ಬಿಗ್ ಬಾಸ್ ಇತಿಹಾಸದಲ್ಲೇ ಯಾರು ಪಡೆಯದಷ್ಟು ಸಂಭಾವನೆಯನ್ನು ಹೊತ್ತು ಹೊರ ನಡೆದ ಸಾನಿಯಾ ಅಯ್ಯರ್

ಬಿಗ್ ಬಾಸ್ ಮನೆಯಲ್ಲಿ ಸುಮಾರು 84 ದಿನಗಳ ಜರ್ನಿಯನ್ನು ಮುಗಿಸಿ ಸಾನಿಯಾ ಅಯ್ಯರ್ ಇದೀಗ ಬಿಗ್ ಬಾಸ್ ಶೋ ನಲ್ಲಿ ಐದನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಹೋಗಿದ್ದಾರೆ. ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅಯ್ಯರ್ ಅವರ ಪರ್ಫಾರ್ಮೆನ್ಸ್ ಇಂದ ಬಿಗ್ ಬಾಸ್ ಮನೆ ಹೆಚ್ಚು ಜನರಿಂದ ವೀಕ್ಷಿಸಲ್ಪಡುತ್ತಿತ್ತು ಆದರೆ ಈಗ ಸಾನಿಯಾ ಆಯ್ಯರ್ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದು ಅವರ ಅಭಿಮಾನಿಗಳಿಗೆ ಬೇಸರವನ್ನು ತಂದಿದೆ.

ಸಾನಿಯಾ ಆಯ್ಯರ್ ರವರು ಓ ಟಿ ಟಿ ವರ್ಷನಿಂದ ಬಿಗ್ ಬಾಸ್ ಸೀಸನ್ 9ಕ್ಕೆ ಬಂದವರು. ಇವರು ಪುಟ್ಟಗೌರಿ ಮದುವೆಯ ಮೂಲಕ ಕಿರುತೆರೆಯಲ್ಲಿ ಈಗಾಗಲೇ ಹಲವಾರು ಜನರ ಮನಸ್ಸನ್ನು ಗೆದ್ದಿದ್ದರು. ಈಗ ಮತ್ತೆ ಬಿಗ್ ಬಾಸ್ ಶೋ ಇಂದ ಜನರ ಮನಸ್ಸಿಗೆ ತುಂಬಾ ಹತ್ತಿರವಾಗಿದ್ದರು. ಆದರೆ, ಇದೀಗ ಬಿಗ್ ಬಾಸ್ ಮನೆಯಿಂದ ಸಾನಿಯಾ ರವರು ಹೊರ ನಡೆದಿದ್ದಾರೆ.

 

 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ ಎಂಬ ಧಾರವಾಹಿಯಲ್ಲಿ ಪುಟ್ಟಗೌರಿ ಎಂಬ ಪಾತ್ರವನ್ನು ಸಾನಿಯಾ ಅಯ್ಯರ್ ಅವರು ಮಾಡುತ್ತಿದ್ದರು. ಪುಟ್ಟಗೌರಿ ಮದುವೆ ಸೀರಿಯಲ್ ನಲ್ಲಿ ಸಾನಿಯಾ ಅಯ್ಯರ್ ಅವರೇ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ಸಾನಿಯಾರವರ ಅತ್ಯುತ್ತಮ ಪ್ರತಿಭೆಯನ್ನು ನೋಡಿ ಕನ್ನಡಿಗರು ಕೂಡ ಅವರ ನಟನೆಯನ್ನು ಮೆಚ್ಚಿದ್ದರು. ಪುಟ್ಟಗೌರಿ ಮದುವೆ ಧಾರವಾಹಿ 2012ರಲ್ಲಿ ಶುರುವಾಗಿತ್ತು 2017ರವರೆಗೆ ಸತತ ಎಂಟು ವರ್ಷಗಳ ಕಾಲ ಈ ಧಾರಾವಾಹಿ ನಡೆದಿತ್ತು. ನಂತರ ಪುಟ್ಟಗೌರಿ ಮದುವೆಯ ಸಾನಿಯಾ ಅಯ್ಯರ್ ಅವರು ತಮ್ಮ ಉನ್ನತ ವ್ಯಾಸಂಗದ ಕಡೆ ಗಮನವನ್ನು ಹರಿಸಿದರು. ನಂತರ ಯಾವುದೇ ಧಾರಾವಾಹಿ ಅಥವಾ ಶೋಗಳಲ್ಲಿ ಕಾಣಿಸಿಕೊಂಡಿರಲಿಲ್ಲ.

ಸಾನಿಯಾ ಅಯ್ಯರ್ ರವರು ತಮ್ಮ ವಿದ್ಯಾಭ್ಯಾಸವನ್ನೆಲ್ಲ ಮುಗಿಸಿದ ನಂತರ ಇದೀಗ ಡ್ಯಾನ್ಸಿಂಗ್ ಶೋ ನಲ್ಲೂ ಕೂಡ ಭಾಗವಹಿಸಿದ್ದರು. ನಂತರ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯ ಕ್ಯಾತ ನಟಿ ದೀಪ ಅಯ್ಯರ್ ಅವರ ಮಗಳು ಸಾನಿಯಾ ಅಯ್ಯರ್ ಇವರು 1998 ಸೆಪ್ಟೆಂಬರ್ 21ರಂದು ಬೆಂಗಳೂರಿನಲ್ಲಿ ಜನಿಸಿದರು.

 

 

ಸಾನಿಯಾ ಅಯ್ಯರ್ ರವರು ಮೌಂಟ್ ಕಾರ್ಮೆಲ್ ಸ್ಕೂಲ್ ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ನಂತರ ದಯಾನಂದ ಸಾಗರ ಯುನಿವರ್ಸಿಟಿಯಲ್ಲಿ ಮೀಡಿಯಾ ಸ್ಟಡಿಯನ್ನು ಮಾಡಿದ್ದಾರೆ. ತಮ್ಮ ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಸಾನಿಯಾ ಅಯ್ಯರ್ ಅವರು ಮತ್ತೆ ಟಿವಿ ಪರದೆಗಳ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸಾನಿಯಾ ಅಯ್ಯರ್ ರವರು ಸುರದ್ರೂಪಿ ಸುಂದರಿಯಾಗಿತ್ತು ನೋಡುವುದಕ್ಕೆ ಮುದ್ದಾಗಿದ್ದಾರೆ. ಇವರು 2015ರಲ್ಲಿ ಡ್ಯಾನ್ಸಿಂಗ್ ಶೋ ಒಂದರಲ್ಲಿ ಕೂಡ ಭಾಗವಹಿಸಿದ್ದರು. ಇದೀಗ ಬಿಗ್ ಬಾಸ್ ಸೀಸನ್ 9ರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವೂಟ್ ಸೆಲೆಕ್ಟನಲ್ಲಿ ಪ್ರಸಾರವಾಗುತ್ತಿದ್ದ ಓ ಟಿ ಟಿ ವರ್ಷನ್ ನಲ್ಲಿ ಸಾನಿಯಾ ಆಯ್ಯರ್ ರವರು ಸ್ಪರ್ಧಿಸುತ್ತಿದ್ದರು. ಓಟಿಟಿ ವರ್ಷನ್ ನಲ್ಲಿ ಟಾಪ್ 4ರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದರು. ಅಲ್ಲಿಂದಲೇ ಸಾನಿಯಾ ಅಯ್ಯರ್ ಅವರು ಬಿಗ್ ಬಾಸ್ ಮನೆಗೆ ಪ್ರವೇಶವನ್ನು ಪಡೆದು ಅಲ್ಲಿ ಕೂಡ ತಮ್ಮ ಪ್ರತಿಭೆಯ ಛಾಪನ್ನು ಮೂಡಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅಯ್ಯರ್ ಅವರು ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದು ಇದೀಗ ಬಿಗ್ ಬಾಸ್ ಮನೆಯಿಂದ ಸಾನಿಯಾ ಅಯ್ಯರ್ ಎಲಿಮಿನೇಟ್ ಹೊರಗೆ ನಡೆದಿದ್ದಾರೆ. ಹಾಗಾಗಿ ರೂಪೇಶ್ ಶೆಟ್ಟಿ ಒಂಟಿ ಪಯಣವನ್ನು ಮುಂದುವರಿಸುತ್ತಿದ್ದಾರೆ.

 

 

ಬಿಗ್ ಬಾಸ್ ಮನೆಯಲ್ಲಿ ಸಾನಿಯಾ ಹಾಗು ರೂಪೇಶ್ ಶೆಟ್ಟಿ ಅವರ ಸಂಬಂಧ ಮಿತಿಮೀರಿ ನಡೆಯುತ್ತಿದೆ ಎಂದು ಹಲವರ ವಾದವಾಗಿತ್ತು. ಇದರ ಬಗ್ಗೆ ಕಿಚ್ಚ ಸುದೀಪ್ ಕೂಡ ವಾರ್ನಿಂಗ್ ಅನ್ನು ನೀಡಿದ್ದರು. 26 ವರ್ಷ ವಯಸ್ಸಾಗಿರುವ ಸಾನಿಯಾ ತಮ್ಮ ಜೀವನದಲ್ಲಿ ಈಗಾಗಲೇ ಲವ್ ಅಂಡ್ ರಿಲೇಷನ್ಶಿಪ್ ನಲ್ಲಿ ಬಿದ್ದು ಬ್ರೇಕ್ ಅಪ್ ಕೂಡ ಆಗಿ ಜೀವನದಲ್ಲಿ ಹಲವಾರು ನೋವುಗಳನ್ನು ಅನುಭವಿಸಿದ್ದಾರೆ. ಹಾಗಾಗಿ ರೂಪೇಶ್ ಜೊತೆಗಿನ ಸ್ನೇಹವನ್ನು ಜನ ಪ್ರೀತಿ ಎಂದು ತಿಳಿದುಕೊಂಡಿದ್ದಾರೆ ಇದಕ್ಕೆ ಉತ್ತರವನ್ನು ಯಾರು ಕೂಡ ಸ್ಪಷ್ಟಪಡಿಸಿಲ್ಲ.

ಸಾನಿಯಾ ಅಯ್ಯರ್ ರವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರತಿಭೆಯಿಂದ ಜನರ ಮನಸ್ಸನ್ನು ಗೆದ್ದಿದ್ದರು. ಟಾಸ್ಕ್ ಗಳನ್ನು ಯಶಸ್ವಿಯಾಗಿ ಪೂರೈಸುತ್ತಿದ್ದರು ಮನರಂಜನೆಯ ವಿಷಯದಲ್ಲೂ ಕೂಡ ಸಾನಿಯಾ ಮುಂದಿದ್ದರು. ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿಯೂ ಕೂಡ ಮನೆಯ ಜವಾಬ್ದಾರಿಯನ್ನು ನಿಭಾಯಿಸಿದ್ದರು. ಸಾನಿಯಾ ಬಿಗ್ ಬಾಸ್ ಮನೆಯಿಂದ ಈಗ ಹೊರ ನಡೆದಿದ್ದು ಇವರಿಗೆ ಬಿಗ್ ಬಾಸ್ ಸುಮಾರು ಏಳು ಲಕ್ಷ ಸಂಭಾವನೆ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Be the first to comment

Leave a Reply

Your email address will not be published.


*