ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಎನ್ನುವ ಹೆಸರಿನಿಂದಲೇ ಖ್ಯಾತಿ ಪಡೆದಿರುವ ನಟ ಅಮೀರ್ ಖಾನ್ ಅವರ ತಮ್ಮ ಪತ್ನಿ ಕಿರಣ್ ರಾವ್ ಅವರಿಗೆ ವಿಚ್ಚೇದನ ನೀಡುವ ವಿಷಯವನ್ನು, ಕಿರಣ್ ರಾವ್ ಅವರ ಜೊತೆಯಲ್ಲೇ ಪ್ರಕಟಣೆಯನ್ನು ಮಾಡಿದ್ದಾರೆ. ಹದಿನೈದು ವರ್ಷಗಳ ವೈವಾಹಿಕ ಜೀವನಕ್ಕೆ ಅವರು ಅಂತ್ಯ ಹಾಡುತ್ತಿರುವುದು ಎಲ್ಲರಿಗೂ ಒಂದು ಶಾಕ್ ನೀಡಿತ್ತು. ಇಬ್ಬರೂ ಸಹಾ ಪರಸ್ಪರ ಒಪ್ಪಿಕೊಂಡೇ ವಿಚ್ಚೇದನ ಪಡೆಯುತ್ತಿದ್ದೇವೆ ಎಂದು ಹೇಳಿದ್ದರು ಅಮೀರ್ ಖಾನ್ ಹಾಗೂ ಕಿರಣ್ ರಾವ್ ಅವರು. ಈ ಸ್ಟಾರ್ ದಂಪತಿಗಳ ವಿಚ್ಚೇದನದ ಸುದ್ದಿಯಾಗುತ್ತಲೇ ಅಭಿಮಾನಿಗಳು ವೈವಿದ್ಯಮಯ ಎನಿಸುವಂತಹ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅಲ್ಲದೇ ಬಹಳಷ್ಟು ಜನರು ಅಮೀರ್ ಹಾಗೂ ಕಿರಣ್ ರಾವ್ ವಿಚ್ಛೇದನಕ್ಕೆ ಮುಖ್ಯವಾದ ಕಾರಣ ಮತ್ತೊಬ್ಬ ನಟಿ ಎನ್ನುವ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ.
ಹೌದು ಅಭಿಮಾನಿಗಳು ಹಾಗೂ ನೆಟ್ಟಿಗರು ಅಮೀರ್ ಹಾಗೂ ಕಿರಣ್ ರಾವ್ ಅವರ ವಿಚ್ಚೇದನಕ್ಕೆ ಪರೋಕ್ಷವಾಗಿ ನಟಿ ಫಾತಿಮಾ ಸನಾ ಶೇಖ್. ಫಾತಿಮಾ ಬಗ್ಗೆ ಹೇಳುವುದಾದರೆ ಇವರು ಹುಟ್ಟಿದ್ದು ಹೈದರಾಬಾದ್ ನಲ್ಲಿ. ಇವರ ತಂದೆ ವಿಪಿನ್ ಶರ್ಮಾ ಕಾಶ್ಮೀರದ ಬ್ರಾಹ್ಮಣ ಪಂಡಿತರ ಕುಟುಂಬದೊಂದಿಗೆ ಸಂಬಂಧವನ್ನು ಹೊಂದಿದ್ದವರು. ತಾಯಿ ತಬಸ್ಸಮ್ ಅವರು ಶ್ರೀನಗರದ ಒಂದು ಮುಸ್ಲಿಂ ಕುಟುಂಬದಿಂದ ಬಂದಿರುವ ಮಹಿಳೆಯಾಗಿದ್ದಾರೆ. ಇವರ ಕುಟುಂಬದಲ್ಲಿ ಇಸ್ಲಾಂ ಅನ್ನು ಧರ್ಮವಾಗಿ ಸ್ವೀಕಾರ ಮಾಡಿದ್ದರಿಂದ, ನಟಿಯ ಹೆಸರನ್ನು ಸಹಾ ಅದೇ ಧರ್ಮದ ಅನುಸಾರವಾಗಿ ಫಾತಿಮಾ ಸನಾ ಶೇಖ್ ಎಂದು ಇಡಲಾಗಿದೆ.
ಫಾತಿಮಾ ತನ್ನ ಕೆರಿಯರ್ ಅನ್ನು ಬಾಲ ನಟಿಯಾಗಿ ಆರಂಭಿಸಿದರು. ಅವರು ಕಮಲ ಹಾಸನ್ ಹಾಗೂ ತಬು ನಟನೆಯ ಚಾಚಿ 420 ಸಿನಿಮಾದಲ್ಲಿ, ಕಮಲ ಹಾಸನ್ ಮತ್ತು ತಬು ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ಅವರು ಬಡೇ ದಿಲ್ವಾಲ ಹಾಗೂ ಒನ್ ಟು ಕಾ ಫೋರ್ ಸಿನಿಮಾಗಳಲ್ಲಿ ನಟಿಸಿದ್ದರು. ಒನ್ ಟು ಕಾ ಫೋರ್ ಸಿನಿಮಾದಲ್ಲಿ ಫಾತಿಮಾ ಶಾರೂಖ್ ಖಾನ್ ಮತ್ತು ಜೂಹಿ ಯ ಜೊತೆ ತೆರೆಯನ್ನು ಹಂಚಿಕೊಂಡಿದ್ದರು. ಇವೆಲ್ಲವುಗಳ ನಂತರ ದಂಗಲ್ ಸಿನಿಮಾದಲ್ಲಿ ಫಾತೀಮಾ ಗೆ ಲೀಡ್ ರೋಲ್ ದೊರೆಯಿತು. ಈ ಸಿನಿಮಾದಲ್ಲಿ ಫಾತಿಮಾ ಮತ್ತು ಸಾನಿಯಾ ಮಲ್ಹೋತ್ರ ಇಬ್ಬರೂ ಲೀಡ್ ರೋಲ್ ನಲ್ಲಿ ಸಿನಿಮಾಕ್ಕೆ ಎಂಟ್ರಿ ನೀಡಿದರು.
ಫಾತಿಮಾ ಮತ್ತು ಸಾನ್ಯಾ ಇಬ್ಬರೂ ದಂಗಲ್ ನಲ್ಲಿ ಅಮೀರ್ ಖಾನ್ ಅವರ ಮಕ್ಕಳ ಪಾತ್ರದಲ್ಲಿ ಕಾಣಿಸಿಕೊಂಡರು. ಅವರ ಪಾತ್ರಕ್ಕೆ ಬಹಳಷ್ಟು ಮೆಚ್ಚುಗೆ ಸಹಾ ಹರಿದು ಬಂದಿತ್ತು. ಇದಾದ ನಂತರ ಫಾತಿಮಾ ಅಮೀರ್ ಅವರ ಥಗ್ಸ್ ಆಫ್ ಹಿಂದೂಸ್ತಾನ್ ನಲ್ಲಿ ಸಹಾ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಚಿತ್ರೀಕರಣದ ವೇಳೆಯಲ್ಲೇ ಅಮೀರ್ ಮತ್ತು ಫಾತಿಮಾ ನಡುವಿನ ಅಫೇರ್ ಕುರಿತಾಗಿ ಸುದ್ದಿಗಳು ಹರಿದಾಡಿ ವೈರಲ್ ಆಗಲಾರಂಭಿಸಿತು. ಈ ಸುದ್ದಿಗಳ ಕುರಿತಾಗಿ ಅಮೀರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಫಾತಿಮಾ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, “ಮೊದಲು ನನಗೆ ಈ ವಿಷಯಗಳ ಕುರಿತಾಗಿ ಬೇಸರ ಎನಿಸುತ್ತಿತ್ತು. ಆದರೆ ಈಗ ಏನೂ ಅನಿಸುವುದಿಲ್ಲ, ಎಂದೂ ಭೇಟಿಯಾಗದವರು, ಸತ್ಯ ತಿಳಿಯದೇ ಹೀಗೆಲ್ಲಾ ಹೇಳುವುದನ್ನು, ಬರೆಯುವುದನ್ನು ನಾನು ಅಲಕ್ಷ್ಯ ಮಾಡುತ್ತೇನೆ” ಎಂದಿದ್ದರು.
ವೃತ್ತಿಯ ವಿಷಯವಾಗಿ ಬಂದರೆ ಫಾತಿಮಾ ಕೊನೆಯದಾಗಿ ಕಾಣಿಸಿಕೊಂಡಿದ್ದು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾದಂತಹ ಸಿನಿಮಾ ಅಜೀಬ್ ದಾಸ್ತಾ ಸಿನಿಮಾದಲ್ಲಿ ಕಂಡು ಬಂದಿದ್ದರು. ಈ ಸಿನಿಮಾ ವೀಕ್ಷಕರಿಗೆ ಬಹಳ ಮೆಚ್ಚುಗೆಯಾಗಿತ್ತು. ಇದಲ್ಲದೇ ಅದಕ್ಕೆ ಮೊದಲು ದಿಲ್ಜೀತ್ ದೊಸಾಂಜ್ ಮತ್ತು ಮನೋಜ್ ಬಾಜಪೇಯಿ ಜೊತೆಯಲ್ಲಿ ಸೂರಜ್ ಪರ್ ಮಂಗಲ್ ಭಾರೀ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಲ್ಯೂಡೋ ಮತ್ತು ಅಜೀಬ್ ದಾಸ್ತಾ ಸಿನಿಮಾಗಳ ಮೂಲಕ ಫಾತಿಮಾ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದರು. ಪ್ರಸ್ತುತ ಕೆಲವು ಹೊಸ ಪ್ರಾಜೆಕ್ಟ್ ಗಳಲ್ಲಿ ಫಾತಿಮಾ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.