Sanju Basayya Marriage: ಸಂಜು ಬಸಯ್ಯ ಹುಟುಹಬ್ಬ ಮತ್ತು 7 ವರ್ಷಗಳ ಕಾಲ ಪ್ರೀತಿಸಿ ಪಲ್ಲವಿನ ಮದುವೆಯಾದ ಸಂಭ್ರಮ

Sanju Basayya: ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ಮೂಲಕ ರಾಜ್ಯದ ಜನತೆಗೆ ಪರಿಚಯವಾದ ಪ್ರತಿಭೆ ಸಂಜು ಬಸಯ್ಯ  (Sanju Basayya). ತಮ್ಮ ಹಾಸ್ಯದ ಮೂಲಕ ಖ್ಯಾತಿ ಗಳಿಸಿದ ಸಂಜು ಬಸಯ್ಯ ಇತ್ತೀಚೆಗೆ ತಮ್ಮ ಮದುವೆಯ ಸುದ್ದಿಯಲ್ಲಿದ್ದರು.

 

Sanju Basayya

 

7 ವರ್ಷಗಳಿಂದ ಪ್ರೀತಿಸುತ್ತಿದ್ದ ಕಲಾವಿದೆ ಪಲ್ಲವಿ ಬಳ್ಳಾರಿ ಅವರನ್ನು ಸಂಜು ಬಸಯ್ಯ ಅವರು ಇತ್ತೀಚೆಗೆ ವಿವಾಹವಾದರು. ಸಂಜು ಬಸಯ್ಯ ಕಳೆದ ಕೆಲ ದಿನಗಳ ಹಿಂದೆ ಮನೆಯವರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಯಾರಿಗೂ ಹೇಳದೆ ಮದುವೆಯಾಗಿದ್ದರು. ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಧಿಕೃತವಾಗಿ ತಿಳಿಸಿದ್ದರು.

 

Sanju Basayya

 

ಸಂಜು ಬಸಯ್ಯ ಮತ್ತು ಅವರ ಪತ್ನಿ ಪಲ್ಲವಿ ಅವರು ಜುಲೈ 30 ರಂದು ತಮ್ಮ ಮದುವೆಯ ಆರತಕ್ಷತೆಯನ್ನು ಆಚರಿಸುತ್ತಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅವರ ಹುಟ್ಟುಹಬ್ಬ ಮತ್ತು ಆರತಕ್ಷತೆ ಪಾರ್ಟಿಗೆ ತಮ್ಮ ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ. ಸಂಜು ಬಸಯ್ಯ ದಂಪತಿಗಳು ತಮ್ಮ ಮದುವೆಯ ಆರತಕ್ಷತೆಗೆ ಸೆಲೆಬ್ರಿಟಿಗಳನ್ನು ಆಹ್ವಾನಿಸಿದ್ದಾರೆ.ಸಂಜು ಬಸಯ್ಯ ಮತ್ತು ಪಲ್ಲವಿ ಮದುವೆಗೆ ಶಿವಣ್ಣ ಮತ್ತು ಸಂಗೀತ ನಿರ್ದೇಶಕ ಹರಿಕೃಷ್ಣ ಅವರನ್ನು ಆಹ್ವಾನಿಸಿದ್ದರು

 

Sanju Basayya

 

ಪಲ್ಲವಿ ಬಳ್ಳಾರಿ ಜುಲೈ 30 ರ ಭಾನುವಾರದಂದು ತಮ್ಮ ಪತಿ ಸಂಜು ಬಸಯ್ಯ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.ಪಲ್ಲವಿ ಬಳ್ಳಾರಿ ಕೂಡ ನಟಿ. ಅವರು ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ ಮತ್ತು ಸಂಜಯ್ ಬಸಯ್ಯ ಅವರೊಂದಿಗೆ ಅನೇಕ ನಾಟಕಗಳಲ್ಲಿ ನಟಿಸಿದ್ದಾರೆ.

ಪಲ್ಲವಿ ಸಂಜು ಬಸಯ್ಯ ಅವರ ಹುಟ್ಟುಹಬ್ಬವನ್ನು ಆಚರಿಸಿ ಕೇಕ್ ತಿನ್ನಿಸಿದರು.ಬೆಳಿಗ್ಗೆ ಮನೆಯಲ್ಲಿ ಹುಟ್ಟುಹಬ್ಬದ ಆಚರಣೆಯ ನಂತರ ಸಂಜೆಯ ಆರತಕ್ಷತೆಯಲ್ಲಿ ದಂಪತಿಗಳು ಮಿಂಚಿದರು.ಸಂಜು ಬಸಯ್ಯ ಮತ್ತು ಪಲ್ಲವಿ ಅವರ ಆತ್ಮೀಯರು ಆರತಕ್ಷತೆಗೆ ಆಗಮಿಸಿ ನವ ದಂಪತಿಗಳಿಗೆ ಉಡುಗೊರೆ ನೀಡಿ ಶುಭ ಹಾರೈಸಿದರು.

 

 

ಕಾಮಿಡಿ ಕಿಲಾಡಿಲು ಕಾರ್ಯಕ್ರಮದ ಸಂಜು ಬಸಯ್ಯ ಅವರ ಸ್ನೇಹಿತರು ಮತ್ತು ಅನೇಕ ಸಿನಿ ಗಣ್ಯರು ಆರತಕ್ಷತೆಗೆ ಆಗಮಿಸಿ ಮುದ್ದಾದ ಜೋಡಿಗೆ ಶುಭ ಹಾರೈಸಿದರು.ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಬೈಲಹೊಂಗಲದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.

 

 

ಮೂಲ: ಬೆಳಗಾವಿ ಜಿಲ್ಲೆಯ ಮುರಗೋಡು ಗ್ರಾಮದ ಸಂಜು ಬಸಯ್ಯ. ನಾಟಕ ಕಂಪನಿಗಳಲ್ಲಿ ಗುರುತಿಸಿಕೊಂಡಿದ್ದ ಸಂಜಯ ಬಸಯ್ಯ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ರಾಜ್ಯದ ಜನತೆಗೆ ಪರಿಚಯವಾದವರು. ಮದುವೆಗಾಗಿ ಶ್ರೀಮಂತಿಕೆ, ಸೌಂದರ್ಯ, ಜಾತಿ ನೋಡುವವರ ದಾರಿಯಲ್ಲಿ ಪ್ರೀತಿ ನಿಲ್ಲುವುದಿಲ್ಲ ಎಂಬುದನ್ನು ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಯಶಸ್ವಿಯಾಗಿ ತೋರಿಸಿಕೊಟ್ಟಿದ್ದಾರೆ.

Leave a Comment