ಇವ್ರನ್ನ ಮದ್ವೆ ಆಗ್ತೀನಂತ ಕನಸಲ್ಲೂ ಅನ್ಕೊಂಡಿಲ್ಲ:ಸೊಸೆ ಮಾತಿಗೆ ‘ಅಮೂಲ್ ಬೇಬಿ’ ಅಪ್ಪ ಅಮ್ಮ ಖುಷ್​

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಎನ್ನುವ ಧಾರವಾಹಿಯಲ್ಲಿ ಸಾಗರ್ ಬಿಳಿ ಗೌಡರವರು ಕಾರ್ತಿಕ್ ಅಮೂಲ್ ಬೇಬಿಯಾಗಿ ನಟಿಸುತ್ತಿದ್ದಾರೆ. ಗೌತಮಿ ಗೌಡರವರಾದ ಸತ್ಯವರ ಜೊತೆ ಸಾಗರ್ ಬಿಳಿ ಗೌಡರವರು ನಾಯಕನಟನಾಗಿ ಸತ್ಯ ಧಾರವಾಹಿಯಲ್ಲಿ ನಟಿಸುತ್ತಿದ್ದು ಕರ್ನಾಟಕದ ಜನತೆಯ ಜನ ಮನ್ನಣೆಯನ್ನು ಪಡೆದುಕೊಂಡಿದ್ದಾರೆ.ಸಾಗರ್ ಬಿಳಿ ಗೌಡರವರು ಈ ಮೊದಲೇ ಕಿನ್ನರಿ ಎನ್ನುವ ಧಾರವಾಹಿಯಲ್ಲಿ ಪೋಷಕ ಪಾತ್ರವನ್ನು ಮಾಡಿದ್ದರು ತದನಂತರ ಹಲವಾರು ಧಾರವಾಹಿಗಳಲ್ಲಿ ನಟಿಸಿ ಇದೀಗ ಝೀ ಕನ್ನಡ ವಾಹಿನಿಯ ಸತ್ಯ ದಾರವಾಹಿಯಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ.

 

 

ಇದರ ಜೊತೆಗೆ ಮನಸಾರೆ ಎಂಬ ಧಾರವಾಹಿಯಲ್ಲು ಕೂಡ ಸಾಗರ ಬಿಳಿ ಗೌಡರವರು ನಟಿಸುತ್ತಿದ್ದು ಸತ್ಯಧಾರವಾಹಿಯ ಪಾತ್ರದ ಮೂಲಕ ಕರ್ನಾಟಕದಲ್ಲಿ ಅಮೂಲ್ ಬೇಬಿ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ.ಮೊನ್ನೆ ತಾನೆ ನಡೆದ ಜಿ ಕನ್ನಡ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲೂ ಕೂಡ ಕಾರ್ತಿಕ್ ಹಾಗೂ ಸತ್ಯ ಬೆಸ್ಟ್ ಜೋಡಿ ಎನ್ನುವ ಅವಾರ್ಡ್ ಅನ್ನು ಪಡೆದುಕೊಂಡಿದ್ದರು ಇದೀಗ ಸಾಗರ್ ಬಿಳಿ ಗೌಡರವರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು ಕಿರುತೆರೆಯ ಧಾರವಾಹಿಯಲ್ಲಿ ನಟಿಸುತ್ತಿರುವವರನ್ನು ವಿವಾಹವಾಗುತ್ತಿದ್ದಾರೆ ಇಂದು ಅವರಿಬ್ಬರ ನಿಶ್ಚಿತಾರ್ಥ ಕೂಡ ಗುರುಹಿರಿಯರ ಸಮ್ಮುಖದಲ್ಲಿ ನಡೆದಿದೆ.

 

 

ಸಾಗರ್ ಬಿಳಿ ಗೌಡ ಹಾಗೂ ಸಿರಿರಾಜು ಇವರಿಬ್ಬರೂ ಪ್ರೇಮಿಸಿ ಮದುವೆಯಾಗಿದ್ದು ಇವರ ಲವ್ ಸ್ಟೋರಿ ಕೆಲವೇ ದಿನಗಳಲ್ಲಿ ನಡೆದು ಇದೀಗ ನಿಶ್ಚಿತಾರ್ಥದ ಮಟ್ಟಕ್ಕೆ ತಲುಪಿದೆ. ಕಾರ್ತಿಕ್ ಹಾಗೂ ಸಿರಿ ರಾಜುರವರು ತಾವು ವಿವಾಹವಾಗುವುದರ ಬಗ್ಗೆ ಮಾತನಾಡಿಕೊಂಡು ಅಪ್ಪು ಕಪ್ ಸಮಯದಲ್ಲಿ ಇವರಿಬ್ಬರು ಹೆಚ್ಚು ಕ್ಲೋಸ್ ಆಗಿದ್ದರು ಅಪ್ಪು ಕಪ್ ಸಮಯದಲ್ಲಿ ಇವರಿಬ್ಬರು ಒಂದೇ ತಂಡದಲ್ಲಿದ್ದು ಚೆನ್ನಾಗಿ ಆಟ ಮಾಡಿದರು ಆ ಸಮಯದಲ್ಲಿ ಇವರಿಬ್ಬರ ಗೆಳೆತನ ತುಂಬಾ ಕ್ಲೋಸ್ ಆಗಿತ್ತು ನಂತರ ಪ್ರೀತಿಗೆ ತಿರುಗಿದೆ.

 

 

ಸಾಗರ್ ಬಿಳಿ ಗೌಡರವರನ್ನು ವಿವಾಹವಾಗುತ್ತಿರುವ ಸಿರಿರಾಜು ಈ ಕುರಿತು ಮಾತನಾಡಿ ನಾನು ಕನಸಿನಲ್ಲೂ ಇವರನ್ನು ಮದುವೆಯಾಗುತ್ತೇನೆ ಎಂದುಕೊಂಡಿರಲಿಲ್ಲ ಇವರನ್ನು ಮದುವೆಯಾಗುತ್ತಿರುವುದು ನನಗೆ ಖುಷಿಯನ್ನೇ ನೀಡಿದೆ. ಇವರಿಗೂ ನನಗೂ ತುಂಬಾ ಮ್ಯಾಚ್ಗಳಿವೆ. ನಾವಿಬ್ಬರೂ ಒಂದೇ ಕಡೆ ಒಂದೇ ಫೀಲ್ಡ್ ನಲ್ಲಿ ಕೆಲಸ ಮಾಡುತ್ತಿದ್ದು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು. ಸಾಗರ್ ಬಿಳಿ ಗೌಡ ಹಾಗೂ ಸಿರಿ ರಾಜು ಇವರಿಬ್ಬರೂ ತಮ್ಮ instagram ಖಾತೆಯಲ್ಲಿ ಅಧಿಕೃತವಾಗಿ ತಮ್ಮ ಮದುವೆಯ ವಿಷಯವನ್ನು ತಮ್ಮ ಅಭಿಮಾನಿಗಳ ಮುಂದೆ ಪ್ರಸ್ತಾಪ ಮಾಡಿದ್ದು ಕಾವ್ಯ ಗೌಡರವರ ನಂತರ ಇದೀಗ ಕಿರುತೆರೆ ನಟರಲ್ಲಿ ಸಾಗರ್ ಬಿಳಿ ಗೌಡರವರೆ ತಮ್ಮ ಮದುವೆ ವಿಷಯವನ್ನು ಅಫಿಶಿಯಲ್ ಆಗಿ ತಿಳಿಸಿದ ಎರಡನೇಯ ನಟರಾಗಿ ಹೊರಹೊಮ್ಮಿದ್ದಾರೆ.

ಸಾಗರ್ ಬಿಳಿ ಗೌಡ ಈ ಮೊದಲೇ ಕಿನ್ನರಿ ಧಾರವಾಹಿಯಲ್ಲಿ ನಟಿಸಿದ್ದರು ಕೂಡ ಅವರಿಗೆ ಸತ್ಯ ಧಾರವಾಹಿ ಹೆಚ್ಚು ಜನಪ್ರಿಯತೆಯನ್ನು ತಂದು ಕೊಟ್ಟಿದ್ದು ಇವರು ಕೂಡ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ವಿನಯ ರಾಘವೇಂದ್ರ ಅವರ ಜೊತೆಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರ ಪ್ರೊಫೆಶನ್ ಒಂದೇ ಆಗಿರುವುದರಿಂದ ಇವರಿಬ್ಬರೂ ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ ಇವರಿಬ್ಬರೂ ಕಿರುತೆರೆಯಲ್ಲಿ ಉತ್ತಮ ಸ್ಟಾರ್ ದಂಪತಿಗಳಾಗಿ ಮೆರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

 

ಇವರಿಬ್ಬರ ವಿವಾಹದ ಬಗ್ಗೆ ಮಾತನಾಡಿದ ಸಾಗರ್ ಬಿಳಿ ಗೌಡ ನನ್ನ ಬಗ್ಗೆ ಸಿರಿ ಈಗಾಗಲೇ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ. ನಮ್ಮಿಬ್ಬರ ಪ್ರೊಫೆಷನ್ ಕೂಡ ಒಂದೇ ನಮ್ಮಿಬ್ಬರ ಫ್ರೆಂಡ್ಸ್ ಗ್ರೂಪ್ ಕೂಡ ಒಂದೇ ಹೀಗಾಗಿ ನಾವಿಬ್ಬರೂ ತುಂಬಾ ಚೆನ್ನಾಗಿರುತ್ತೆವೆ ಎಂದು ನನಗೆ ನಂಬಿಕೆ ಇದೆ. ಸಿರಿ ರವರ ಮನೆಯಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದಾಗ ಸಿರಿ ನಾವಿಬ್ಬರು ತುಂಬಾ ಒಳ್ಳೆಯ ಫ್ರೆಂಡ್ಸ್ ನಮ್ಮಿಬ್ಬರ ಮದುವೆಯಾದರೆ ಚೆನ್ನಾಗಿರುವುದಿಲ್ಲ ಎಂದರು ಅವನೇನಾದರೂ ನನ್ನನ್ನು ಮದುವೆಯಾಗಲು ನಿರಾಕರಿಸಿದರೇ ನಮ್ಮ ರಿಲೇಷನ್ಶಿಪ್ ಕೂಡ ಹಾಳಾಗುತ್ತದೆ ಎಂದಿದ್ದರು ನಾವಿಬ್ಬರು ಕುಳಿತು ಮಾತನಾಡಿದಾಗ ಯಾರೋ ಗೊತ್ತಿಲ್ಲದೆ ಇರುವವರನ್ನು ಮದುವೆಯಾಗುವ ಬದಲು ಐದಾರು ವರ್ಷದಿಂದ ಗೊತ್ತಿರುವ ನಾವಿಬ್ಬರೆ ವಿವಾಹವಾಗುವುದು ಒಳ್ಳೆಯದು ಎನಿಸಿತು ಹಾಗಾಗಿ ನಾವಿಬ್ಬರು ವಿವಾಹವಾಗಲು ಒಪ್ಪಿಕೊಂಡೆವು ಎಂದು ಹೇಳಿದ್ದಾರೆ.

Be the first to comment

Leave a Reply

Your email address will not be published.


*