Samyukta’s Bold Dance with Kishan: ನಟಿ ಸಂಯುಕ್ತಾ ಹೆಗಡೆ ತಮ್ಮ ಬೋಲ್ಡ್ ಅವತಾರದಿಂದ ಸುದ್ದಿಯಾಗಿದ್ದಾರೆ. ನಿನ್ನೆಯಷ್ಟೇ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಡ್ಯಾನ್ಸ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋ ಈಗ ಟ್ರೋಲ್‌ಗೆ ಗುರಿಯಾಗಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ?
ನಟಿ ಸಂಯುಕ್ತಾ ಹೆಗಡೆ ಡ್ಯಾನ್ಸರ್ ಹಾಗೂ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ಕಿಶನ್ ಬಿಳಗಲಿ ಅವರೊಂದಿಗೆ ಬೋಲ್ಡ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಡ್ಯಾನ್ಸ್ ಮಾಡಿದ ಮಾತ್ರಕ್ಕೆ ನೀವು ಟ್ರೋಲ್ ಆಗಲ್ಲ. ಬದಲಾಗಿ ಅದರಲ್ಲಿ ಸಂಯುಕ್ತಾ ಅವರ ಉಡುಗೆ ಟ್ರೋಲಿಗರನ್ನು ಕೆರಳಿಸಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ನಟಿ ಸಂಯುಕ್ತಾ ಹೆಗಡೆ ಬಿಳಿ ಬಣ್ಣದ ಡ್ರೆಸ್ ಧರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿ ಅರೆಬೆತ್ತಲೆಯಾಗಿ ಕಾಣಿಸಿಕೊಂಡಿದ್ದಕ್ಕಾಗಿ ನೆಟಿಜನ್‌ಗಳು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಲೈಕ್ ಕಮೆಂಟ್ ಗಾಗಿ ಇದನ್ನೆಲ್ಲಾ ಮಾಡಬೇಕಿಲ್ಲ, ಮೂರು ಬಿಟ್ಟೋರು ಊರಿಗೆ ದೊಡ್ಡವರು, ಬಟ್ಟೆಗೆ ಕಾಸಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್‌ಗಳಿಗೆ ಕಿಶನ್ ಪ್ರತಿಕ್ರಿಯಿಸಿದ್ದು, ಕಲೆಯನ್ನು ಗೌರವಿಸದೆ ಈ ರೀತಿ ಕಾಮೆಂಟ್ ಮಾಡುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ಬ್ಯಾಲೆ ನೃತ್ಯ ಮಾಡುವಾಗ ಅವರು ಇದೇ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ ಎಂದು ಹೇಳಿದರು.