ಚಿಕ್ಕ ಪುಟ್ಟ ಬಟ್ಟೆಯನ್ನು ಹಾಕಿಕೊಳ್ಳದೆ ಇರುವುದಕ್ಕೆ ಆ ದಿನ ನಡೆದ ಕೆಟ್ಟ ಘಟನೆಗೆ ಕಾರಣ ಎಂದು ಕಣ್ಣೀರು ಹಾಕಿದ ನಟಿ ಸಾಯಿ ಪಲ್ಲವಿ: ನಟಿ ಸಾಯಿ ಪಲ್ಲವಿ ದಕ್ಷಿಣ ಭಾರತದ ಪ್ರಸಿದ್ಧ ನದಿ ಇವರು ತುಂಬಾ ದೊಡ್ಡ ಸೆಲೆಬ್ರಿಟಿ ಆಗಿದ್ದರೂ ಸಹಿತ ಸರಳವಾಗಿ ಜೀವಿಸುತ್ತಿದ್ದಾರೆ. ಹಲವಾರು ಸಿನಿಮಾಗಳ ಮೂಲಕ ತಮ್ಮ ಸರಳತೆ ಹಾಗೂ ಉತ್ತಮ ನಟನೆಯಿಂದ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ನಟಿ ಸಾಯಿ ಪಲ್ಲವಿ ಮೂಲತಃ ವೃತ್ತಿಯಲ್ಲಿ ವೈದ್ಯರಾಗಿದ್ದರು ಕೂಡ “ಫಿದಾ” ಎನ್ನುವ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು ಇವರ ಅದ್ಭುತ ನೃತ್ಯಕ್ಕೆ ಸಾಕಷ್ಟು ಅಭಿಮಾನಿಗಳು ಮನಸೋತಿದ್ದಾರೆ.
ಈ ಆಧುನಿಕ ಯುಗದಲ್ಲಿ ನಟಿಯರು ಅರ್ಧಂಬರ್ಧ ಬಟ್ಟೆಯನ್ನು ಹಾಕಿಕೊಂಡು ಹಾಟ್ ಆಗಿ ಮೈಯಲ್ಲ ಕಾಣಿಸಬೇಕು ಎಂದು ಸ್ಟೈಲಿಶ್ ಆಗಿ ಓಡಾಡಿಕೊಳ್ಳುತ್ತಿರುತ್ತಾರೆ. ಈಗಂತೂ ಅರೆಬರೆ ಬಟ್ಟೆ ಬಿಕಿನಿ ಧರಿಸಿರುವುದು ಸಿನಿಮಾರಂಗಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಆದರೆ ನಟಿ ಸಾಯಿ ಪಲ್ಲವಿ ಇದರೆಲ್ಲದರಿಂದ ಹೊರತಾಗಿದ್ದು ಹಾಟ್ ಸಿನಿಮಾಗಳಲ್ಲಿ ನಟಿಸುವುದಿಲ್ಲ ಹಾಗೂ ಅರೆ ಬರೆ ಬಟ್ಟೆಯನ್ನು ತೊಡುವುದಿಲ್ಲ ಎಂದು ಹೇಳಿದ್ದಾರೆ.
ಒಂದು ಸಂದರ್ಶನದಲ್ಲಿ ನಟಿ ಸಾಯಿ ಪಲ್ಲವಿ ಅವರನ್ನು ನೀವು ಯಾಕೆ ತುಂಡು ಹುಡುಗೆ ಧರಿಸುವುದಿಲ್ಲ ಎಂದು ಸಂದರ್ಶಕರು ಪ್ರಶ್ನಿಸಿದಾಗ ಅದಕ್ಕೇ ನಟಿ ಸಾಯಿ ಪಲ್ಲವಿ ಉತ್ತರಿಸಿ ತನ್ನ ಮನದಾಳದ ನೋವನ್ನು ಹೊರ ಹಾಕಿದ್ದಾರೆ. ತನ್ನ ಜೀವನದಲ್ಲಿ ನಡೆದ ಒಂದು ಕೆಟ್ಟ ಘಟನೆಯಿಂದ ನಾನು ಈ ರೀತಿ ಬದಲಾಗಿದ್ದೇನೆ ಎಂದು ನಟಿ ಸಾಯಿ ಪಲ್ಲವಿ ಹೇಳಿಕೊಂಡಿದ್ದಾರೆ.
ಸಾಯಿ ಪಲ್ಲವೀರವರು ಎಂಬಿಬಿಎಸ್ ಮಾಡುತ್ತಿರುವಾಗ ಅವರು ಹೊರ ದೇಶವಾದ ಅಮೆರಿಕಾದಲ್ಲಿ ಓದುತ್ತಿದ್ದರು ಇದೇ ವೇಳೆ ಅವರು ಟ್ಯಾಂಕು ಎನ್ನುವ ನೃತ್ಯವನ್ನು ಕೂಡ ಕಲಿಯಲು ಶುರು ಮಾಡಿದ್ದರು ಟ್ಯಾಂಗೋ ನೃತ್ಯವನ್ನು ಪ್ರದರ್ಶನ ಮಾಡುವಾಗ ವಿಶೇಷವಾದ ವೇಷ ಭೂಷಣವನ್ನು ಧರಿಸಬೇಕಿತ್ತು ಇದೇ ವೇಳೆ ನಟಿ ಸಾಯಿ ಪಲ್ಲವಿ ತಮ್ಮ ಪೋಷಕರ ಅನುಮತಿಯನ್ನು ಪಡೆದುಕೊಂಡು ವಿಶೇಷವಾದ ಉಡುಗೆಯೊಂದನ್ನು ತೊಟ್ಟು ಟ್ಯಾಂಗೂ ನೃತ್ಯವನ್ನು ಮಾಡಲು ಒಪ್ಪಿಕೊಂಡಿದ್ದರು.
ಇದಾದ ಕೆಲವು ತಿಂಗಳುಗಳ ಬಳಿಕ ನಟಿ ಸಾಯಿ ಪಲ್ಲವಿ ರವರಿಗೆ “ಪ್ರೇಮಾಂ” ಎನ್ನುವ ಚಿತ್ರದಲ್ಲಿ ನಟಿಸಲು ಅವಕಾಶ ಸಿಗುತ್ತದೆ. ಪ್ರೇಮ ಚಿತ್ರದ ಮೂಲಕ ನಟಿ ಸಾಯಿ ಪಲ್ಲವಿ ಹೆಚ್ಚು ಜನಪ್ರಿಯತೆಯನ್ನು ಕೂಡ ಗಳಿಸಿಕೊಳ್ಳುತ್ತಾರೆ. ಪ್ರೇಮ ಚಿತ್ರದ ಮೂಲಕ ಸಾಯಿ ಪಲ್ಲವಿ ಜನಪ್ರಿಯತೆಗಳು ಗಳಿಸಿಕೊಂಡ ಸಮಯದಲ್ಲಿ ಅಂದರೆ 2013ರಲ್ಲಿ ಸಾಯಿ ಪಲ್ಲವಿ ರವರ ಟ್ಯಾಂಗೂ ನೃತ್ಯದ ವಿಡಿಯೋಗಳು ಎಲ್ಲಾ ಕಡೆ ವೈರಲಾಗುತ್ತದೆ.
ಸಾಯಿ ಪಲ್ಲವಿ ಟ್ಯಾಂಗೋ ನೃತ್ಯವನ್ನು ಮಾಡುವಾಗ ಧರಿಸಿದ ಬಟ್ಟೆಯನ್ನು ನೋಡಿ ನೆಟ್ಟಿಗರು ಕೆಟ್ಟದಾಗಿ ಕಮೆಂಟ್ ಮಾಡಲು ಶುರು ಮಾಡುತ್ತಾರೆ. ಈ ವಿಚಾರ ಸಾಯಿ ಪಲ್ಲವಿ ರವರ ಮನಸ್ಸಿಗೆ ತುಂಬಾ ಬೇಸರವನ್ನುಂಟು ಮಾಡುತ್ತದೆ. ಜನರು ಮಾಡಿದ್ದ ಕೆಟ್ಟ ಕಮೆಂಟ್ಗಳನ್ನು ನೋಡಿದ ಸಾಯಿ ಪಲ್ಲವಿ ಇನ್ನು ಮುಂದೆ ಯಾವುದೇ ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ನಿರ್ಧಾರ ಮಾಡಿದರು ಇದಾದ ನಂತರ ಅವರು ಯಾವುದೇ ಗ್ಲಾಮರಸ್ ಚಿತ್ರಗಳಲ್ಲಿ ನಟನೆ ಮಾಡಿಲ್ಲ