ಬಿಗ್ ಬಾಸ್ ಹಾಗೂ ರಾಜ ರಾಣಿ ಖ್ಯಾತಿಯ ಸಮೀರ್ ಆಚಾರ್ಯ (Sameer Acharya) ಮತ್ತು ಶ್ರಾವಣಿ(Shravani) ದಂಪತಿಗಳು ತಮ್ಮ ಅಭಿಮಾನಿಗಳಿಗೆ ಈ ಹಿಂದೆ ಗುಡ್ ನ್ಯೂಸ್ ನೀಡಿದ್ದರು. ಸಮೀರ್ ಆಚಾರ್ಯರವರ ಪತ್ನಿ ಶ್ರಾವಣಿ ತಾವು ಗರ್ಭಿಣಿಯಾಗಿರುವುದಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದರು ಇದರಿಂದ ಅಭಿಮಾನಿಗಳೆಲ್ಲ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗಳಿಗೆ ಶುಭಾಶಯಗಳನ್ನು ಕೂಡ ತಿಳಿಸಿದ್ದರು. ಇದೀಗ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗಳಿಗೆ ಹೆಣ್ಣು ಮಗು ಒಂದು ಜನಿಸಿದ್ದು ಈ ದಂಪತಿಗಳು ತಮ್ಮ ಮಗುವಿನ ಜನನದಿಂದ ತುಂಬಾ ಖುಷಿ ಪಟ್ಟಿದ್ದಾರೆ.ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗಳಿಗೆ ಹೆಣ್ಣು ಮಗು ಜನಿಸಿದೆ ಎಂಬುದು ಎಲ್ಲರಿಗೂ ಕೂಡ ಗೊತ್ತೇ ಇದೆ. ಸಮೀರ್ ಆಚಾರ್ಯ ಶ್ರಾವಣಿ ದಂಪತಿಗಳು ನನ್ನಮ್ಮ ಸೂಪರ್ ಸ್ಟಾರ್ ವೇದಿಕೆ ಮೇಲೆ ತಮ್ಮ ಮಗಳಿಗೆ ನಾಮಕರಣ ಶಾಸ್ತ್ರವನ್ನು ಮಾಡಿ ಮುಗಿಸಿದ್ದಾರೆ.
ಈ ಹಿಂದೆ ಬಿಗ್ ಬಾಸ್ ಕಂಟೆಸ್ಟೆಂಟ್ ಆಗಿದ್ದ ಸಮೀರ್ ಆಚಾರ್ಯ ಎಲ್ಲರಿಗೂ ಪರಿಚಿತರಾಗಿದ್ದಾರೆ.
ಬಿಗ್ ಬಾಸ್ ಮುಗಿದ ನಂತರ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗಳು ರಾಜಾರಾಣಿ ಎಂಬ ಕಾರ್ಯಕ್ರಮದಲ್ಲೂ ಕೂಡ ಭಾಗವಹಿಸಿ ಈ ಜೋಡಿ ಅಲ್ಲು ಕೂಡ ಕನ್ನಡಿಗರ ಮನಸನ್ನು ಗೆದ್ದಿತ್ತು. ರಾಜ ರಾಣಿ ಶೋನಲ್ಲಿ ಮನಸ್ಸಿನ ಮಾತು ಹೇಳಿಕೊಳ್ಳಲು ಒಂದು ಟಾಸ್ಕನ್ನು ನೀಡಿದ್ದರು ಅದರಲ್ಲಿ ಶ್ರಾವಣಿ ತನಗೆ ಒಂದು ಮಗು ಬೇಕು ಎಂದು ಸಮೀರ್ ಆಚಾರ್ಯರವರನ್ನು ಕೇಳಿದರು ಆ ಎಪಿಸೋಡ್ ಒಂದು ಎಮೋಷನಲ್ ಎಪಿಸೋಡ್ ಆಗಿದ್ದು ಎಲ್ಲಾ ಜೋಡಿಗಳು ತಮ್ಮ ಮನಸ್ಸಿನಲ್ಲಿರುವ ಮಾತು ಗಳನ್ನು ತಮ್ಮ ಪತಿ ಹಾಗೂ ಪತ್ನಿಯ ಹತ್ತಿರ ಹೇಳಿಕೊಳ್ಳುತ್ತಿದ್ದರು.
ರಾಜ ರಾಣಿ ಕಾರ್ಯಕ್ರಮದ ಮೂಲಕ ಕನ್ನಡಿಗರ ಮನಸನ್ನು ಗೆದ್ದಿದ್ದ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗಳು ತಮ್ಮ ಮೊದಲನೇ ಮಗುವಿನ ನೀರಿಕ್ಷೆಯಲ್ಲಿದ್ದರು. ಇತ್ತೀಚಿಗಷ್ಟೇ ಸಮೀರ್ ಆಚಾರ್ಯ ತಮ್ಮ ಪತ್ನಿ ಶ್ರಾವಣಿಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರವನ್ನು ಕೂಡ ಮಾಡಿದ್ದರು ಶ್ರಾವಣಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮಗೆ ಹೆಣ್ಣು ಮಗು ಹುಟ್ಟಿರುವ ವಿಚಾರವನ್ನು ಹಂಚಿಕೊಂಡಿದ್ದರು. ನನ್ನಮ್ಮ ಸೂಪರ್ ಸ್ಟಾರ್ ವೇದಿಕೆ ಮೇಲೆ ಸಮೀರ್ ಆಚಾರ್ಯ ತನ್ನ ಮಗಳು ಹುಟ್ಟಿದ ದಿನ ಎಷ್ಟು ಭಯವಾಗಿತ್ತು ಎಂದು ಹಂಚಿಕೊಂಡಿದ್ದಾರೆ. ಜನರು ಪ್ರೀತಿಯಿಂದ ಆಶೀರ್ವಾದ ಮಾಡಿರುವ ಕಾರಣವೇ ನನಗೆ ಮಗಳು ಜನಿಸಿದ್ದಾರೆ. ಇಡೀ ಕರ್ನಾಟಕದ ಜನತೆಯ ಆಶೀರ್ವಾದದಿಂದ ಈ ಮಗು ಜನಿಸಿದ್ದು ಡಾಕ್ಟರ್ ಡೇಟ್ ನೀಡಿದ್ದ ದಿನ ಶ್ರಾವಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ.
ಆ ಸಮಯದಲ್ಲಿ ಇಷ್ಟ ಪಾವನಿ ಜೊತೆ ಅವರ ತಾಯಿ ಇದ್ದರು ಹೊಟ್ಟೆಗೆ ಒಂದು ಬೆಲ್ಟ್ ಕಟ್ಟಿ ಮಗುವಿನ ಹಾರ್ಟ್ ಬೀಟ್ ಮಾನಿಟರ್ ಮಾಡಬೇಕೆಂದು ಹೇಳಿದರು ಇವರನ್ನು ಆಸ್ಪತ್ರೆಯಲ್ಲಿ ಬಿಟ್ಟು ನನ್ನ ತಂದೆ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮನೆಗೆ ಹೋದೆ ಆಗ ನನಗೆ ಕರೆ ಮಾಡಿ ಹಾರ್ಟ್ ರೇಟ್ ಕಡಿಮೆ ಆಗುತ್ತಿದೆ 20ಕ್ಕೆ ಬಂದು ನಿಂತಿದೆ ಎಂದು ಹೇಳಿದರು ಒಂದೇ ಸಮಯದಲ್ಲಿ ಹಾರ್ಟ್ ಬೀಟ್ ನಿಂತು ಹೋಗಿ ಝೀರೋ ಆಗಿತ್ತು ಇದನ್ನು ಕೇಳಿ ಶ್ರಾವಣಿ ಕೂಡ ಆತಂಕ ಪಟ್ಟುಕೊಂಡಿದ್ದಳು.
ತಡ ಮಾಡುವುದು ಬೇಡ ಆಪರೇಷನ್ ಮಾಡಬೇಕು ಎಂದು ಡಾಕ್ಟರ್ ತಿಳಿಸಿದರು ನಾನು ಆ ಸಮಯದಲ್ಲಿ ನಿನಗೆ ಹೋಗಿದ್ದೆ ದೇವರ ಮುಂದೆ ನಿಂತು ಪ್ರಾರ್ಥನೆ ಮಾಡಿದೆ ಮಗು ಇನ್ನೂ ಹೊಟ್ಟೆಯಲ್ಲಿ ಇದ್ದು ಹಾರ್ಟ್ ಬೀಟ್ ಸ್ಟ್ರೈಟ್ ಲೈನ್ ಆಯ್ತು ಆಗ ನನಗೆ ಭಯವಾಗಿತ್ತು ನಾನು ಅಂದು ಕಾರಣ ಎಷ್ಟು ಜೋರಾಗಿ ಓಡಿಸಿದ್ದೇನೆ ಎಂಬುದು ನನಗೆ ಮಾತ್ರ ಗೊತ್ತು ನಾನು ಆಸ್ಪತ್ರೆಗೆ ಹೋಗುವಷ್ಟರಲ್ಲಿ ಆಪರೇಷನ್ ಗೆ ಶ್ರಾವಣಿಯನ್ನು ಕರೆದುಕೊಂಡು ಹೋಗಿದ್ದರು.
ಇದನ್ನೆಲ್ಲಾ ನೋಡಿ ಹುಚ್ಚು ಹೋಗುವುದಾದರೆ ಬರಬೇಡಿ ಎಂದು ಹೇಳಿದರು ಮಾಸ್ಕ್ ಧರಿಸಿ ನಾನು ಮಗುವನ್ನು ನೋಡಲು ಹೋದೆ ಆಪರೇಷನ್ ಥಿಯೇಟರ್ ನಲ್ಲಿ ನನಗೆ ಭಯವಾಗುತ್ತಿತ್ತು ಮಗು ಉಳಿಯುತ್ತದೆಯೋ ಇಲ್ಲವೋ ಎಂದು ತುಂಬಾ ಯೋಚಿಸುತ್ತಿದೆ push ಎಂದು ಹೇಳಿ ಕಾಲು ಹಿಡಿದು ಮಗುವನ್ನು ಹೊರ ತೆಗೆದರು ಮಗು ಯಾವಾಗ ಆಡುತ್ತದೆ ಎಂದು ಗಟ್ಟಿ ಹೃದಯವನ್ನು ಹಿಡಿದುಕೊಂಡು ನಿಂತಿದ್ದೆ ಮಗು ಅಳುವ ಸದ್ದು ಕೇಳಿದ ನಂತರ ದೇವರಿಗೆ ಅಡ್ಡ ಬಿದ್ದೆ ಎಂದು ಸಮೀರ್ ಆಚಾರ್ಯ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಯಾರಿಗಾದರೂ ನಾನು ಮಾಡಿದ್ದರೆ ಕ್ಷಮಿಸಿ ನನ್ನ ಮಗಳಿಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನನ್ನ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸಮೀರ್ ಆಚಾರ್ಯ ಮತ್ತು ಶ್ರಾವಣಿ ತಮ್ಮ ಮಗುವನ್ನು ಜನರಿಗೆ ಪರಿಶೀಲಿಸಿ ನಾಮಕರಣ ಶಾಸ್ತ್ರವನ್ನು ಮಾಡಿದ್ದಾರೆ. ನಟ ಸೃಜನ್ ಲೋಕೇಶ್, ತಾರಾ ಅನುರಾಧ ಅನುಪ್ರಭಾಕರ್ ಸೇರಿಕೊಂಡು ಮಗುವಿಗೆ ನಾಮಕರಣ ಶಾಸ್ತ್ರವನ್ನು ಮಾಡಿದ್ದಾರೆ.
ರಾಜ ರಾಣಿ ರಿಯಾಲಿಟಿ ಶೋ ಟಾಸ್ಕ್ ಒಂದರಲ್ಲಿ ಶ್ರಾವಣಿ ಬೊಂಬೆಯನ್ನು ಹಿಡಿದುಕೊಂಡು ತನಗೆ ಜೀವ ಇರುವ ಮಗು ಬೇಕು ಎಂದು ಕೇಳಿದ್ದಳು ನಿಮ್ಮೆಲ್ಲರ ಆಶೀರ್ವಾದದಿಂದ ನನ್ನ ಮಗಳು ಜನಿಸಿದ್ದಾಳೆ. ಎಂದು ತನ್ನ ಮಗಳಿಗೆ ಸರ್ವಾರ್ಥ ಎಂದು ಹೆಸರಿಟ್ಟಿದ್ದಾರೆ. ಸರ್ವಾರ್ಥ ಎನ್ನುವ ಪದದ ಅರ್ಥ ಏನೆಂದರೆ, ಯಶಸ್ಸಿನ ವಿಷಯವನ್ನು ವಿಪರೀತವಾಗಿ ಪ್ರದರ್ಶಿಸುವ ಪ್ರವೃತ್ತಿ ಹೊಂದಿರುವವರು ಎಂದು ಈ ಹೆಸರು ತಿಳಿಸುತ್ತದೆ ಎಲ್ಲಾ ಅರ್ಥವನ್ನು ನೀಡುವುದು ಸರ್ವಾರ್ಥ ಎರಡು ಪದಗಳಿಂದ ಆಗಿದೆ ಎಂದು ಸಮೀರ್ ಆಚಾರ್ಯ ತಿಳಿಸಿದ್ದಾರೆ.