ಇಂಥ ನಟಿಯರು ನನಗೆ ಅಸ್ಯಹ:ತಮ್ಮದೇ ಶೈಲಿಯಲ್ಲಿ ರಶ್ಮಿಕಾ ಮಂದಣ್ಣರವರನ್ನು ನ್ಯಾಷನಲ್ ಲೆವೆಲ್ ನಲ್ಲಿ ಉರಿಸಿದ ರಿಷಬ್ ಶೆಟ್ಟಿ

ನಟಿ ರಶ್ಮಿಕಾ ಮಂದಣ್ಣ ರವರು ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ತದನಂತರ ರಶ್ಮಿಕಾ ರವರಿಗೆ ಹಲವಾರು ಆಫರ್ ಗಳು ಹುಡುಕಿಕೊಂಡು ಬಂದವು ಇವರು ತೆಲುಗಿನಲ್ಲಿ ವಿಜಯ್ ದೇವರಕೊಂಡ ನಟನೆಯ ಗೀತ ಗೋವಿಂದಂ ಎಂಬ ಚಿತ್ರದಲ್ಲೂ ಕೂಡ ನಟಿಸಿದ್ದರು. ಈ ಚಿತ್ರವೂ ಕೂಡ ಸೂಪರ್ ಹಿಟ್ ಆಗಿ ರಶ್ಮಿಕ ಮಂದಣ್ಣರವರು ನ್ಯಾಷನಲ್ ಲೆವೆಲ್ ನಲ್ಲಿ ಫೇಮಸ್ ಆದರೂ ಈ ಹಿಂದೆ ರಶ್ಮಿಕಾ ಮಂದಣ್ಣ ರವರು ಒಂದು ಸಂದರ್ಶನದಲ್ಲಿ ಪರಂಬ ಸ್ಟುಡಿಯೊಸ್ ಚಿತ್ರತಂಡದ ಹೆಸರನ್ನು ಹೇಳಲು ಹಾಗೂ ರಿಷಬ್ ಶೆಟ್ಟಿ ಅವರ ಹೆಸರನ್ನು ಹೇಳಲು ಹಿಂದೇಟು ಹಾಕಿದ್ದರು ತಮ್ಮದೇ ರೀತಿಯಲ್ಲಿ ರಶ್ಮಿಕಾ ಮಂದಣ್ಣ ಟಾಂಗ್ ನೀಡಿದ್ದಾರೆ.

 

 

ಇವರು ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ರಕ್ಷಿತ್ ಶೆಟ್ಟಿ ಅವರ ನಟನೆಯ ಕಿರಿಕ್ ಪಾರ್ಟಿಯ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದ್ದರು ಕೂಡ ಇವರು ಹಲವಾರು ಕಡೆ ಹಲವಾರು ಬಗೆಯ ಹೇಳಿಕೆಗಳನ್ನು ನೀಡಿದ್ದರು ಇದರಿಂದ ಎಲ್ಲಾ ಕಡೆ ಟ್ರೋಲ್ ಕೂಡ ಆಗಿದ್ದರು. ಈ ಹಿಂದೆ ಕರ್ರಿ ಟೇಲ್ಸ್ ಎನ್ನುವ ಸಂದರ್ಶನ ಒಂದರಲ್ಲಿ ಮಾತನಾಡಿದ ರಶ್ಮಿಕ ಮಂದಣ್ಣ ನಾನು ಫ್ರೆಶ್ ಫೇಸ್ ಎನ್ನುವ ಕಂಟೆಸ್ಟೆಂಟ್ ಗೆ ಫೋಟೋವನ್ನು ನೀಡಿದ್ದೆ ಅದನ್ನು ನೋಡಿದ ಕಿರಿಕ್ ಪಾರ್ಟಿಯ ನಟ ನನ್ನ ಹಿಂದೆ ಬಿದ್ದು ಆ ಚಿತ್ರದಲ್ಲಿ ನಟಿಸುವಂತೆ ಬೇಡಿಕೊಂಡಿದ್ದರು ಅದಕ್ಕಾಗಿ ನಾನು ಆ ಚಿತ್ರದಲ್ಲಿ ನಟಿಸಿದೆ ಎಂದು ಹೇಳಿದರು.

 

 

ನಟಿ ರಶ್ಮಿಕಾ ಮಂದಣ್ಣ ರವರು ಸಂದರ್ಶನದಲ್ಲಿ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹಾಗೂ ಪರಂಬ ಸ್ಟುಡಿಯೋಸ್ ಹೆಸರು ಹೇಳದೇ ವ್ಯಂಗ್ಯವಾಗಿ ಬೆರಳನ್ನು ತೋರಿಸುತ್ತಾ ನಾನು ಫ್ರೆಶ್ ಫೇಸ್ ಕಂಟೆಸ್ಟೆಂಟ್ ನಲ್ಲಿ ಒಂದು ಕೆಟ್ಟ ಫೋಟೋವನ್ನು ನೀಡಿದ್ದೆ ಆ ಫೋಟೋವನ್ನು ನೋಡಿ ಕಿರಿಕ್ ಪಾರ್ಟಿ ಸಿನಿಮಾದ ನಿರ್ದೇಶಕರು ಹಾಗೂ ನಟರು ನನ್ನ ಹಿಂದೆ ದುಂಬಾಲು ಬಿದ್ದು ನನ್ನನ್ನು ಆ ಚಿತ್ರದಲ್ಲಿ ನಟಿಸುವಂತೆ ಕೋರಿಕೊಂಡರು ಆ ಸಮಯದಲ್ಲಿ ಕಿರಿಕ್ ಪಾರ್ಟಿ ಚಿತ್ರಕ್ಕೆ ನಿರ್ದೇಶಕರು ಹೀರೋಯಿನ್ ಕೂಡ ಹುಡುಕುತ್ತಿದ್ದರು ನಾನು ಇಷ್ಟವಿಲ್ಲ ಎಂದು ಹೇಳಿದ್ದರು ಕೂಡ ಪದೇ ಪದೇ ಕಾಲ್ ಮಾಡಿ ನನ್ನನ್ನು ನಟಿಸುವಂತೆ ಒತ್ತಾಯ ಮಾಡಿದ್ದು ಆದ್ದರಿಂದ ಆ ಚಿತ್ರದಲ್ಲಿ ನಟಿಸಿದೆ ಎಂದು ರಶ್ಮಿಕಾ ಮಂದಣ್ಣ ವ್ಯಂಗ್ಯವಾಗಿ ಮಾತನಾಡಿದ್ದಾರೆ.

 

 

ಈ ಹಿಂದೆ ಈ ಸಂದರ್ಶನವನ್ನು ನೋಡಿದ ಜನರೆಲ್ಲರೂ ಇವರ ಬಗ್ಗೆ ಟ್ರೋಲ್ ಮಾಡುತ್ತಾ, ರಶ್ಮಿಕ ಮಂದಣ್ಣ ತಾವು ಹತ್ತಿದ ಏಣಿಯನ್ನೆ ಒದೆಯುತ್ತಿದ್ದಾರೆ. ತಾವು ಮೊದಲು ನಟಿಸಿದ ಸಿನಿಮಾ ಹಾಗೂ ಅವರಿಗೆ ಮೊದಲ ಅವಕಾಶ ನೀಡಿದ ನಿರ್ದೇಶಕ ನಟರ ಹೆಸರನ್ನು ಹೇಳದೆ ಅವರ ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತಿದ್ದಾರೆ ಇವರಿಗೆ ಸ್ವಲ್ಪವೂ ಕೂಡ ತಾನು ಪ್ರಾರಂಭದಿಂದ ಬಂದ ಜರ್ನಿಯ ಬಗ್ಗೆ ಹಾಗೂ ಅವಕಾಶ ನೀಡಿದವರ ಬಗ್ಗೆ ಕಿಂಚಿತ್ತು ಗೌರವ ಇಲ್ಲ ಎಂದು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.

 

 

ರಿಷಬ್ ಶೆಟ್ಟಿ ರವರು ಗುಲ್ಟೋ ಡಾಟ್ ಕಾಮ್ ನಲ್ಲಿ ನಡೆದ ಸಂದರ್ಶನ ಒಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ರವರಿಗೆ ತಿರುಗೇಟು ನೀಡಿದ್ದಾರೆ. ಒಂದು ಸಂದರ್ಶನದಲ್ಲಿ ರಿಷಬ್ ಶೆಟ್ಟಿ ರವರನ್ನು ನೀವು ಕೀರ್ತಿ ಸುರೇಶ್, ಸಾಯಿ ಪಲ್ಲವಿ, ರಶ್ಮಿಕಾ ಮಂದಣ್ಣ ,ಸಮಂತಾ ಈ ನಾಲ್ವರಲ್ಲಿ ಯಾರ ಜೊತೆ ನಟಿಸಲು ಇಷ್ಟಪಡುತ್ತೀರಿ ಎಂದಾಗ ನಟ ರಿಷಬ್ ಶೆಟ್ಟಿ ಮಾತನಾಡಿ

 

“ಸ್ಕ್ರಿಪ್ಟ್ ಮುಗಿದ ಮೇಲೆ ನಾನು ಕಲಾವಿದರ ಬಗ್ಗೆ ಯೋಚಿಸುತ್ತೇನೆ, ಹಾಗೆ ಹೊಸ ಕಲಾವಿದರ ಜೊತೆ ನಟಿಸಲು ಕೂಡ ಇಷ್ಟಪಡುತ್ತೇನೆ ನೀವು ಹೇಳಿದ ಹೆಸರುಗಳಲ್ಲಿ ಅಂತಹವರನ್ನು ಕಂಡರೆ ನನಗೆ ಇಷ್ಟವಾಗುವುದಿಲ್ಲ” ಎಂದು ಕೂಡ ಹೇಳಿದ್ದಾರೆ. ನನಗೆ ಸಾಯಿ ಪಲ್ಲವಿ ಹಾಗೂ ಸಮಂತ ರವರ ಘಟನೆ ಎಂದರೆ ತುಂಬಾ ಇಷ್ಟ ಇದೀಗ ನಟಿ ಸಮಂತ ರವರು ಮಯೋ ಸಿಟಿಸ್ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದು ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದಿದ್ದಾರೆ. ಈ ಮಾತನ್ನು ಕೇಳಿದ ಜನರು ರಿಷಬ್ ಶೆಟ್ಟಿರವರು ಪರೋಕ್ಷವಾಗಿ ರಶ್ಮಿಕ ಮಂದಣ್ಣರವರಿಗೆ ಈ ಮಾತನ್ನು ಹೇಳಿದ್ದಾರೆ ಎಂದು ಎಲ್ಲಾ ಕಡೆ ನ್ಯಾಷನಲ್ ಲೆವೆಲ್ ನಲ್ಲಿ ಮತ್ತೆ ರಶ್ಮಿಕಾ ಮಂದಣ್ಣ ರವರನ್ನು ಟ್ರೋಲ್ ಮಾಡುತ್ತಿದ್ದಾರೆ.

2 Comments

  1. ಮೊದಲಿನಿಂದಲೂ ಹೇಳುತ್ತಿದ್ದೆ, ಈಕೆ ದುರಹಂಕಾರಿ, ಅವಕಾಶವಾದಿ, ಸ್ವಾರ್ಥಿ ಅಂತ. ಸಧ್ಯ, ಈಗಲಾದರೂ ಗೊತ್ತಾಗುತ್ತಿದೆಯಲ್ಲ

Leave a Reply

Your email address will not be published.


*