ಇಂದು ಅದಿತಿ ಪ್ರಭುದೇವ ಬಹು ಕಾಲದ ಗೆಳೆಯ ಯಶಸ್ವಿ ಎಂಬ ಉದ್ಯಮಿಯೊಡನೆ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 28ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಅದಿತಿ ಪ್ರಭುದೇವಾ ಹಾಗೂ ಯಶಸ್ವಿ ದಂಪತಿಗಳು ತಮ್ಮ ಕುಟುಂಬ ಹಾಗೂ ಸೆಲೆಬ್ರಿಟಿಗಳ ನಡುವೆ ವಿವಾಹವನ್ನು ಮಾಡಿಕೊಂಡಿದ್ದಾರೆ.ನಟಿ ಅದಿತಿ ಪ್ರಭುದೇವರ ಮದುವೆಗೆ ನಟ ಎಸ್ ನಾರಾಯಣ ಕೂಡ ಬಂದು ಅದಿತಿ ಪ್ರಭುದೇವರವರ ಅರುಂಧತಿ ನಕ್ಷತ್ರ ತೋರಿಸುವ ಶಾಸ್ತ್ರದಲ್ಲಿ ಶಾಕ್ ನೀಡಿದ್ದಾರೆ.

 

 

ನಟಿ ಅದಿತಿ ಪ್ರಭುದೇವ ಹಾಗೂ ಉದ್ಯಮಿ ಯಶಸ್ವಿ ಮದುವೆ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನ ಹಲವಾರು ಸ್ಟಾರ್ ಸೆಲೆಬ್ರಿಟಿಗಳು ಇವರಿಗೆ ಮದುವೆಯ ಶುಭಾಶಯಗಳು ತಿಳಿಸಿದ್ದಾರೆ. ನವೆಂಬರ್ 26ರಂದು ಅರಿಶಿನ ಶಾಸ್ತ್ರ ನಡೆದಿತ್ತು ನವೆಂಬರ್ 27ರಂದು ಅದ್ದೂರಿ ಆರತಾಕ್ಷತೆ ಜೊತೆಗೆ ಮೆಹಂದಿ ಕೂಡ ನಡೆದಿತ್ತು ಸಂಗೀತ ಕಾರ್ಯಕ್ರಮವು ಇತ್ತು. ಅದಿತಿ ಪ್ರಭುದೇವ ಹಾಗೂ ಯಶಸ್ವಿರವರ ವಿವಾಹ ಮಹೋತ್ಸವಕ್ಕೆ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳು, ಶ್ರೀನಗರ ಕಿಟ್ಟಿ ,ಮೇಘ ಶೆಟ್ಟಿ, ರಂಜನಿ ರಾಘವನ್ ,ರಚನಾ ಮುಂತಾದ ಸೆಲೆಬ್ರಿಟಿಗಳು ಆಗಮಿಸಿ ನವದಂಪತಿಗಳಿಗೆ ಶುಭ ಕೋರಿದರು

ಇಷ್ಟೇ ಅಲ್ಲದೆ ಅದಿತಿ ಪ್ರಭುದೇವ ಹಾಗೂ ಅವರ ಪತಿ ಯಶಸ್ವಿ ರಾಜಕೀಯ ನಾಯಕರಿಗೂ ಕೂಡ ಆಹ್ವಾನವನ್ನು ನೀಡಿದ್ದು ಈ ಬೆನ್ನಲ್ಲೇ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಕೂಡ ಆಗಮಿಸಿ ವಧು ವರರಿಗೆ ಶುಭ ಕೋರಿದ್ದಾರೆ. ನಟಿ ಅದಿತಿ ಪ್ರಭುದೇವ ತಮ್ಮ ಮದುವೆ ಕಾರ್ಯಗಳ ಎಲ್ಲಾ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಾಕಿಕೊಂಡು ಅವರ ಅಭಿಮಾನಿಗಳಿಗೂ ಕೂಡ ಅಪ್ಡೇಟ್ಗಳನ್ನು ನೀಡುತ್ತಿದ್ದರು ಅವರು ತಮ್ಮ ಅರಿಶಿನ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದು ತಮ್ಮ ಮದುವೆ ಹಾಗೂ ಆರತಕ್ಷತೆಯ ಫೋಟೋಗಳನ್ನು ಹಂಚಿಕೊಳ್ಳಲಿ ಎಂದು ಅವರ ಅಭಿಮಾನಿಗಳು ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ನೋಡುತ್ತಾ ಕಾಯುತ್ತಿದ್ದಾರೆ.

 

 

ಅದಿತಿ ಪ್ರಭುದೇವ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪೂ ಮೂಡಿಸಿದ್ದು ಹಲವಾರು ಸಿನಿಮಾಗಳನ್ನು ಮಾಡಿ ಸಿನಿ ರಸಿಕರ ಮನಸ್ಸನ್ನು ಗೆದ್ದಿದ್ದಾರೆ. ಅದಿತಿ ಪ್ರಭುದೇವರ ನಟನೆಯಲ್ಲಿ ಮೂಡು ಬರುತ್ತಿರುವ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮೇಘ ಶೆಟ್ಟಿ ರಚನಾ ರವರು ಕೂಡ ನಟಿಸುತ್ತಿದ್ದು ಈ ಚಿತ್ರವು ಕಳೆದ ವಾರ ಅಷ್ಟೇ ಬಿಡುಗಡೆಯಾಗಿತ್ತು.

ನಟಿ ಅದಿತಿ ಪ್ರಭುದೇವ ಯಶಸ್ವಿ ರವರ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡ ದಿನವೂ ಕೂಡ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿ ತಮ್ಮ ಅಭಿಮಾನಿಗಳಿಗೆ ತಮ್ಮ ಮದುವೆಯ ವಿಚಾರವನ್ನು ತಿಳಿಸಿದರು ಗುರು ಹಿರಿಯರು ಬಂದು ಮಿತ್ರರು ಸೆಲೆಬ್ರಿಟಿಗಳ ನಡುವೆ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದು ಮದುವೆಯ ಕಾರ್ಯಗಳೆಲ್ಲವೂ ಮುಗಿದ ನಂತರ ಯಶಸ್ವಿ ಹಾಗೂ ಅದಿತಿ ಪ್ರಭುದೇವ ಅರಮನೆ ಮೈದಾನದಿಂದ ಹೊರಗೆ ಬಂದು ಅಶ್ವಿನಿ ನಕ್ಷತ್ರ ನೋಡುತ್ತಾ ಫೋಟೋಗೆ ಪೋಸ್ ನೀಡುತ್ತಿದ್ದರು ಆಗ ನಟ ಎಸ್ ನಾರಾಯಣ್ ಇದ್ದಕ್ಕಿದ್ದಂತೆ ಅಲ್ಲಿ ಪ್ರತ್ಯಕ್ಷವಾಗಿ ಅದಿತಿ ಪ್ರಭುದೇವರನ್ನು ಛೇಡಿಸುತ್ತಾ ಅರುಂಧತಿ ನಕ್ಷತ್ರ ಕಾಣುತ್ತಿದೆಯೇ ಎಂದು ತಮಾಷೆಯಾಗಿ ಮಾತನಾಡಿದ್ದಾರೆ.

 

 

ತದನಂತರ ಆದಿತಿ ಪ್ರಭುದೇವ ಎಸ್ ನಾರಾಯಣ್ ರವರನ್ನು ನೋಡಿ ಅವರ ಕಾಲಿಗೆ ಬಿದ್ದು ಆಶೀರ್ವಾದವನ್ನು ಕೂಡ ಪಡೆದುಕೊಂಡಿದ್ದಾರೆ. ಅದಿತಿ ಪ್ರಭುದೇವ ಹಾಗೂ ಯಶಸ್ ದಂಪತಿಗಳು ಎಸ್ ನಾರಾಯಣ್ ಹಾಗೂ ದಂಪತಿಗಳ ಬಳಿ ಮಾತನಾಡಿ ಯಾಕೆ ಇಷ್ಟು ತಡವಾಗಿ ಬಂದಿರಿ ಎಂದು ಅದಿತಿಯ ಎಸ್ ನಾರಾಯಣ್ ಗೆ ಅವಾಜ್ ಹಾಕಿದ್ದಾರೆ ಆಗ ಎಸ್ ನಾರಾಯಣ್ ಸ್ವಲ್ಪ ಕೆಲಸವಿತ್ತು ಆದ್ದರಿಂದ ತಡವಾಯಿತು ಎಂದು ಸಮಾಜಯಿಷಿ ನೀಡಿದ್ದಾರೆ. ತದನಂತರ ಅದಿತಿ ಪ್ರಭುದೇವ ಪೂಜೆ ಮಾಡಿ ಅರುಂಧತಿ ನಕ್ಷತ್ರವನ್ನು ನೋಡಿ ನಮಸ್ಕರಿಸಿದ್ದಾರೆ.

Leave a comment

Your email address will not be published. Required fields are marked *