ಕಿರಿಕ್ ಪಾರ್ಟಿ ಚಾಪ್ಟರ್ 2 ನಲ್ಲಿ ಆ ನಾಯಿ ಇರಲ್ಲ ಎಂದು ರಶ್ಮಿಕಾ ಮಂದಣ್ಣಗೆ ಮತ್ತೊಮ್ಮೆ ಟಾಂಗ್ ಕೊಟ್ಟ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿರವರು ಕಾಂತರಾ ಸಿನಿಮಾವನ್ನು ನಿರ್ದೇಶಿಸಿ ನಟಿಸಿ ಇದೀಗ ಸ್ಯಾಂಡಲ್ ಮಾತ್ರವಲ್ಲದೆ ಇಡೀ ದೇಶದಾದ್ಯಂತ ಸ್ಟಾರ್ ಆಗಿ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇವರ ಕಾಂತಾರ ಸಿನಿಮಾ ಇದಾಗಲೆ ಅರ್ಥ ಶತಕವನ್ನು ಪೂರೈಸಿದ್ದು ಇನ್ನೂ ಕೂಡ ತನ್ನ ಓಟವನ್ನು ಮುಂದುವರಿಸುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತರಾ ಸಿನಿಮಾದಲ್ಲಿ ಸಪ್ತಮಿ ಗೌಡರವರು ನಾಯಕ ನಟಿಯಾಗಿ ನಟಿಸಿದ್ದು ಇವರಿಗೂ ಕೂಡ ಹೆಚ್ಚು ಬೇಡಿಕೆ ಕಂಡುಬರುತ್ತದೆ. ನಟ ರಿಶಬ್ ಶೆಟ್ಟಿ ಇದೀಗ ಒಂದು ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ರವರಿಗೆ ಟಾಂಗ್ ನೀಡಿರುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ.

 

 

ಹೌದು ಗೆಳೆಯರೇ ನಟಿ ರಶ್ಮಿಕಾ ಮಂದಣ್ಣ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ರಕ್ಷಿತ್ ಶೆಟ್ಟಿ ರವರ ನಟನೆಯ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪರಿಚಯವಾಗುತ್ತಾರೆ. ಇತ್ತೀಚಿಗಷ್ಟೇ ಕರ್ಲಿ ಟೇಲ್ಸ್ ಎನ್ನುವ ಯೂಟ್ಯೂಬ್ ಚಾನೆಲ್ ನ ಸಂದರ್ಷನ ಒಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ನಾನು ಫ್ರೆಶ್ ಫೇಸ್ ಎನ್ನುವ ಕಂಟೆಸ್ಟೆಂಟ್ ನಲ್ಲಿ ಭಾಗವಹಿಸಿದ್ದೆ ಅದಕ್ಕೆ ನನ್ನ ಕೆಟ್ಟದಾದ ಫೋಟೋ ಒಂದನ್ನು ನೀಡಿದ್ದೆ ಆ ಫೋಟೋವನ್ನು ನೋಡಿ ಕಿರಿಕ್ ಪಾರ್ಟಿ ಸಿನಿಮಾದ ನಾಯಕ ನನ್ನ ಬೆನ್ನ ಹಿಂದೆ ಬಿದ್ದು ಈ ಸಿನಿಮಾದಲ್ಲಿ ನಟಿಸುವಂತೆ ಬೇಡಿಕೊಂಡಿದ್ದರು ಹಾಗಾಗಿ ನಾನು ಕೂಡ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ ಎಂದು ಕೈ ಬೆರಳುಗಳನ್ನು ತೋರಿಸುತ್ತಾ ವ್ಯಂಗ್ಯವಾಗಿ ಮಾತನಾಡಿದ್ದಾರೆ.

 

 

ಇದೀಗಾಗಲೇ ರಶ್ಮಿಕಾ ಮಂದಣ್ಣ ಕೊಡಗಿನ ಕುವರಿಯಾಗಿದ್ದರೂ ಕೂಡ ನನಗೆ ಕನ್ನಡ ಮಾತನಾಡುವುದು ಕಷ್ಟ ಎಂದು ಹೇಳಿ ಎಲ್ಲರಿಂದ ಟ್ರೋಲ್ ಗೆ ಒಳಗಾಗಿದ್ದರು. ನಟಿ ರಶ್ಮಿಕಾ ಮಂದಣ್ಣ ಕನ್ನಡ ತುಂಬಾ ಕಷ್ಟ ಎಂದು ಹೇಳಿ ನಂತರ ತೆಲುಗು ಇಂಡಸ್ಟ್ರಿಗೆ ಹೋಗಿ ತೆಲುಗು ಕಲಿತಿದ್ದಾರೆ. ತಮಿಳು ಇಂಡಸ್ಟ್ರಿಗೆ ಹೋಗಿ ತಮಿಳು ಕೂಡ ಕಲಿತಿದ್ದಾರೆ ಈಗ ಎಲ್ಲಾ ಭಾಷೆಗಳನ್ನು ಕಲಿಯುತ್ತಿರುವ ರಶ್ಮಿಕ ಕನ್ನಡ ಮಾತ್ರ ಕಷ್ಟ ಎಂದು ಹೇಳಿರುವುದು ಸಮಂಜಸವಾದದಲ್ಲ ಎಂದು ಕನ್ನಡಿಗರು ಇವರ ಬಗ್ಗೆ ಗರಂ ಆಗಿದ್ದಾರೆ.

 

 

ಆದರೆ ರಶ್ಮಿಕ ಮಂದಣ್ಣ ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದೆ ತನ್ನನ್ನು ಸ್ಯಾಂಡಲ್ವುಡ್ ಗೆ ಪರಿಚಯ ಮಾಡಿದ ಮೊದಲ ಸಿನಿಮಾ ಕಿರಿಕ್ ಪಾರ್ಟಿಯ ಬಗ್ಗೆ ಎಲ್ಲಿಯೂ ಕೂಡ ಮಾತನಾಡದೆ ಇವರಿಗೆ ಮೊದಲ ಅವಕಾಶ ಕೊಟ್ಟ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಅವರನ್ನು ಕಡೆಗಾಣಿಸುತ್ತಿದ್ದಾರೆ ತಾವು ಯಶಸ್ಸಿನ ಮೆಟ್ಟಿಲನ್ನು ಏರಿದ್ದು ಈಗ ತಾವು ಹತ್ತಿದ ಮೆಟ್ಟಿಲುಗಳನ್ನು ಅನ್ನು ಕೆಡವುವಂತೆ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ರವರ ಬಗ್ಗೆ ರಶ್ಮಿಕ ಮಂದಣ್ಣ ಈ ರೀತಿ ವ್ಯಂಗ್ಯವಾಗಿ ಮಾತನಾಡಿರುವುದು ಅವರ ಅಭಿಮಾನಿಗಳಿಗೆ ಬೇಸರವನ್ನು ತಂದಿದೆ.

 

 

ರಶ್ಮಿಕಾ ರವರ ಬಗ್ಗೆ ಕಿರಿಕ್ ಪಾರ್ಟಿ ಸಿನಿಮಾದ ತಂಡದ ಕಲಾವಿದರು ಅಥವಾ ಯಾವುದೇ ಕಲಾವಿದರನ್ನು ಕೇಳಿದರು ಕೂಡ ಅವರು ನಮ್ಯವಾಗಿ ಉತ್ತರಿಸುತ್ತಾ ಅವರಿಗೆ ಸಮಯವಾಗಿಲ್ಲ ಅದಕ್ಕಾಗಿ ಕಾಂತರಾ ಸಿನಿಮಾದ ಬಗ್ಗೆ ಮಾತನಾಡಿಲ್ಲ ಅವರು ಫ್ರೀ ಆದಾಗ ಮಾತನಾಡುತ್ತಾರೆ ಎಂದು ಒಳ್ಳೆಯ ರೀತಿಯಲ್ಲಿ ಉತ್ತರಿಸುತ್ತಿದ್ದಾರೆ ಆದರೆ ರಿಷಬ್ ಶೆಟ್ಟಿ ರವರು ಇವರ ಮಾತುಗಳನ್ನು ಕೇಳಿ ಇವರನ್ನು ಹೀಗೆ ಬಿಟ್ಟರೆ ಸರಿಯಾಗುವುದಿಲ್ಲವೆಂದು ಒಂದು ಸಂದರ್ಶನದಲ್ಲಿ ರಶ್ಮಿಕ ಬಗ್ಗೆ ಮಾತನಾಡಿ ನನಗೆ ಸಮಂತ ಹಾಗೂ ಸಾಯಿ ಪಲ್ಲವಿ ರವರ ನಟನೆ ಎಂದರೆ ತುಂಬಾ ಇಷ್ಟ ನಾವು ಅವಕಾಶ ನೀಡಿದಾಗ ಅದನ್ನು ಬಳಸಿಕೊಂಡು ನಂತರ ನಮ್ಮನೆ ದೂರ ತಳ್ಳುವವರನ್ನು ನಾನು ನಂಬುವುದಿಲ್ಲ ನಾನು ಹೊಸ ಕಲಾವಿದರ ಜೊತೆ ನಟಿಸುವುದಕ್ಕೆ ಇಷ್ಟಪಡುತ್ತೇನೆ ಎಂದಿದ್ದರು.

 

ಸಂದರ್ಶಕರು ಕಿರಿಕ್ ಪಾರ್ಟಿ ಚಾಪ್ಟರ್ ಎರಡರಲ್ಲಿ ರಶ್ಮಿಕ ಮಂದಣ್ಣ ರವರ ಪಾತರ ಇರುತ್ತದೆಯೋ ಎಂದು ಕೇಳಿದಾಗ ಅದಕ್ಕೂ ಕೂಡ ರಿಷಬ್ ಶೆಟ್ಟಿ ಉತ್ತರಿಸಿ ಕಿರಿಕ್ ಪಾರ್ಟಿ ಚಾಪ್ಟರ್ ಒಂದರಲ್ಲಿ ರಶ್ಮಿಕಾ ರವರ ಪಾತ್ರ ಇದೀಗಾಗಲೇ ಮುಗಿದು ಹೋಗಿದೆ. ಇಂಟರ್ವಲ್ ಗಿಂತ ಮೊದಲೇ ಅವರು ಆ ಚಿತ್ರದಲ್ಲಿ ಸತ್ತು ಹೋಗುತ್ತಾರೆ ಹಾಗಾಗಿ ಅವರ ಕ್ಯಾರೆಕ್ಟರ್ ಕೂಡ ಸತ್ತು ಹೋಗಿದೆ ಎಂದು ಹೇಳುವ ಮೂಲಕ ರಶ್ಮಿಕಾ ಮಂದಣ್ಣ ರವರಿಗೆ ಟಾಂಗ್ ನೀಡಿದ್ದಾರೆ.

Leave a Reply

Your email address will not be published.


*