಅನಿರುದ್ರವರು ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಅನಿರುದ್ಧ ಇನ್ಸ್ಟ ಗ್ರಾಂ ಹಾಗೂ ಫೇಸ್ಬುಕ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.