Sai Kumar Shashtipoorthi Celebrations: ನೆರೆಯ ಆಂಧ್ರಪ್ರದೇಶದವರಾರೂ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದು ಮಾತ್ರ ಕನ್ನಡ ಸಿನಿಮಾ ರಂಗದಲ್ಲಿ. ಇವರ ಡೈಲಾಗ್ ಡೆಲಿವರಿ, ವಿಭಿನ್ನ ಮ್ಯಾನರಿಸಂ ನಿಂದಾಗಿಯೇ ಇಂದಿಗೂ ಕನ್ನಡದ ಸಾಕಷ್ಟು ಅಭಿಮಾನಿಗಳ ಮನಸ್ಸಿನಲ್ಲಿ ಭದ್ರವಾಗಿ ನೆಲೆ ಕಂಡುಕೊಂಡವರು ನಟ ಸಾಯಿ ಕುಮಾರ್ ಅವರು.
ನಟ ಸಾಯಿ ಕುಮಾರ್ ಹಾಗೂ ನಟ ರವಿ ಶಂಕರ್ ಅವರಿಬ್ಬರೂ ಸಹೋದರರು. ಇಬ್ಬರೂ ತೆಲುಗು ಸಿನಿಮಾ ರಂಗಕ್ಕಿಂತ ಕನ್ನಡ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದೇ ಹೆಚ್ಚು. ಅದೇ ಕಾರಣಕ್ಕಾಗಿ ಇಂದಿಗೂ ನಟ ಸಾಯಿ ಕುಮಾರ್ ಹಾಗೂ ನಟ ರವಿಶಂಕರ್ ಅವರನ್ನು ನೆನಪಿಸಿಕೊಳ್ಳುತ್ತಾರೆ.
ನಟ ಸಾಯಿ ಕುಮಾರ್ ಅವರು ಈಗ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲು ಇವರು ನಾಯಕನಾಗಿ ಅದರಲ್ಲೂ ಪೊಲೀಸ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಪೊಲೀಸ್ ಎಂದರೆ ಹೀಗೆ ಇರಬೇಕು ಎಂಬ ಮಾದರಿಯನ್ನು ಒದಗಿಸಿಕೊಟ್ಟ ಹೆಗ್ಗಳಿಕೆಯೂ ನಟ ಸಾಯಿ ಕುಮಾರ್ ಅವರಿಗೆ ಸಲ್ಲುತ್ತದೆ.
ನಟ ಸಾಯಿ ಕುಮಾರ್ ಅವರು ಆಂಧ್ರ ಪ್ರದೇಶದಲ್ಲೇ ನೆಲೆಸಿದ್ದಾರೆ. ಇವರಿಗೆ ಒಬ್ಬ ಮಗ ಹಾಗೂ ಒಬ್ಬಳು ಮಗಳಿದ್ದಾರೆ. ಇಬ್ಬರಿಗೂ ಈಗಾಗಲೇ ಮದುವೆಯಾಗಿದ್ದು, ಅವರಿಗೂ ಮಕ್ಕಳಿದ್ದಾರೆ. ಮಗ ಆದಿ ಅವರು ಈಗಾಗಲೇ ತೆಲುಗು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಜೊತೆಗೆ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿ ತಂದೆಯ ಹಾದಿಯಲ್ಲೇ ನಡೆಯುತ್ತಿದ್ದಾರೆ. ನಟ ಆದಿ ಅವರು ಕನ್ನಡ ಸಿನಿಮಾಗಲ್ಲಿ ನಟಿಸಲು ಒಲವು ತೋರಿಸಿದ್ದು, ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಲು ಸಹಿಯನ್ನು ಹಾಕಿದ್ದಾರೆ.
View this post on Instagram
ಮುಂದಿನ ದಿನಗಳಲ್ಲಿ ನಟ ಆದಿಯನ್ನು ತೆರೆ ಮೇಲೆ ವೀಕ್ಷಕರು ನೋಡಬಹುದು. ಕನ್ನಡ ಸಿನಿಮಾಗಳಲ್ಲಿ ನಟಿಸಲು ನಟ ಆದಿ ಅವರು ಕನ್ನಡ ಭಾಷೆಯನ್ನು ಕಲಿಯುತ್ತಿರುವುದು ಮತ್ತೊಂದು ವಿಶೇಷ. ಪ್ರಸ್ತುತ ನಟ ಸಾಯಿ ಕುಮಾರ್ ಅವರು ಇತ್ತೀಚೆಗೆ ೬೦ ವರ್ಷ ವಯಸ್ಸು ತುಂಬಿದ ಕಾರಣ ಅವರು ಷಷ್ಠಿ ಪೂರ್ತಿ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.
೧೯೬೧ರಲ್ಲಿ ಹುಟ್ಟಿದ ಸಾಯಿ ಕುಮಾರ್ ಅವರಿಗೆ ಈಗ್ಗೆ ಬರೋಬ್ಬರಿ ೬೦ನೇ ಸಂಭ್ರಮಾಚರಣೆ. ಈ ಸಂದರ್ಭದಲ್ಲಿ ಅವರು ಷಷ್ಠಿ ಪೂರ್ತಿ ಕಾರ್ಯಕ್ರಮವನ್ನು ಆಚರಣೆ ಮಾಡಿಕೊಂಡರು. ಈ ಕಾರ್ಯಕ್ರಮಕ್ಕೆ ತೆಲುಗು ಸಿನಿಮಾ ರಂಗದ ಘಟಾನುಘಟಿ ನಟ, ನಟಿಯರು ಭಾಗವಹಿಸಿದ್ದರು. ನಟ, ನಟಿಯರು ಮಾತ್ರವಲ್ಲದೇ, ನಿರ್ದೇಶಕರು, ನಿರ್ಮಾಪಕರುಗಳು ಭಾಗವಹಿಸಿದ್ದರು. ನಟ ಪ್ರಕಾಶ್ ರಾಜ್, ಚಿರಂಜೀವಿ ಸೇರಿದಂತೆ ಹಳೆಯ ಹಾಗೂ ಹೊಸ ತಲೆಮಾರಿನ ನಟ ನಟಿಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.