ಅತಿ ಆಯ್ತಾ ರೂಪೇಶ್ ಶೆಟ್ಟಿ ಹುಚ್ಚಾಟ? ಪೊಲೀಸ್ ಠಾಣೆ ಮೆಟ್ಟಿಲೇರಿದ ಬಿಗ್ ಬಾಸ್ ಕಾಂಟೆಸ್ಟಂಟ್ ರೂಪೇಶ್ ಶೆಟ್ಟಿ ಕುಟುಂಬ

ಬಿಗ್ ಬಾಸ್ ಸೀಸನ್ 9ರಲ್ಲಿ ಮಿಂಚುತ್ತಿರುವ ಸ್ಪರ್ಧಿಗಳ ಪೈಕಿ ರೂಪೇಶ್ ಶೆಟ್ಟಿ ಅವರು ಕೂಡ ಒಬ್ಬರು. ಸದ್ಯ ಸುದ್ದಿಯಲ್ಲಿರುವ ರೂಪೇಶ್ ಶೆಟ್ಟಿ ಅವರಿಗೆ ಇದೀಗ ಕಂಟಕ ಒಂದು ಎದುರಾಗಿದೆ. ಗಡಿನಾಡ ಕನ್ನಡಿಗ ಎಂಬ ಖ್ಯಾತಿಯ ರೂಪೇಶ್ ಶೆಟ್ಟಿಗೆ ಇದೀಗ ಬೆದರಿಕೆ ಒಂದು ಬಂದಿದೆ. ರೂಪೇಶ್ ಶೆಟ್ಟಿಗೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಪೊಲೀಸರಿಗೆ ದೂರನ್ನು ನೀಡಿದ್ದಾರೆ. ತುಳುನಾಡಿನ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಸೀಸನ್ 9ರಲ್ಲಿ ಮಿಂಚುತ್ತಿದ್ದಾರೆ . ಇತ್ತೀಚೆಗೆ ಪ್ರಶಾಂತ ಸಂಬರ್ಗಿ ಗೆ ಕನ್ನಡ ಪರ ಹೋರಾಟಗಾರ ಎಂದು ಅವಮಾನಿಸಿದ್ದರು ಎಂದು ಉಗ್ರ ಹೋರಾಟವೂ ಕೂಡ ನಡೆದಿತ್ತು.

 

 

ನಾನು ಗಡಿ ನಾಡ ಕನ್ನಡಿಗ ಎಂದು ರೂಪೇಶ್ ಹೇಳಿದ ಹೇಳಿಕೆ ಇಂದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ವಿರೋಧಿಸುವ ಭರದಲ್ಲಿ ಕೆಲವರು ರೂಪೇಶ್ ಕುಟುಂಬಕ್ಕೆ ಬೆದರಿಕೆಯನ್ನು ಹಾಕಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ರೂಪೇಶ್ ವಿರುದ್ಧ ಕೀಳು ಮಟ್ಟದ ಕಮೆಂಟ್ಗಳು ಕೂಡ ಕಂಡುಬರುಟ್ಟಿವೆ. ಸದ್ಯಕ್ಕೆ ಕಿಡಿಗೇಡಿಗಳ ವಿರುದ್ಧ ರೂಪೇಶ್ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಬಿಗ್ ಬಾಸ್ ಸೀಸನ್ 9ರ 7ನೇ ವಾರದಲ್ಲಿ ಸಾನಿಯಾ ಅಯ್ಯರ್ ಅವರು ಎಲಿಮಿನೇಟ್ ಆಗಿದ್ದು ರೂಪೇಶ್ ರವರು ಸಾನಿಯಾ ರವರ ನೆನಪಿನಲ್ಲಿದ್ದಾರೆಂದು ಹೇಳಬಹುದು.

ಇದೀಗ ಬಿಗ್ ಬಾಸ್ ಮನೆಯ ಮಾತುಗಳು ಬಿಗ್ ಬಾಸ್ ಮನೆಯ ಹೊರಗೂ ಕೂಡ ವಿವಾದಗಳನ್ನು ಹುಟ್ಟುಹಾಕಿವೆ. ಕನ್ನಡ ರಾಜ್ಯೋತ್ಸವದ ದಿನದಂದು ರೂಪೇಶ್ ಶೆಟ್ಟಿ ಅವರು ನಾನು ಗಡಿನಾಡ ಕನ್ನಡಿಗ ಎಂದು ಹೇಳಿ ತಾನು ಹುಟ್ಟಿ ಬೆಳೆದ ಊರಿನ ಬಗ್ಗೆ ಮಾತನಾಡಿದೆ. ಆದರೆ ಇದು ಕೆಲವು ತುಳು ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ತುಳುನಾಡಿನಲ್ಲಿ ಹೆಸರು ಬೆಳೆಸಿ ಇದೀಗ ಗಡಿದಾಡ ಕನ್ನಡಿಗ ಎಂದು ಹೇಳಿರುವುದು ತುಳುನಾಡಿಗರಿಗೆ ಅಸಮಾಧಾನವನ್ನು ಉಂಟು ಮಾಡಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಚಾರಗಳು ವೈರಲಾಗುತ್ತಿವೆ. ಒಬ್ಬರು ಪರವಾದರೆ ಇನ್ನೊಬ್ಬರು ವಿರೋಧವಾಗಿದ್ದರೆ.

 

ತುಳುವರಲ್ಲಿ ಕೆಲವರು ರೂಪೇಶ್ ವರವಾಗಿ ನಿಂತರೆ ಇನ್ನೂ ಕೆಲವರು ವಿರೋಧವಾಗಿ ನಿಂತಿದ್ದಾರೆ. ರೂಪೇಶ್ ರ ಕುರಿತು ಹಲವು ಜನರು ಅಸಮಾಧಾನವನ್ನು ಉಂಟು ಮಾಡಿಕೊಂಡಿದ್ದಾರೆ. ಇದರಿಂದ ರೂಪೇಶ್ ಕುಟುಂಬಕ್ಕೆ ಕೂಡ ಬೆದರಿಕೆಗಳು ಕೇಳಿ ಬರುತ್ತೇವೆ. ನಾನು ಕಲಿತದ್ದು ತುಳುನಾಡಿನಲ್ಲಿ ಆದರೆ ಕನ್ನಡವನ್ನು ಕಲಿತೆ ಅದು ಗಡಿನಾಡು ಎಂದು ರೂಪೇಶ್ ಶೆಟ್ಟಿ ಅವರು ಹೇಳಿದ್ದಾರೆ. ನಾನು ಹುಟ್ಟಿದ್ದು ಮಂಗಳೂರಿನಿಂದ 30 ಕಿಲೋಮೀಟರ್ ದೂರದ ಕೇರಳದ ಕಾಸರಗೋಡಿನಲ್ಲಿ ನಾವು ಗಡಿನಾಡ ಕನ್ನಡಿಗರು ನಾವು ಕನ್ನಡವನ್ನು ಕಲಿಯಬೇಕು ಎಂದು ಕೊಂಡರು ಕೂಡ ಅಲ್ಲಿ ಕನ್ನಡವನ್ನು ಕಲಿಸುವುದು ಕಷ್ಟ ಅಲ್ಲಿ ಕನ್ನಡ ಕಲಿಸುವ ಗುರುಗಳು ಇಲ್ಲ ಆದರೆ, ನಾನು ಕೇರಳದಲ್ಲಿ ಇದ್ದರೂ ಕೂಡ ನಾನು ಕನ್ನಡ ಮೀಡಿಯಂನಲ್ಲಿ ಕಲಿತಿದ್ದು ಎಂದಿದ್ದಾರೆ.

ಕನ್ನಡ ಕಲಿತಿದ್ದರಿಂದ ನನಗೆ ಅಷ್ಟೊಂದು ಆತ್ಮವಿಶ್ವಾಸ ಬಂದಿದೆ ನಮ್ಮ ಗುರುಗಳು ಆತ್ಮವಿಶ್ವಾಸದಿಂದ ಕನ್ನಡವನ್ನು ಹೇಳಿಕೊಟ್ಟಿದ್ದಾರೆ. ಹೀಗೆ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ನಲ್ಲಿ ಈ ಹೇಳಿಕೆಯನ್ನು ನೀಡಿದ್ದರು. ತುಳುವರು ಎಂದು ಹೇಳಿಕೊಳ್ಳುತ್ತಿದ್ದರು ಇದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಕೆಲವರು ರೂಪೇಶ್ ಶೆಟ್ಟಿಯ ನಟಿಸಿರುವ ತುಳು ಚಿತ್ರಗಳನ್ನು ಬ್ಯಾನ್ ಮಾಡಬೇಕು ಎಂದು ಕೂಡ ಹೇಳಿದ್ದಾರೆ. ಇನ್ನು ಕೆಲವರು ಅವರ ಮಾತಿಗೆ ಬೆಂಬಲವನ್ನು ಸೂಚಿಸಿದ್ದಾರೆ.

 

 

ನಮ್ಮ ಬೆಂಬಲ ಏನಿದ್ದರೂ ತುಳುವಿಗೆ ಮಾತ್ರ ಆದರೆ, ಗಡಿನಾಡ ಕನ್ನಡಿಗನಿಗಲ್ಲ ಎಂದು ಪೋಸ್ಟ್ ಗಳು ಕೂಡ ಹರಿದಾಡುತ್ತಿವೆ. ರೂಪೇಶ್ ಶೆಟ್ಟಿ, ಬಿಗ್ ಬಾಸ್ ನಿಂದ ಹೊರಗೆ ಬಂದ ತಕ್ಷಣ ಗಡಿನಾಡಿಗೆ ಓಡಿಸಬೇಕು ಎನ್ನುವ ಮಾತುಗಳು ಕೂಡ ಕೇಳಿ ಬರುಟ್ಟಿವೆ. ರೂಪೇಶ್ ಕುಟುಂಬಕ್ಕೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಕುಟುಂಬದವರೂ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

Be the first to comment

Leave a Reply

Your email address will not be published.


*