ಪಂಚರಂಗಿ ಸಿನಿಮಾ ಬೆಡಗಿ ನಿಧಿ ಸುಬ್ಬಯ್ಯ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದ್ದರು ಆದರೆ ಅವರ ಜೀವನದ ನೋವಿನ ಕಥೆ ಮಾತ್ರ ಯಾರಿಗೂ ತಿಳಿಯದೆ ರಹಸ್ಯವಾಗಿ ಉಳಿದುಕೊಂಡಿದೆ. ನಿಧಿ ಸುಬ್ಬಯ್ಯ ರವರ ಜೀವನದಲ್ಲಿ ನಡೆದ ತಿಳಿದುಕೊಂಡ ನಂತರ ಗಾಸಿಗೊಳ್ಳುವಂತಹ ವಿಚಾರವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

 

 

ಸದ್ಯಕ್ಕೆ ನಿಧಿ ಸುಬ್ಬಯ್ಯ ಸಾಕಷ್ಟು ಟ್ರೆಂಡಿಂಗ್ ನಲ್ಲಿ ಇರುವುದಕ್ಕೆ ಕಾರಣ ಬಿಗ್ ಬಾಸ್ ತಮ್ಮ ಲವಲವಿಕೆ ನೇರ ಮಾತುಗಳ ಮೂಲಕಾ ಬಿಗ್ ಬಾಸ್ ವೀಕ್ಷಕರ ಮನ ಗೆದ್ದಿದ್ದಾರೆ. ಟಾಸ್ಕ್ ಮನರಂಜನೆ ಮೂಲಕ ತಾನು ನಗುತ್ತಾ ತನ್ನವರನ್ನು ನಗಿಸುತ್ತಾರೆ. ಕ್ವೀನ್ ಎನ್ನುವ ಪಟ್ಟವನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ.

 

 

ಈ ಕ್ಯೂಟ್ ಸ್ಮೈಲ್ ಹಿಂದೆ ಕಾಣದ ನೋವಿನ ಕಥೆ ಇದೆ. ಫೆಬ್ರವರಿ 17 2018 ರಂದು ನಿಧಿ ಸುಬ್ಬಯ್ಯ ಲವೀಶ್ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ದರು ಲವೀಶ್ ಸೋಶಿಯಲ್ ಮೀಡಿಯಾ ಮುಖಾಂತರ ನಿಧಿ ಸುಬ್ಬಯ್ಯ ರವರನ್ನು ಮೀಟ್ ಮಾಡಿ ಡೇಟಿಂಗ್ ಕೂಡ ಹೋಗಿ ಬಹಳಷ್ಟು ದಿನಗಳ ಕಾಲ ಆತ್ಮೀಯ ಗೆಳೆಯರಾಗಿದ್ದರು. ನಂತರ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿ ಕೊಡವ ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಲವೀಶ್ ಮೂಲತಃ ಮುಂಬೈನವರಾಗಿದ್ದು ಬಹಳಷ್ಟು ಶ್ರೀಮಂತ ಕುಟುಂಬದವರಾದಿದ್ದರು ಇವರಿಬ್ಬರ ಪ್ರೀತಿ ಮದುವೆಯಾದ ನಂತರ ಬಹಳ ಅನ್ಯೂನ್ಯತೆಯಿಂದ ನಡೆದಿತ್ತು.

 

 

ಹೀಗಾಗಿ ನಿಧಿ ಸುಬ್ಬಯ್ಯ ಫಿಲಂ ಇಂಡಸ್ಟ್ರಿ ಇಂದ ದೂರ ಉಳಿದರು ಹಾಗೆ ಅಭಿಮಾನಿಗಳಿಂದ ಕೂಡ ದೂರ ಉಳಿದರು ಆದರೆ ಎರಡು ಸಾವಿರದ ಹತ್ತೊಂಬತ್ತರಲ್ಲಿ ನಿಧಿ ಸುಬ್ಬಯ್ಯ ರವರ ಬದುಕಿನಲ್ಲಿ ಕಿಡಿ ಹೊತ್ತಲು ಶುರುವಾಗುತ್ತದೆ. ಪದೇ ಪದೇ ಭಿನ್ನಾಭಿಪ್ರಾಯ ಮೂಡಿ ವೈವಾಹಿಕ ಜೀವನದಲ್ಲಿ ಬಿರುಕು ಮೂಡಲು ಶುರುವಾಗುತ್ತದೆ.

 

 

ಮುಂದೆ ಎಂದೆಂದಿಗೂ ಜೊತೆ ಬಾಳಲು ಸಾಧ್ಯವೇ ಇಲ್ಲ ಎಂದು ಅರಿತ ಈ ದಂಪತಿಗಳು ದೂರವಾಗುತ್ತಾರೆ. ತದನಂತರ ನಿಧಿ ಸುಬ್ಬಯ್ಯ ಎಲ್ಲಿಯೂ ಕೂಡ ಕಾಣಿಸಿಕೊಳ್ಳುವುದಿಲ್ಲ ನಿಧಿ ಸುಬ್ಬಯ್ಯ ಯಾವುದೇ ಕಾರ್ಯಕ್ರಮಗಳನ್ನು ಕೂಡ ತಮ್ಮ ವೈವಾಹಿಕ ಜೀವನದ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ ಆದರೆ ಲವೀಶ್ ಮಾತ್ರ ನಿಧಿ ಸುಬ್ಬಯ್ಯ ರವರನ್ನು ಬಿಟ್ಟ ನಂತರ ಬೇರೆ ಹುಡುಗಿಯ ಜೊತೆ ಸಂಬಂಧ ಬೆಳೆಸಿಕೊಂಡು ಓಡಾಡುತ್ತಿದ್ದಾನೆ. ಆದರೆ ಇದ್ಯಾವುವುದನ್ನು ಪ್ರಶ್ನೆ ಮಾಡಲು ಹೋಗುವುದಿಲ್ಲ ತನ್ನಲ್ಲೇ ಎಲ್ಲಾ ನೋವುಗಳನ್ನು ಇಟ್ಟುಕೊಂಡು ಕೊರಗುತ್ತಾ ಇರುತ್ತಾರೆ. ಆ ಸಂದರ್ಭದಲ್ಲಿ ನಿಧಿ ಸುಬ್ಬಯ್ಯ ರವರನ್ನು ಕೈ ಹಿಡಿದದ್ದು ಬಿಗ್ ಬಾಸ್ ಬಿಗ್ ಬಾಸ್ ನಿಂದ ಅವರ ಬಂದ ನಿಧಿ ಸುಬ್ಬಯ್ಯ ಸಾಕಷ್ಟು ಅಭಿಮಾನಿಗಳನ್ನು ಹಾಗೂ ಆತ್ಮೀಯ ಗೆಳೆಯರನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನಾದರೂ ನಿಧಿ ಸುಬ್ಬಯ್ಯ ರವರ ಬದುಕಿನಲ್ಲಿ ಬಿರುಗಾಳಿ ಹೋಗಿ ತಂಗಾಳಿ ಬರಲಿ ಎಂದು ಆಶಿಸೋಣ

Leave a comment

Your email address will not be published. Required fields are marked *