ಅಂಬರೀಷ್ ಜೊತೆ ಸಣ್ಣಪುಟ್ಟ ಹೆಸರಿಲ್ಲದ ಪಾತ್ರಗಳನ್ನು ಮಾಡುತ್ತಿದ್ದ ರಿಷಬ್ ಶೆಟ್ಟಿ: ಸಿನಿಮಾ ಪಾತ್ರಗಳ ವಿವರ ಇಲ್ಲಿದೇ ನೋಡಿ

ಕಾಂತರಾ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್ ನಟನಾಗಿ ಮೆರೆಯುತ್ತಿರುವ ರಿಷಬ್ ಶೆಟ್ಟಿ ರವರು ಈ ಹಿಂದೆ ಹಲವಾರು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಾ ಹೆಸರಿಲ್ಲದ ಪಾತ್ರಗಳನ್ನು ಕೂಡ ಒಪ್ಪಿಕೊಂಡು ಆ ಚಿತ್ರಗಳಲ್ಲಿ ನಟಿಸಿದ್ದರು ಇದರ ಬಗ್ಗೆ ವಿವರಗಳು ಇಲ್ಲಿವೆ.

ನಮ್ ಏರಿಯಾದಲ್ಲಿ ಒಂದು ದಿನ

 

 

2010ರಲ್ಲಿ ತೆರೆ ಕಂಡ ನಮ್ಮ ಏರಿಯಾದಲ್ಲಿ ಒಂದು ದಿನ ಈ ಚಿತ್ರವು ಕನ್ನಡದ ರೋಮ್ಯಾಂಟಿಕ್ ಡ್ರಾಮಾ ಆಗಿದ್ದು ಇದನ್ನು ಅರವಿಂದ್ ಕೌಶಿಕ್ ರವರು ನಿರ್ದೇಶಿಸಿದ್ದರು ಈ ಚಿತ್ರದಲ್ಲಿ ಅನಿಶ್ ತೇಜಸ್ವರ್, ಮೇಘನಾ ರಕ್ಷಿತ್ ಶೆಟ್ಟಿ ರವರೆಲ್ಲರೂ ನಟಿಸಿದ್ದರು ನಮ್ಮ ಏರಿಯಾದಲ್ಲಿ ಒಂದು ದಿನ ಚಿತ್ರವು 2008ರಲ್ಲಿ ತನ್ನ ಶೂಟಿಂಗ್ ಅನ್ನು ಮುಗಿಸಿದ್ದು ಕೆಲವು ಕಾರಣಗಳಿಂದ ಇದು 2010ರಲ್ಲಿ ಬಿಡುಗಡೆಯಾಯಿತು ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಒಂದು ಹೆಸರಿಲ್ಲದ ಪಾತ್ರದಲ್ಲಿ ನಟಿಸಿದ್ದರು.

ತುಗಲಕ್

 

 

2012ರ ರಕ್ಷಿತ್ ಶೆಟ್ಟಿಯ ಅಭಿನಯದಲ್ಲಿ ಮೂಡಿಬಂದ ತುಘಲಕ್ ಚಿತ್ರದಲ್ಲಿ ಕಾಂತಾರದ ಹೀರೋ ರಿಷಬ್ ಶೆಟ್ಟಿ ನಟಿಸಿದ್ದರು ಈ ಚಿತ್ರದಲ್ಲೂ ಕೂಡ ಹೆಸರಿಲ್ಲದ ಒಂದು ಪಾತ್ರವನ್ನು ರಿಷಬ್ ಶೆಟ್ಟಿ ನಿರ್ವಹಿಸಿದ್ದರು ತುಗಲಕ್ ಚಿತ್ರವನ್ನು ನಿರ್ದೇಶಕ ಅರವಿಂದ್ ಕೌಶಿಕ್ ನಿರ್ದೇಶಿಸಿದ್ದರು

ಅಟ್ಟಹಾಸ

 

 

ಎ ಎಂ ಆರ್ ರಮೇಶ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಅಟ್ಟಹಾಸ ಎನ್ನುವ ಸಿನಿಮಾ 2013ರಲ್ಲಿ ತೆರೆ ಕಂಡಿದ್ದು ಈ ಚಿತ್ರದಲ್ಲಿ ಕಿಶೋರ್ ಹಾಗೂ ಅರ್ಜುನ್ ಸರ್ಜಾ ಅವರು ನಟಿಸಿದ್ದರು ಈ ಚಿತ್ರದಲ್ಲೂ ಕೂಡ ರಿಷಬ್ ಶೆಟ್ಟಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದರು.

ಲೂಸಿಯಾ

 

 

ರಿಷಬ್ ಶೆಟ್ಟಿ ಹಾಗೂ ಪವನ್ ಕುಮಾರ್ ರವರ ನಿರ್ದೇಶನದಲ್ಲಿ 2013ರಲ್ಲಿ ಲೂಸಿಯಾ ಎಂಬ ಚಿತ್ರವು ಮೂಡಿ ಬಂದಿದ್ದು ಈ ಚಿತ್ರವು ಕನ್ನಡ ಚಿತ್ರರಂಗಕ್ಕೆ ಒಂದು ಹೊಸ ತಿರುವನ್ನು ನೀಡಿತ್ತು. ಈ ಚಿತ್ರದಲ್ಲಿ ನಾಯಕನಟನಾಗಿ ಸತೀಶ್ ನೀನಾಸಂ ಹಾಗೂ ನಾಯಕಿಯಾಗಿ ಶ್ರುತಿ ಹರಿಹರನ್ ನವರು ನಟಿಸಿದ್ದರು ಪೊಲೀಸ್ ಪೇದೆಯ ಪಾತ್ರವನ್ನು ರಿಷಬ್ ಶೆಟ್ಟಿ ಮಾಡುತ್ತಿದ್ದರು

ರಿಕ್ಕಿ

 

 

ರಿಷಬ್ ಶೆಟ್ಟಿ ರವರ ನಿರ್ದೇಶನದಲ್ಲಿ ಮೂಡಿ ಬಂದ ರಿಕ್ಕಿ ಸಿನಿಮಾವು 2016ರಲ್ಲಿ ಬಿಡುಗಡೆಯಾಗುತ್ತದೆ. ಈ ಸಿನಿಮಾವು ಒಂದು ಆಕ್ಷನ್ ಥ್ರಿಲ್ಲರ್ ಕ್ರೈಂ ಸಿನಿಮಾ ವಾಗಿದ್ದು ಈ ಸಿನಿಮಾವನ್ನು ಎಸ್‌ವಿ ಬಾಬುರವರು ನಿರ್ಮಿಸಿದ್ದರು ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ನಟಿ ಹರಿಪ್ರಿಯಾ ರವರು ಲೀಡ್ ರೋಲ್ನಲ್ಲಿ ನಟಿಸಿದ್ದರು. ರಿಕ್ಕಿ ಸಿನಿಮಾದಲ್ಲೂ ಕೂಡ ರಿಷಬ್ ಶೆಟ್ಟಿ ರವರು ಒಂದು ಹೆಸರಿಲ್ಲದ ಪಾತ್ರವನ್ನು ನಿರ್ವಹಿಸಿದ್ದರು

ಉಳಿದವರು ಕಂಡಂತೆ

 

 

ರಕ್ಷಿತ್ ಶೆಟ್ಟಿ ರವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಉಳಿದವರು ಕಂಡಂತೆ ಎನ್ನುವ ಸಿನಿಮಾದಲ್ಲೂ ಕೂಡ ರಿಷಬ್ ಶೆಟ್ಟಿಯವರು ಒಂದು ಸಣ್ಣ ಪಾತ್ರವನ್ನು ನಿರ್ವಹಿಸಿದ್ದು ಈ ಚಿತ್ರವು ಒಬ್ಬ ಮನುಷ್ಯನು ಒಂದು ಮರ್ಡರ್ ಕೇಸ್ ಅನ್ನು ಕಂಡುಹಿಡಿಯುವ ಕಥೆಯನ್ನು ಒಳಗೊಂಡಿದೆ ಈ ಚಿತ್ರವು 2014ರಲ್ಲಿ ರಿಲೀಸ್ ಆಗಿದ್ದು ಫಿಲಂ ಫೇರ್ ಅವಾರ್ಡ್ ಗೂ ಕೂಡ ಪಾತ್ರವಾಗಿತ್ತು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

 

 

2018ರಲ್ಲಿ ರಿಷಬ್ ಶೆಟ್ಟಿ ರವರ ನಿರ್ದೇಶನದಲ್ಲಿ ಮೂಡಿಬಂದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಎಂಬ ಚಿತ್ರದಲ್ಲಿ ಕೇರಳದ ಗಡಿಭಾಗದಲ್ಲಿರುವ ಕನ್ನಡ ಮೀಡಿಯಂ ಸ್ಕೂಲಿನ ಬಗ್ಗೆ ರಿಷಬ್ ಶೆಟ್ಟಿ ರವರು ಕಥೆಯನ್ನು ಹೆಣದಿದ್ದರು ಈ ಚಿತ್ರದಲ್ಲೂ ಕೂಡ ನಿರ್ದೇಶಕರು ಸಣ್ಣದೊಂದು ಪಾತ್ರವನ್ನು ನಿರ್ವಹಿಸಿದ್ದರು

ಅಂಬಿ ನಿಂಗೆ ವಯಸ್ಸಾಯ್ತು

 

 

ಅಂಬರೀಶ್ ಹಾಗೂ ಸುದೀಪ್ ರವರ ನಟನೆಯ ಅಂಬಿ ನಿಂಗೆ ವಯಸ್ಸಾಯ್ತು ಎಂಬ ಚಿತ್ರದಲ್ಲಿ ರಿಷಬ್ ಶೆಟ್ಟಿ ರವರು ನಿರ್ದೇಶಕನ ಪಾತ್ರವನ್ನು ಮಾಡಿದ್ದು ಈ ಚಿತ್ರವು 2018ರಲ್ಲಿ ತೆರೆಕಂಡಿತ್ತು.

 

ರಿಷಬ್ ಶೆಟ್ಟಿ ಇದೀಗ ಕಾಂತರಾ ಸಿನಿಮಾದ ಸಕ್ಸಸ್ ಅನ್ನು ಪಡೆದುಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್ ನಟನಾಗಿದ್ದಾರೆ. ಇಂದು ದೇಶದಾದ್ಯಂತ ಹಲವಾರು ಜನರಿಗೆ ಪರಿಚಯವಾಗಿದ್ದಾರೆ ಇವರು ಕಾಂತರಾ ಸಿನಿಮಾ ಮಾಡುವುದಕ್ಕಿಂತ ಮೊದಲು ಹಲವಾರು ಸಿನಿಮಾಗಳನ್ನು ನಿರ್ದೇಶಿಸಿದ್ದು ನಟಿಸಿದ್ದಾರೆ. ಹಲವಾರು ಸಿನಿಮಾಗಳಲ್ಲಿ ಹೆಸರಿಲ್ಲದೆ ಇರುವ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಕನ್ನಡ ಫಿಲಂ ಇಂಡಸ್ಟ್ರಿಯಲ್ಲಿ ಮುಂದುವರಿದು ಇಂದು ಪಾನ್ ಇಂಡಿಯಾ ಮಟ್ಟದ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

Be the first to comment

Leave a Reply

Your email address will not be published.


*