ಮದುವೆ ಎಂಬುದು ಅವರವರ ಜೀವನದ ವೈಯಕ್ತಿಕ ವಿಚಾರವಾದರೂ ಕೂಡ ನಟ ಅಥವಾ ನಟಿಯರ ವಿಷಯಕ್ಕೆ ಬಂದಾಗ ಅದು ವೈಯಕ್ತಿಕವೆನಿಸುವುದಿಲ್ಲ. ಎಶ್ಟೋ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಅಥವಾ ನಟಿಯ ಮದುವೆಯನ್ನು ನೋಡಿ ಕಣ್ತುಂಬಿಕೊಳ್ಳಬೇಕು ಎಂದು ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಆದರೆ, ಕೆಲವೊಮ್ಮೆ ನಟ ನಟಿಯರು ಯಾರಿಗೂ ಹೇಳದೆ ಗೌಪ್ಯವಾಗಿ ಮದುವೆಯಾಗಿ ಅಭಿಮಾನಿಗಳ ಆಸೆಗೆ ತಣ್ಣೀರನ್ನು ಎರಚುತ್ತಾರೆ.
ಇಂತಹ ನಟ ನಟಿಯರ ಬಗ್ಗೆ ತಿಳಿದುಕೊಳ್ಳಲು ತಮಗೂ ಕೂಡ ಕುತೂಹಲವಿದೆಯಾದರೆ ಈ ಕಂಪ್ಲೀಟ್ ಸ್ಟೋರಿಯನ್ನು ಓದಿ.
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ದಂಪತಿಗಳು
ಉಪೇಂದ್ರ ಅವರು 1968ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಹೆಸರು ಮಂಜುನಾಥ್ ರಾವ್ ಹಾಗೂ ತಾಯಿ ಹೆಸರು ಅನುಸೂಯ ಇವರು ಮೂಲತಹ ಕುಂದಾಪುರದವರು ಉಪೇಂದ್ರ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಮಗಳ ಹೆಸರು ಐಶ್ವರ್ಯ ಹಾಗೂ ಮಗನ ಹೆಸರು ಆಯುಷ್. ಉಪೇಂದ್ರ ಅವರು ತಮ್ಮ ಡಿಗ್ರಿಯನ್ನು ಮುಗಿಸಿದ ನಂತರ ಕಾಶಿನಾಥ್ ರವರ ಜೊತೆ ಅವರ ತಂಡದಲ್ಲಿ ಸೇರಿಕೊಂಡು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸವನ್ನು ಶುರು ಮಾಡುತ್ತಾರೆ. ನಂತರ ತರ್ಲೆ ನನ್ ಮಗ ಸಿನಿಮಾದ ಮೂಲಕ ಉಪೇಂದ್ರರವರು ನಿರ್ದೇಶಕರಾಗುತ್ತಾರೆ. ಇದಾದ ಆರು ವರ್ಷದ ನಂತರ ಎ ಸಿನಿಮಾದ ಮೂಲಕ ಉಪೇಂದ್ರರವರು ನಟರಾಗಿ ಹೊಮ್ಮುತ್ತಾರೆ.
ತೆಲುಗು ಸಿನಿಮಾ ರಾ ಮೂಲಕ ಉಪೇಂದ್ರ ಹಾಗೂ ಪ್ರಿಯಾಂಕ ಭೇಟಿಯಾಗುತ್ತಾರೆ. ನಂತರ ಎ ಸಿನಿಮಾದ ಮೂಲಕ ಇವರಿಬ್ಬರು ಪ್ರೀತಿಸಲು ಶುರು ಮಾಡುತ್ತಾರೆ. ಉಪೇಂದ್ರರವರು ಹಾಲಿವುಡ್ ಸಿನಿಮಾ ಕಾಗಿ ಅಮೆರಿಕಕ್ಕೆ ಹೋಗಿರುತ್ತಾರೆ. ಪ್ರಿಯಾಂಕ ಹಾಗೂ ಉಪೇಂದ್ರ ಇಬ್ಬರು ಫೋನಿನಲ್ಲಿ ಮಾತನಾಡಲು ಶುರು ಮಾಡಿದರೆ ಬೆಳಗಿನ ಜಾವ ಐದು ಗಂಟೆಯವರೆಗೂ ಮಾತನಾಡುತ್ತಲೇ ಇರುತ್ತಿದ್ದರಂತೆ.
ಉಪೇಂದ್ರ ಹಾಗೂ ಪ್ರಿಯಾಂಕ ಮನೆಯಲ್ಲಿ ಮಾಮೂಲಿಯಾಗಿ ನಾಲ್ಕರಿಂದ ಐದು ಸಾವಿರ ಫೋನ್ ಬಿಲ್ ಬರುತ್ತಿತ್ತಂತೆ. ಆದರೆ ಇವರಿಬ್ಬರು ಮಾತನಾಡಲು ಶುರುಮಾಡಿದಾಗಿನಿಂದ ಫೋನ್ ಬಿಲ್ 40 ರಿಂದ 50 ಸಾವಿರಕ್ಕೆ ಏರಿತ್ತಂತೆ. ಈ ವಿಷಯ ತಿಳಿದ ಪ್ರಿಯಾಂಕ ಅಮ್ಮ “ಅಮ್ಮ ತಾಯಿ ಮೊದಲು ನೀನು ಮದುವೆಯಾಗು” ಅಂದಿದ್ದರಂತೆ. ನಂತರ ಉಪೇಂದ್ರ ಕುಟುಂಬ ಕೂಡ ಇದಕ್ಕೆ ಒಪ್ಪಿ ಇವರಿಬ್ಬರಿಗೂ ದೂರದ ಕಲ್ಕತ್ತಾದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿತ್ತು ಈ ಮದುವೆಗೆ ಯಾವ ಅಭಿಮಾನಿಗಳು ಕೂಡ ಹೋಗಿರಲಿಲ್ಲ.
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪ ದಂಪತಿಗಳು
ನಟ ಗೋಲ್ಡನ್ ಸ್ಟಾರ್ ಗಣೇಶ್ ರವರು ಮುಂಗಾರು ಮಳೆ ಸಿನಿಮಾ ರಿಲೀಸ್ ಆದ ನಂತರ ಶಿಲ್ಪರವರ ಜೊತೆ ಗೌಪ್ಯವಾಗಿ ಮದುವೆಯಾಗಿದ್ದರು ಈ ಮದುವೆಯ ಹಿನ್ನೆಲೆಯ ಹಲವಾರು ವದಂತಿಗಳು ಕೂಡ ಹಬ್ಬಿದವು ಇವಕ್ಕೇಲ್ಲಾ ಬ್ರೇಕ್ ಹಾಕಿದ ನಟ ಗಣೇಶ್ ವೀಕೆಂಡ್ ವಿತ್ ರಮೇಶ್ ನಲ್ಲಿ ತಮ್ಮ ಲವ್ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ. ನಾನು ಹಾಗೂ ಶಿಲ್ಪ ಮುಂಗಾರು ಮಳೆ ಸಿನಿಮಾಕಿಂತ ಮೊದಲೇ ಪ್ರೀತಿಸುತ್ತಿದ್ದೇನೆ ನಂತರ ಇಷ್ಟಪಟ್ಟು ಮದುವೆಯಾದೆವು ಎಂದು ತಿಳಿಸಿದರು.
ನಟಿ ರಮ್ಯಾ ಬರ್ನ ಹಾಗೂ ಫಹಾದ್ ಅಲಿಖಾನ್ ದಂಪತಿಗಳು
ನಟ ಫಹದ್ ಅಲಿ ಖಾನ್ ಜೊತೆ ನಟಿ ರಮ್ಯಾ ರವರು ಕೂಡ ಗೌಪ್ಯವಾಗಿ ಮದುವೆಯಾಗಿದ್ದರು. ಕನ್ನಡ ತೆಲುಗು ತಮಿಳು ಹಾಗು ತುಳು ಭಾಷೆಗಳಲ್ಲಿ ನಟಿಸಿ ಅಭಿಮಾನಿಗಳ ಮನೆಗೆದ್ದಿದ್ದ ನಟಿ ರಮ್ಯ ಫಹಾದ್ ಅಲಿಖಾನ್ ರವರನ್ನು ಶಿವಾಜಿನಗರದ ರಿಜಿಸ್ಟರ್ ಆಫೀಸಿನಲ್ಲಿ ಮದುವೆ ಆಗಿದ್ದರು. ಈ ಮದುವೆಯು ಅಭಿಮಾನಿಗಳಲ್ಲಿ ಶಾಕ್ ಮೂಡಿಸಿತ್ತು.
ಶೃತಿ ಹರಿಹರನ್ ಹಾಗೂ ಡ್ಯಾನ್ಸರ್ ರಾಮ್ ದಂಪತಿಗಳು
ಹಲವಾರು ಕನ್ನಡ ಸಿನಿಮಾಗಳ ಮೂಲಕ ಸಿನಿಮಾ ರಂಗದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದ ನಟಿ ಶ್ರುತಿ ಹರಿಹರನ್ ರವರು ತಮ್ಮ ಬಹುಕಾಲದ ಗೆಳೆಯ ಡ್ಯಾನ್ಸರ್ ರಾಮ್ ಜೊತೆ ಸೀಕ್ರೆಟ್ ಆಗಿ ಮದುವೆಯಾಗಿದ್ದರು. ವಿಸ್ಮಯ ಸಿನಿಮಾ ಚಿತ್ರೀಕರಣದ ವೇಳೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮೀಟು ಪ್ರಕರಣದ ಅಡಿಯಲ್ಲಿ ಶ್ರುತಿ ಹರಿಹರನ್ ಮಾತನಾಡಿದರು ಈ ಘಟನೆ ನಡೆದ ನಂತರ ಅವರು ಸೀಕ್ರೆಟ್ ಆಗಿ ಮದುವೆಯಾಗಿದ್ದಾರೆ.
ನಟಿ ಸಂಜನಾ ಗಲ್ರಾನಿ ಹಾಗೂ ಅಜೀಜ್ ದಂಪತಿಗಳು
ಸಂಜನಾ ಗಲ್ರಣಿ ಖಾಸಗಿ ಆಸ್ಪತ್ರೆಯ ಹಾರ್ಟ್ಸ್ ಸ್ಪೆಶಲಿಸ್ಟ್ ಆದ ಅಜಿತ್ ರವರನ್ನು ಲಾಕ್ಡೌನ್ ವೇಳೆಯಲ್ಲಿ ಸೀಕ್ರೆಟ್ ಆಗಿ ಮದುವೆಯಾಗಿದ್ದರು. ಸಂಜನಾ ಗಲ್ರಾಣಿ ಅವರು ಡ್ರಗ್ಸ್ ವಿಚಾರವಾಗಿ ಪೊಲೀಸರ ಕಸ್ಟಡಿಯಲ್ಲಿ ಬಂದಿತರಾಗಿದ್ದಾಗ ತಮ್ಮ ಮದುವೆಯ ಸೀಕ್ರೆಟ್ ಹೊರ ಬಿದ್ದಿತ್ತು ಆದರೆ ಅವರು ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನಂತರ ತಮ್ಮ ಮದುವೆಯ ಬಗ್ಗೆ ಮಾತನಾಡಿದ ಸಂಜನಾ ಗಲ್ರಾಣಿ ಲಾಕ್ ಡೌನ್ ತರಾ ತುರಿಯಲಿ ನನ್ನ ಮದುವೆ ನಡೆದುಹೋಯಿತು ಯಾರಿಗೂ ಹೇಳಲಾಗಲಿಲ್ಲ ಎಂದು ಕೂಡ ಹೇಳಿದ್ದಾರೆ.
ನಟಿ ಪ್ರಣಿತ ಸುಭಾಷ್ ಹಾಗೂ ಉದ್ಯಮಿ ನಿತಿನ್ ರಾಜು ದಂಪತಿಗಳು
ಬಹುಭಾಷಾ ನಟಿ ಪ್ರಣಿತ ಸುಭಾಷ್ ಕರ್ನಾಟಕದವರೇ ಆಗಿದ್ದು ಇವರು ಉದ್ಯಮಿ ನಿತಿನ್ರಾಜು ಎಂಬುವವರ ಜೊತೆ ಕನಕಪುರ ರಸ್ತೆಯ ರೆಸಾರ್ಟ್ ಒಂದರಲ್ಲಿ ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಗುಟ್ಟಾಗಿ ಮದುವೆಯಾಗಿದ್ದಾರೆ.
ಸಿಂಧು ಲೋಕನಾಥ್ ಹಾಗೂ ಶ್ರೇಯಸ್ ದಂಪತಿಗಳು
ನಟಿ ಸಿಂಧು ಲೋಕನಾಥ್ ತಮ್ಮ ಬಹುಕಾಲದ ಗೆಳೆಯ ಶ್ರೇಯಸ್ದೊಡನೆ ಕೊಡಗಿನ ಸಂಪ್ರದಾಯದಂತೆ ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾದರು. ತಮ್ಮ ಮದುವೆಯ ಬಗ್ಗೆ ಮಾತನಾಡಿದ ನಟಿ ಸಿಂಧು ಲೋಕನಾಥ್ ಮದುವೆ ಎಂಬುದು ನನ್ನ ವಯಕ್ತಿಕ ವಿಷಯ ಇದಕ್ಕೆ ಪಬ್ಲಿಸಿಟಿ ಅವಶ್ಯಕತೆ ಇಲ್ಲ ಎಂದಿದ್ದರು.
ನಟಿ ಅನುಪ್ರಭಾಕರ್ ಹಾಗೂ ರಘು ಮುಖರ್ಜಿ ದಂಪತಿಗಳು
ನಟಿ ಅನುಪ್ರಭಾಕರ್ ಅವರು ಖ್ಯಾತ ನಟಿ ಜಯಂತಿಯವರ ಮಗನನ್ನು ಮದುವೆಯಾಗಿ ದಶಕಗಳ ನಂತರ ಅವರಿಗೆ ವಿಚ್ಛೇದನ ನೀಡಿ ನಂತರ ರಘು ಮುಖರ್ಜಿಯವರನ್ನು ಗೌಪ್ಯವಾಗಿ ಮದುವೆಯಾದರು.
ನಟಿ ಶ್ರುತಿ ಹಾಗೂ ಸುರೇಂದರ್ ದಂಪತಿಗಳು
ನಟಿ ಶ್ರುತಿ ತಮ್ಮ ಮೊದಲ ಪತಿ ಚಂದ್ರಚೂಡ್ ರವರ ಜೊತೆಗಿನ ಗಲಾಟೆಯ ನಂತರ ಕೋರ್ಟ್ ಕೂಡ ಎರಡನೇ ಮದುವೆಯಾಗಬಾರದೆಂದು ತೀರ್ಪು ನೀಡಿತ್ತು. ಅದನ್ನು ಉಲ್ಲಂಘಿಸಿ ನಟಿ ಶ್ರುತಿ ಗೌಪ್ಯವಾಗಿ ಸುರೇಂದರ್ ಎಂಬವರ ಜೊತೆ ಎರಡನೇ ವಿವಾಹವಾದರು.