ಕುಮಾರಸ್ವಾಮಿ ಹಾಗೂ ಅನಿತಾ ದಂಪತಿಗಳ ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಚಿತ್ರ ನಿರ್ಮಾಪಕ ಕೆ ಸಿ ಎನ್ ಮೋಹನ್ ರವರ ಪುತ್ರಿ ಸ್ವಾತಿ ನಡುವೆ ನಡೆದಿದ್ದ ನಿಶ್ಚಿತಾರ್ಥ ಮುರಿದು ಬಿದ್ದಿರುವ ವಿಚಾರ ಎಲ್ಲರಿಗೂ ಕೂಡ ಗೊತ್ತಿದೆ. ನಿಶ್ಚಿತಾರ್ಥ ಮುರಿದು ಬಿದ್ದ ನಂತರ ನಿಖಿಲ್ ಕುಮಾರಸ್ವಾಮಿ ರೇವತಿ ರವರನ್ನು ಮದುವೆಯಾಗಿದ್ದಾರೆ ಇವರಿಬ್ಬರಿಗೂ ಇದಾಗಲೇ ಅವ್ಯನ್ ದೇವ್ ಎನ್ನುವ ಮಗ ಕೂಡ ಇದ್ದು ನಿಖಿಲ್ ಕುಮಾರಸ್ವಾಮಿ ತಮ್ಮ ಪತ್ನಿ ಹಾಗೂ ಮಗನೊಂದಿಗೆ ಸುಖ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಈಗ ನಿಖಿಲ್ ಕುಮಾರಸ್ವಾಮಿ ಜೊತೆ ನಿಶ್ಚಿತಾರ್ಥ ಮುರಿದುಕೊಂಡಿದ್ದ ಹುಡುಗಿ ಸ್ವಾತಿ ಬೇರೆಯವರನ್ನು ಮದುವೆಯಾಗಲು ಸಜ್ಜಾಗಿದ್ದಾರೆ.
ನಿರ್ಮಾಪಕ ಕೆ ಸಿ ಎಂ ಮೋಹನ್ ರವರು ತಮ್ಮ ಪುತ್ರಿ ಸ್ವಾತಿಯನ್ನು ಕುಮಾರಸ್ವಾಮಿರವರ ರಾಜಕೀಯ ಎದುರಾಳಿಯಾದ ಶ್ರೀಕಂಠಯ್ಯ ರವರ ಮೊಮ್ಮಗ ನೇಹಾನಿಶ್ ರವರಿಗೆ ತಮ್ಮ ಮಗಳು ಸ್ವಾತಿಯನ್ನು ಮದುವೆ ಮಾಡಿಕೊಡಲು ಮುಂದಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಶ್ರೀಕಂಠಯ್ಯರವರ ಮೊಮ್ಮಗನಾಗಿರುವ ನೀಹನಿಶ್ ರವಿಕುಮಾರ್ ನಿಖಿಲ್ ಕುಮಾರಸ್ವಾಮಿರವರ ಮಾಜಿ ಪ್ರೇಯಸಿ ಸ್ವಾತಿ ಮದುವೆಯಾಗುತ್ತಿದ್ದಾರೆ.
ಕಳೆದ ತಿಂಗಳು ಅಷ್ಟೇ ಸ್ವಾತಿ ಹಾಗೂ ಶ್ರೀಕಂಠಯ್ಯ ರವರ ಮೊಮ್ಮಗ ನೀಹನಿಶ್ ರವಿಕುಮಾರ್ ನಿಶ್ಚಿತಾರ್ಥ ಕೂಡ ನಡೆದಿದೆ. ರಾಜಕೀಯದ ಹಲವಾರು ಗಣ್ಯರು ಹಾಗೂ ಸ್ಯಾಂಡಲ್ವುಡ್ನ ಗಣ್ಯರು ಕೂಡ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದು ಮುಂದಿನ ವರ್ಷ ಇವರಿಬ್ಬರು ಮದುವೆಯಾಗುತ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
2018 ಮೇ 20ರಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರವರ ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ನಿರ್ಮಾಪಕ ಕೆ ಸಿ ಎಂ ಮೋಹನ್ ಪುತ್ರಿ ಸ್ವಾತಿರವರಿಗೆ ಎಂಗೇಜ್ಮೆಂಟ್ ನಡೆದಿತ್ತು ಕೆಸಿಎಂ ಮೋಹನ್ ನಿವಾಸದಲ್ಲಿ ಈ ನಿಶ್ಚಿತಾರ್ಥ ನಡೆದಿದ್ದು ಎರಡು ಕುಟುಂಬದ ಸದಸ್ಯರು ಕೂಡ ಹಾಜರಿದ್ದರು.
ನಿಶ್ಚಿತಾರ್ಥದ ನಂತರ ಕುಮಾರಸ್ವಾಮಿ ರವರ ಮನೆಯ ಸಮಾರಂಭಗಳಲ್ಲಿ ಸ್ವಾತಿ ಭಾಗವಹಿಸಿದ್ದರು ಕೆಲ ಕಾಲದ ನಂತರ ಇವರಿಬ್ಬರ ಮದುವೆ ವಿಚಾರ ನಿಂತೆ ಹೋಗಿತ್ತು ನಿಖಿಲ್ ಕುಮಾರಸ್ವಾಮಿ ಹಾಗೂ ಸ್ವಾತಿ ಉಂಗುರ ಬದಲಾಯಿಸಿಕೊಂಡು ಸಾಕಷ್ಟು ತಿಂಗಳುಗಳು ಕಳೆದ ನಂತರವೂ ಇವರಿಬ್ಬರ ಮದುವೆಯ ಬಗ್ಗೆ ಯಾವುದೇ ಸುದ್ದಿ ಹೊರಬರಲಿಲ್ಲ ಇಷ್ಟು ದಿನಗಳ ಅಂತರ ಕಾಯ್ದುಕೊಂಡಿದ್ದರಿಂದ ಇವರ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎಂದು ಆ ಸುದ್ದಿ ಎಲ್ಲಾ ಕಡೆ ಹಬ್ಬಿತು.
ಇವರಿಬ್ಬರ ನಿಶ್ಚಿತಾರ್ಥ ಯಾಕೆ ಮುರಿದು ಬಿದ್ದಿದೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿಯನ್ನು ನಿಖಿಲ್ ಕುಮಾರಸ್ವಾಮಿ ಮನೆಯವರಾಗಲಿ ಅಥವಾ ಸ್ವಾತಿ ಮನೆಯವರಾಗಲಿ ನೀಡಿಲ್ಲ ಇದೀಗಾಗಲೇ ನಿಖಿಲ್ ಕುಮಾರಸ್ವಾಮಿ ರೇವತಿ ರವರನ್ನು ವಿವಾಹವಾಗಿದ್ದು ಅವರಿಗೆ ಅವ್ಯಾನ್ ದೇವ್ ಎನ್ನುವ ಮುದ್ದಾದ ಗಂಡು ಮಗು ಕೂಡ ಇದೆ.