1989 ರಲ್ಲಿ ತೆರೆ ಕಂಡ ನಂಜುಡಿ ಕಲ್ಯಾಣ ಚಿತ್ರ ಅಂದಿನ ಕಾಲದ ಸೂಪರ್ ಡೂಪರ್ ಹಿಟ್ ಚಿತ್ರವಾಗಿತ್ತು ಪಾರ್ವತಮ್ಮ ರಾಜಕುಮಾರ್ ಈ ಚಿತ್ರದ ನಿರ್ಮಾಪಕರಾಗಿದ್ದರು ನಂಜುಂಡಿ ಕಲ್ಯಾಣ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಹಾಗೂ ಮಾಲಾಶ್ರೀ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು ಆ ಕಾಲದ ಜನರ ಬಾಯಿಂದ ಈ ಚಿತ್ರದ ಬಗ್ಗೆ ಸಾಕಷ್ಟು ಪ್ರಶಂಸೆ ಕೇಳಿ ಬಂದಿತ್ತು ನಂಜುಂಡಿ ಕಲ್ಯಾಣ ಚಿತ್ರದ ಬಗ್ಗೆ ಕೇಳಿ ಬಂದಿದ್ದ ಪಾಸಿಟಿವ್ ಕಮೆಂಟ್ ಗಳಲ್ಲಿ ಹೆಚ್ಚಾಗಿ ನಟಿ ಮಾಲಾಶ್ರೀರವರ ಬಗ್ಗೆ ಇತ್ತು.

 

 

ನಟಿ ಮಾಲಾಶ್ರೀ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಯುವಕರ ಕನಸಿನಲ್ಲಿ ಬಂದು ಕಾಡುತ್ತಿದ್ದರು ಅಂತಹ ಚೆಲುವೆಯಾಗಿದ್ದರು ಕನ್ನಡ ಚಿತ್ರರಂಗದ ನಿರ್ಮಾಪಕರು ನಿರ್ದೇಶಕರು ತಂತ್ರಜ್ಞರು ಹಾಗೂ ಪ್ರೇಕ್ಷಕರು ಕೂಡ ಇವರನ್ನು ಕಂಡು ಯಾರು ಈ ಸುಂದರ ಹುಡುಗಿ ಇವರು ತಮ್ಮ ಮೊದಲ ಚಿತ್ರದ ಮೂಲಕವೇ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇವರಿಗೆ ಮುಂದೆ ಚಿತ್ರರಂಗದಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ಹೇಳುತ್ತಿದ್ದರು.

 

 

ಜನರು ಮಾಲಾಶ್ರೀರವರ ಬಗ್ಗೆ ಹೇಳಿರುವ ಮಾತುಗಳು ನಿಜವಾಗಿತ್ತು ರಾಘವೇಂದ್ರ ರಾಜ್‌ಕುಮಾರ್ ಜೊತೆ ಹಟಮಾರಿ ಹೆಣ್ಣಿನ ಪಾತ್ರದಲ್ಲಿ ನಂಜುಂಡಿ ಕಲ್ಯಾಣ ಚಿತ್ರದಲ್ಲಿ ನಟಿಸಿ ಫೇಮಸ್ ಆದ ನಂತರ ಹಠಮಾರಿ ತನದ ಪಾತ್ರಗಳೇ ಇವರನ್ನು ಹುಡುಕಿಕೊಂಡು ಬಂದವು ರಾಘವೇಂದ್ರ ರಾಜಕುಮಾರ್, ಶಿವರಾಜ್ ಕುಮಾರ್, ಅಂಬರೀಶ್, ಸುನಿಲ್, ಶಶಿಕುಮಾರ್, ರವಿಚಂದ್ರನ್ ಇನ್ನು ಹಲವಾರು ಮೇರು ನಟರ ಜೊತೆ ಮಾಲಾಶ್ರೀ ನಟಿಸಿದ್ದರು.

 

 

ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಚಿತ್ರರಂಗದಲ್ಲೂ ಕೂಡ ಟಾಪ್ ನಟರ ಜೊತೆ ಮಾಲಾಶ್ರೀ ನಟಿಸಿದ್ದಾರೆ. ಕಾಲಂತ್ಯದಲ್ಲಿ ಮಾಲಾಶ್ರೀ ದಪ್ಪವಾದ ಕಾರಣ ಇವರಿಗೆ ಆಫರ್ಗಳು ಕಡಿಮೆಯಾದವು ಇದರಿಂದಲೂ ಕೂಡ ಬೇಸರ ಪಡೆದ ಮಾಲಾಶ್ರೀ ದಿಟ್ಟ ಪೊಲೀಸ್ ಆಫೀಸರ್ ಪಾತ್ರಗಳು ಹಾಗೂ ಮಹಿಳಾ ಪ್ರಧಾನ ಪಾತ್ರಗಳ ಸಿನಿಮಾಗಳನ್ನು ಮಾಡುತ್ತಿದ್ದರು.

 

 

ಲೇಡಿ ಕಮಿಷನರ್ ಚಿತ್ರ ಇವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿದ್ದು ಯಾವ ಹೀರೋಗೂ ಕಡಿಮೆ ಇಲ್ಲ ಎನ್ನುವಂತೆ ಮಾಲಾಶ್ರೀ ಸಿನಿಮಾಗಳಲ್ಲಿ ಫೈಟ್ ಮಾಡುತಿದ್ದರು ಚಾಮುಂಡಿ, ದುರ್ಗಿ ,ಕನ್ನಡದ ಕಿರಣ್ ಬೇಡಿ ಇನ್ನು ಮುಂತಾದ ಚಿತ್ರಗಳಿಗೆ ನಟಿ ಮಾಲಾಶ್ರೀ ನಾಯಕಿಯಾಗಿ ನಟಿಸಿದ್ದಾರೆ ತದನಂತರ ಇವರು ನಿರ್ಮಾಪಕ ರಾಮು ರವರನ್ನು ಮದುವೆಯಾದರು ಮಾಲಾಶ್ರೀರವರಿಗೆ ಒಬ್ಬ ಮಗ ಹಾಗೂ ಮಗಳು ಇದ್ದಾರೆ. ಮಾಲಾಶ್ರೀ ರವರ ಮಗನ ಹೆಸರು ಆರನ್ ಹಾಗೂ ಮಗಳ ಹೆಸರು ರಾಧನ ರಾಮ್, ಮಾಲಾಶ್ರೀ ರವರ ಮಗಳು ದರ್ಶನ್ ಅಭಿನಯದ ಡಿ 56 ಹಾಗೂ ಧ್ರುವ ಸರ್ಜಾ ಅಭಿನಯದ ಕೇಡಿ ಚಿತ್ರಗಳಲ್ಲಿ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ

Leave a comment

Your email address will not be published. Required fields are marked *