ಸಾಧು ಮಹಾರಾಜ್ ಎಂದೇ ಕರ್ನಾಟಕದ ಜನತೆಯ ಮನದಲ್ಲಿ ಖ್ಯಾತಿಯನ್ನು ಪಡೆದಿರುವ ಸಾಧು ಕೋಕಿಲ ರವರು ಅಪ್ಪುವಿನ ವರ್ಷದ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಅಪ್ಪು ಸಮಾಧಿಯ ಬಳಿಗೆ ಭೇಟಿ ನೀಡಿದ್ದರು.
ಈ ಹಿಂದೆ ಪುನೀತಪರ್ವ ಕಾರ್ಯಕ್ರಮ ಕೂಡ ಬಂದು ತಮ್ಮ ಗಾಯನ ಕಲೆಯ ಮೂಲಕ ಅಪ್ಪುವಿಗಾಗಿ ಹಾಡನ್ನು ಹಾಡಿ ಎಲ್ಲರನ್ನೂ ಭಾವುಕರನ್ನಾಗಿಸಿದ್ದರು. ಆದರೆ ಈಗ ಮತ್ತೊಮ್ಮೆ ಅಪ್ಪುವಿನ ವರ್ಷದ ಪುಣ್ಯ ಸ್ಮರಣೆಯ ದಿನ ಅಪ್ಪುವಿಗಾಗಿ ಅಪ್ಪು ಸಮಾಧಿಯ ಬಳಿ ಸಂಗೀತ ನಮನ ಕಾರ್ಯಕ್ರಮವನ್ನು ಕೂಡ ಸಾಧುಕೋಕಿಲ ರವರೆ ಏರ್ಪಡಿಸಿದ್ದರು. ಅಪ್ಪು ಹಾಗೂ ಸಾಧು ಒಳ್ಳೆಯ ಸ್ನೇಹಿತರಾಗಿದ್ದರು ಅಪ್ಪುವಿನ ಜೊತೆ ಸಾದು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ಇಂದಿಗೂ ಕೂಡ ಸಾಧು ತಮ್ಮ ಕಾಮಿಡಿ ವಿಡಿಯೋಗಳ ಮೂಲಕ ಜನರನ್ನು ನಗೆ ಕಡಲಿನಲ್ಲಿ ತೇಲಿಸುತ್ತಿರುತ್ತಾರೆ. ಎಷ್ಟೋ ದಶಕಗಳಿಂದ ಸಿನಿಮಾಗಳಲ್ಲಿ ಕಾಮಿಡಿಯನ್ ಆಗಿ ನಟಿಸುತ್ತಿರುವ ಸಾಧುಕೋಕಿಲರಿಗೆ ಅದೆಷ್ಟೋ ಜನ ಹೊಸ ಕಾಮಿಡಿಯನ್ ಗಳು ಪೈಪೋಟಿಯನ್ನು ನೀಡಲು ಬಂದರೂ ಕೂಡ ಅವರ ಬೇಡಿಕೆ ಮಾತ್ರ ಇಂದಿಗೂ ಕಮ್ಮಿಯಾಗಿಲ್ಲ.
ಹಿಂದೊಂದು ಕಾಲದಲ್ಲಿ ಸಾದು ಕೋಕಿಲ ರವರ ಕಾಮಿಡಿಯನ್ನು ನೋಡಲೆಂದೇ ಜನರು ಸಿನಿಮಾವನ್ನು ಚಲನಚಿತ್ರ ಮಂದಿರಗಳಲ್ಲಿ ವೀಕ್ಷಿಸಲು ಹೋಗುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಒಳ್ಳೆಯ ಹಾಸ್ಯ ಕಲಾವಿದ ಸಾಧು ಮಹಾರಾಜ್ ಆಗಿದ್ದರು. ಕಳೆದ 30 ವರ್ಷಗಳಿಂದ ಕನ್ನಡ ಇಂಡಸ್ಟ್ರಿಯಲ್ಲಿ ಹಾಸ್ಯ ನಟನಾಗಿ ಕೆಲಸ ಮಾಡುತ್ತಿರುವ ಸಾಧು ಮಹಾರಾಜ್ ಕೇವಲ ಹಾಸ್ಯ ನಟನಾಗಿರದೆ ನಿರ್ದೇಶಕನಾಗಿ ನಿರ್ಮಾಪಕನಾಗಿ ಸಂಗೀತ ನಿರ್ದೇಶಕನಾಗಿ ಗಾಯಕನಾಗಿ ನಟನಾಗಿ ಕಾಂಪೋಸರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ.
ಅಪ್ಪುವಿನ ವರ್ಷದ ಪುಣ್ಯ ಸ್ಮರಣೆಯ ದಿನ 24 ಗಂಟೆಗಳ ಸಂಗೀತ ನಮನ ಕಾರ್ಯಕ್ರಮವನ್ನು ಆಯೋಜಿಸಿದ್ದ ಸಾಧು ಮಹಾರಾಜ್ ಆ ಕಾರ್ಯಕ್ರಮದಲ್ಲಿ ಹಲವಾರು ಹಾಡುಗಳನ್ನು ಹಾಡಿದ್ದಾರೆ.
ಸಾಧು ಕೋಕಿಲ ಹಾಗೂ ಅಪ್ಪುರವರು ಡಾರ್ಲಿಂಗ್ ಕೃಷ್ಣ ನಟನೆಯ ಲಕ್ಕಿಮ್ಯಾನ್ ಎನ್ನುವ ಚಿತ್ರದಲ್ಲಿ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಈ ಚಿತ್ರದಲ್ಲಿ ನಾವಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ನನ್ನ ಪುಣ್ಯ ಎಂದಿದ್ದಾರೆ ಸಾಧು.
ಅಪ್ಪುವಿನ ವರ್ಷದ ಪುಣ್ಯ ಸ್ಮರಣೆಯ ದಿನ ಅಪ್ಪುವಿನ ಸಮಾಧಿಯ ಬಳಿ ಬಂದಿದ್ದ ಸಾಧು ಕೋಕಿಲ ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾಗ ಒಬ್ಬ ಅಭಿಮಾನಿ ಕೇಳದೆ ಇವರ ಫೋಟೋವನ್ನು ತೆಗೆದುಕೊಂಡು ಆಗ ತಮಾಷೆಗೆ ಮಾತನಾಡಿದ ಸಾಧುಕೋಕಿಲ ಫೋಟೋ ಡಿಲೀಟ್ ಮಾಡಿ ಇಲ್ಲವೆಂದರೆ ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ ಎಂದರು.