ಡಿ ಬಾಸ್ ದರ್ಶನ್ ತಮ್ಮ ಕ್ರಾಂತಿ ಸಿನಿಮಾದ ಪ್ರಮೋಷನ್ ಗಾಗಿ ಹೊಸಪೇಟೆಗೆ ಹೋಗಿರುವ ಸಮಯದಲ್ಲಿ ಕಿಡಿಗೇಡಿ ಒಬ್ಬರು ದರ್ಶನ ಮೇಲೆ ಚಪ್ಪಲಿಯನ್ನು ಎಸೆದು ಅವಮಾನ ಮಾಡಿದ್ದಾರೆ. ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದಕ್ಕಾಗಿ ಅವರ ಅಭಿಮಾನಿಗಳೆಲ್ಲರೂ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರ ತಿಳಿದ ಸ್ಯಾಂಡಲ್ವುಡ್ ಸ್ಟಾರ್ ನಟ ನಟಿಯರು ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು ದರ್ಶನ್ ಮೇಲೆ ಚಪ್ಪಲಿ ಎಸೆದು ಗಲಾಟೆ ಮಾಡಿದ್ದು ಮನಸ್ಸಿಗೆ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.
ಕ್ರಾಂತಿ ಸಿನಿಮಾದ “ಬೊಂಬೆ ಬೊಂಬೆ” ಸಾಂಗ್ ರಿಲೀಸ್ ವೇಳೆ ಹೊಸಪೇಟೆಯಲ್ಲಿ ಗಲಾಟೆ ಏರ್ಪಟ್ಟಿದ್ದು ಪುನೀತ್ ರಾಜಕುಮಾರ್ ಹಾಗೂ ದರ್ಶನ್ ಅಭಿಮಾನಿಗಳು ಸಿಕ್ಕಾಪಟ್ಟೆ ಜಗಳ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳ ಗುಂಪಿನಿಂದ ಚಪ್ಪಲಿಯೊಂದು ತೂರಿ ಬಂದು ದರ್ಶನ್ ಮೇಲೆ ಬಿದ್ದಿದೆ ಇದರಿಂದ ಅಭಿಮಾನಿಗಳಿಗೆ ಮತ್ತಷ್ಟು ಕೋಪ ಹೆಚ್ಚಾಗಿ ದರ್ಶನ್ ಅಭಿಮಾನಿಗಳು ಅಪ್ಪು ಅಭಿಮಾನಿಗಳ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ನೆಚ್ಚಿನ ನಟನಾ ಡಿ ಬಾಸ್ ದರ್ಶನ್ ಬೆಂಬಲಕ್ಕೆ ಅವರ ಅಭಿಮಾನಿಗಳು ನಿಂತಿದ್ದು ಇದಕ್ಕೆ ಶಿವರಾಜ್ ಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಕಿಚ್ಚ ಸುದೀಪ್ ತಮ್ಮ ಗೆಳೆಯನ ಬಗ್ಗೆ ದೀರ್ಘ ಪತ್ರವನ್ನು ಬರೆದಿದ್ದಾರೆ. ಜಗ್ಗೇಶ್ ಸುಮಲತಾ ಅಂಬರೀಶ್ ಅಭಿಷೇಕ್ ಯಶ್ ಮುಂತಾದ ನಟನಟಿಯರೆಲ್ಲರೂ ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ.
ಹೊಸಪೇಟೆಯಲ್ಲಿ ಡಿ ಬಾಸ್ ದರ್ಶನ್ ಕ್ರಾಂತಿ ಸಿನಿಮಾದ ಪ್ರಮೋಶನ್ ವೇಳೆ ಈ ರೀತಿಯ ಘಟನೆ ನಡೆದಿದ್ದು ಅಭಿಮಾನದಿಂದ ಅಭಿಮಾನಿಗಳ ಮೇಲೆ ಕಲಾವಿದರ ಮೇಲೆ ಪ್ರೀತಿಯನ್ನು ತೋರಿಸಿ ದ್ವೇಷ ಗೌರವವನ್ನು ತೋರಿಸಬೇಡಿ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಟಾರ್ ನಟ ನಟಿಯರು ಬರೆದುಕೊಂಡಿದ್ದಾರೆ. ಚಿತ್ರರಂಗದ ಕಲಾವಿದರೆಲ್ಲರೂ ಒಂದೇ ಡಿ ಬಾಸ್ ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ವಿಚಾರ ಇದೀಗ ಬಾರಿ ಆಕ್ರೋಶಕ್ಕೆ ಒಳಗಾಗಿದ್ದು ದನ್ವೀರ್ ಗೌಡ ರಾಜವರ್ಧನ್ ನಿರ್ದೇಶಕ ಸುನಿ ಸೇರಿದಂತೆ ಹಲವರು ಇದನ್ನು ಖಂಡಿಸಿದ್ದಾರೆ.
ದರ್ಶನ್ ರವರ ಅಭಿಮಾನಿಗಳು ದರ್ಶನ್ ರವರನ್ನು ನೀವು ಮತ್ತೊಮ್ಮೆ ಹೊಸಪೇಟೆಗೆ ಬಂದು ಕ್ರಾಂತಿ ಸಿನಿಮಾದ ಟ್ರೈಲರ್ ಲಾಂಚ್ ಮಾಡಬೇಕು ಎಂದು ಮನವಿ ಮಾಡಿಕೊಂಡಾಗ ದರ್ಶನ್ ಕೂಡ ತುಂಬು ಹೃದಯದಿಂದ ಒಪ್ಪಿಕೊಂಡಿದ್ದಾರೆ. ಇದರಿಂದ ಅಭಿಮಾನಿಗಳೆಲ್ಲ ಖುಷಿಪಟ್ಟು ಶ್ರೀರಂಗಪಟ್ಟಣ ಮಂಡ್ಯ ಎಲ್ಲಾ ಕಡೆ ದರ್ಶನ್ ರವರ ಹಿಂದೆ ತಿರುಗಾಡುತ್ತಾ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದಾರೆ. ಇದೇ ವೇಳೆ ದರ್ಶನ್ ಗೆ ಹೊಸಪೇಟೆಯಲ್ಲಿ ಆದಂತಹ ಕೆಟ್ಟ ಅನುಭವಗಳು ಮತ್ತೆ ಆಗಬಾರದು ಎಂದು ದರ್ಶನ್ ರವರ ಸೆಕ್ಯೂರಿಟಿಯನ್ನು ಹೆಚ್ಚಿಸಿದ್ದು ನೂರಾರು ಪೊಲೀಸರು ಇವರ ಸೆಕ್ಯೂರಿಟಿಗಾಗಿ ಜೊತೆಗೆ ಇದ್ದಾರೆ.