ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ(putta Gowri maduve) ಎನ್ನುವ ಧಾರವಾಹಿಯ ಮೂಲಕ ನಟಿ ಸಾನಿಯಾ ಅಯ್ಯರ್(Sania Iyer) ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು ತದನಂತರ ಇವರು ಯಾವುದೇ ದಾರವಾಹಿ ಅಥವಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎನ್ನುವ ರಿಯಾಲಿಟಿ ಶೋ ಮೂಲಕ ರಿ ಎಂಟ್ರಿ ಕೊಟ್ಟ ಸಾನಿಯಾ ಅಯ್ಯರ್ ರವರು ಇದೀಗ ಬಿಗ್ ಬಾಸ್ ಸ್ಪರ್ಧೆಯು ಕೂಡ ಆಗಿ ಕರ್ನಾಟಕದ ಮನೆ ಮಾತಾಗಿದ್ದಾರೆ. ಸಾನಿಯಾ ಅಯ್ಯರ್ ರವರು ಬಿಗ್ ಬಾಸ್ ನಲ್ಲಿ ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ ಆಗಿದ್ದರು ಆದರೆ ಅವರು ಇಷ್ಟು ಬೇಗ ಎಲಿಮಿನೇಟ್ ಆಗುತ್ತಾರೆ ಎಂದು ಯಾರೂ ಕೂಡ ಊಹಿಸಿರಲಿಲ್ಲ ಇದೀಗ ಸಾನಿಯಾ ಅಯ್ಯರ್ ಅವರು ಮಾತನಾಡಿ ನನ್ನ ಮೈಮೇಲೆ ದೇವಿ ಬರುತ್ತಾಳೆ ಎಂದು ಹೇಳಿದ್ದಾರೆ.
ಸಾನಿಯಾ ಅಯ್ಯರ್ ಬಿಗ್ ಬಾಸ್ ಸೀಸನ್ 9ರ(bigg Boss season 9) ಸ್ಟ್ರಾಂಗೆಸ್ಟ್ ಕಂಟೆಂಟ್ ಕಂಟೆಸ್ಟೆಂಟ್ ಆಗಿದ್ದರು ಪುಟ್ಟಗೌರಿ ಮದುವೆ ದಾರವಾಹಿಯ ನಂತರ ಬಿಗ್ ಬಾಸ್ ನಿಂದ ಇವರು ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು ಬಿಗ್ ಬಾಸ್ ನಲ್ಲಿ ಸ್ಟ್ರಾಂಗೆಸ್ಟ್ ಕಂಟೆಂಟ್ ಕಂಟೆಸ್ಟೆಂಟ್ ಆಗಿದ್ದರೂ ಕೂಡ ಸಾನಿಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದರು ಬಿಗ್ ಬಾಸ್ ನೋಡುತ್ತಿದ್ದ ಸಾನಿಯಾ ಅಯ್ಯರ್ ಅಭಿಮಾನಿಗಳೆಲ್ಲರೂ ಇಷ್ಟು ಬೇಗ ಬಿಗ್ ಬಾಸ್ ಮನೆಯಿಂದ ಹೊರಗೆ ಬರುತ್ತಾರೆ ಎಂದು ಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಓ ಟಿ ಟಿ ಸೀಸನ್ ಪೂರ್ತಿ ಎಲ್ಲಾ ರೀತಿಯಲ್ಲೂ ಕೂಡ ಸಾನಿಯಾ ಅಯ್ಯರ್ ತಮ್ಮನ್ನು ತಾವು ತೊಡಗಿಸಿಕೊಂಡು ಮುಂದಿದ್ದರು ಸಾನಿಯಾ ಅಯ್ಯರ್ ಅಭಿಮಾನಿಗಳೆಲ್ಲರೂ ಕೂಡ ಸಾನಿಯಾ ಹೈಯರ್ ಬಿಗ್ ಬಾಸ್ ಫೈನಲ್ಸ್ ಗೆ (bigg Boss finals)ಬರುತ್ತಾರೆ. ಎಂದು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು ಆದರೆ ನಟಿ ಸಾನಿಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದಾಗ ಅವರ ಅಭಿಮಾನಿಗಳೆಲ್ಲರೂ ದುಃಖಿಸಿದ್ದಾರೆ. ಸಾನಿಯಾ ಅಯ್ಯರ್ ಆತ್ಮೀಯ ಗೆಳೆಯ ರೂಪೇಶ್ ಶೆಟ್ಟಿ(Rupesh Shetty) ಕೂಡ ಸಾನಿಯಾ ಅಯ್ಯರ್ ಎಲಿಮಿನೇಟ್ ಆಗಿದ್ದಕ್ಕೆ ಬೇಜಾರು ವ್ಯಕ್ತಪಡಿಸಿದ್ದಾರೆ.
ಸಾನಿಯಾ ಅಯ್ಯರ್ ಬಿಗ್ ಬಾಸ್ ನಲ್ಲಿ ಎಲ್ಲರಿಗಿಂತ ಮುಂದೆ ಇದ್ದರು ಆದರೆ ಇವರು ಕಿರುತೆರೆಯ ಬಿಗ್ ಬಾಸ್ ಗೆ ಬಂದ ನಂತರ ಯಾಕೋ ಚಟುವಟಿಕೆ ರಹಿತರಾದರು ಬಿಗ್ ಬಾಸ್ ಮನೆಗೆ ಬರುವುದಕ್ಕಿಂತ ಮೊದಲು ಇವರು ಪುಟ್ಟಗೌರಿ ಮದುವೆ ಎನ್ನುವ ಧಾರವಾಹಿಯಲ್ಲಿ ಗೌರಿ ಪಾತ್ರವನ್ನು ನಿಭಾಯಿಸುತ್ತಿದ್ದರು ಹಾಗೆಯೇ ಅರಸಿ ಎನ್ನುವ ಧಾರವಾಹಿಯಲ್ಲಿ ರಶ್ಮಿ ಪಾತ್ರವನ್ನು ಕೂಡ ಅಚ್ಚುಕಟ್ಟಾಗಿ ನಿಭಾಯಿಸಿದ್ದರು ಇದಾದ ನಂತರ ಡ್ಯಾನ್ಸಿಂಗ್ ಶೋಗಳಲ್ಲೂ ಕೂಡ ಕಾಣಿಸಿಕೊಂಡಿದ್ದರು.
ಸಾನಿಯಾ ಅಯ್ಯರ್ ಅವರು ಸ್ಪಷ್ಟ ಕನ್ನಡವನ್ನು ಮಾತನಾಡುತ್ತಿದ್ದು ಇವರು ಕನ್ನಡದ ಕುವರಿ ಆಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ(rashmika mandanna) ಕನ್ನಡ ಬರುವುದಿಲ್ಲ ಎಂದು ಹೇಳಿಕೆಗಳನ್ನು ಕೊಟ್ಟು ಎಲ್ಲಾ ಕಡೆ ಟ್ರೋಲ್ (troll)ಆಗಿದ್ದರು ಆದರೆ ನಟಿ ಸಾನಿಯಾ ಅಯ್ಯರ್ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಕನ್ನಡವನ್ನೇ ಬಳಸಿ ಕನ್ನಡತಿ(Kannadati) ಎನಿಸಿಕೊಂಡಿದ್ದಾರೆ. ಸಾನಿಯಾ ಅಯ್ಯರ್ ರವರ ತಾಯಿ ಸುನಿತಾರವರು ಧಾರವಾಹಿಗಳಲ್ಲಿ ಅಭಿನಯಿಸುತ್ತಾರೆ ಹಾಗೆ ಸಾನಿಯಾ ಅಯ್ಯರ್ ಚಿಕ್ಕಮ್ಮ ರೂಪಾ ಅಯ್ಯರ್ ಕೂಡ ಕನ್ನಡದ ನಿರ್ಮಾಪಕಿಯಾಗಿದ್ದಾರೆ.
ನಟಿ ಸಾನಿಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದು ಸಂದರ್ಶನದಲ್ಲಿ ಅವರು ಭಾರತೀಯ ಸಂಸ್ಕೃತಿಯ ಬಗ್ಗೆ ಹೇಳುವಾಗ ತನ್ನ ಹಳೆಯ ಘಟನೆಯನ್ನು ನೆನೆದಿದ್ದಾರೆ. ಈ ಘಟನೆಯನ್ನು ಕೇಳಿದ ನೆಟ್ಟಿಗರೆಲ್ಲರೂ ಇದನ್ನು ಬಹಳ ಚರ್ಚೆ ಕೂಡ ಮಾಡುತ್ತಿದ್ದಾರೆ.
ಸಾನಿಯಾ ಅಯ್ಯರ್ ಭಾರತೀಯ ಸಂಸ್ಕೃತಿಯ ಬಗ್ಗೆ ಮಾತನಾಡಿ ನಾನು ಒಮ್ಮೆ ದೇವಿಯ ಪಾತ್ರವನ್ನು ಮಾಡಬೇಕಾಗಿತ್ತು. ಅದಕ್ಕೆ ಎಲ್ಲಾ ತಯಾರಿಯನ್ನು ನಡೆಸಿಕೊಂಡಿದ್ದೆ ಹಲವಾರು ದಿನಗಳಿಂದ ನಾನು ಮಡಿವಂತಿಕೆಯಿಂದ ದೇವಿ ಪಾತ್ರಕ್ಕಾಗಿ ಯೋಜನೆಯನ್ನು ಹಾಕಿಕೊಂಡಿದ್ದು ದೇವಿಯ ಜೊತೆ ಮನಸ್ಸಿನಲ್ಲಿ ಮಾತಾಡಿಕೊಳ್ಳುತ್ತಿದ್ದೆ ದೇವರು ಎಲ್ಲರ ಮೈಮೇಲೆ ಬರುತ್ತಾರೆ ಎಂದು ಕೇಳಿದ್ದೇನೆ ಹಾಗಾದರೆ ನಾನು ಇಷ್ಟು ದಿನಗಳವರೆಗೂ ನಿನಗಾಗಿ ಮಡಿಯಿಂದ ಪೂಜಿಸುತ್ತಿದ್ದೇನೆ ನೀನು ನನ್ನ ಮೈಮೆಲು ಕೂಡ ಬರಬೇಕು ಎಂದು ನಾನು ಹಠ ಹಿಡಿದಿದ್ದರಿಂದ ದೇವಿ ಕೂಡ ನನ್ನ ಮೈ ಮೇಲೆ ಒಮ್ಮೆ ಬಂದಿದ್ದಳು. ಎಂದು ಹೇಳಿದ ಸಾನಿಯಾ ಅಯ್ಯರ್ ಭಾರತೀಯ ಸಂಸ್ಕೃತಿ ಸಂಪ್ರದಾಯ ಆಚರಣೆಗಳಲ್ಲಿ ಅಪಾರವಾದ ಶಕ್ತಿ ಇದ್ದು ಅದನ್ನು ಅಲ್ಲಗಳೆಯುವುದಕ್ಕೆ ಸಾಧ್ಯವೇ ಇಲ್ಲ ಎಂದು ದೃಢವಾಗಿ ಮಾತನಾಡಿದ್ದಾರೆ.