ಕನ್ನಡ ಚಿತ್ರರಂಗದ ಅನೇಕ ನಟರು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ನಟನೆಯ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ನಮ್ಮ ಕನ್ನಡ ಚಿತ್ರರಂಗದ ಮತ್ತೊಬ್ಬ ವಿಭಿನ್ನ ನಟ ಮತ್ತು ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ. ಹೌದು ರಿಯಲ್ ಸ್ಟಾರ್ ಉಪೇಂದ್ರ ತಮ್ಮ ವಿಭಿನ್ನ ನಿರ್ದೇಶನ ಹಾಗೂ ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ರಿಯಲ್ ಸ್ಟಾರ್ ಎಂಬ ಬಿರುದು ಪಡೆದಿದ್ದಾರೆ. ಇತ್ತೀಚೆಗೆ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಹೌದು, ನಟ, ನಿರ್ದೇಶಕರಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಅವರು ಪ್ರಜಾಕೀಯ ಎಂಬ ಪಕ್ಷದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗ ಕುಟುಂಬ ಸಮೇತ ರೆಸಾರ್ಟ್ ನಲ್ಲಿ ವಾಸವಾಗಿದ್ದು, ಈಗ ಮನೆ ಕಟ್ಟಿಕೊಂಡಿದ್ದಾರೆ. ಆ ಮನೆ ಈಗ ಎಲ್ಲಿದೆ? ಹೇಗಿದ್ದೀಯಾ ಅದು ಮನೆಗೆ ಹೇಗೆ ಬಂದೆ? ಇತ್ಯಾದಿ ಮಾಹಿತಿಯನ್ನು ಕೆಳಗೆ ನೀಡಲಾಗಿದೆ, ಅದನ್ನು ಸಂಪೂರ್ಣವಾಗಿ ಓದಿ. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.
ಇನ್ನು ಉಪೇಂದ್ರ ಅವರು ರಾಜಕೀಯ ಶುರು ಮಾಡಿದ್ದು ರೆಸಾರ್ಟ್ ನಿಂದಲೇ. ಬೆಂಗಳೂರಿನಿಂದ ಸ್ವಲ್ಪ ದೂರದಲ್ಲಿರುವ ತಾವರೆಕೆರೆಯ ಚುಂಚನಕುಪ್ಪೆ ಬಳಿ ಇರುವ ರೆಸಾರ್ಟ್ ಒಂದರಲ್ಲಿ ಇವರು ಕುಟುಂಬದೊಂದಿಗೆ ನೆಲೆಸಿದ್ದಾರೆ. ಇನ್ನು ಇದೆ ರೆಸಾರ್ಟ್ ಹಿಂಭಾಗದಲ್ಲಿ ಹೊಸ ಮನೆಯನ್ನು ಕೂಡ ಇದೀಗ ಕಟ್ಟಿಸಿಕೊಂಡಿದ್ದಾರೆ. ಇನ್ನು ಈ ಹೊಸ ಮನೆಯ ಗೃಹಪ್ರವೇಶ ಇತ್ತೀಚಿಗಷ್ಟೇ ನಡೆದಿದ್ದು, ನಟ ಉಪೇಂದ್ರ ಅವರ ಕುಟುಂಬ ಇನ್ನು ಮುಂದೆ ಆ ಮನೆಯಲ್ಲಿ ನೆಲೆಸಲಿದ್ದಾರೆ ಎನ್ನಲಾಗಿದೆ. ಇಷ್ಟು ದಿನಗಳ ಕಾಲ ರೆಸಾರ್ಟ್ನಲ್ಲಿ ಇದ್ದ ಉಪೇಂದ್ರ ಕುಟುಂಬ ಈಗ ಸ್ವಂತ ಮನೆಯಲ್ಲಿ ಹಳ್ಳಿಗಳ ಮಧ್ಯೆ ಇರಲಿದ್ದಾರೆ.
ನಟ ಉಪೇಂದ್ರ ಸದ್ಯ ಕಬ್ಜಾ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು, ಇದೀಗ ಹೊಸ ಮನೆಯ ಗೃಹಪ್ರವೇಶವನ್ನು ಕುಟುಂಬ ಸದಸ್ಯರ ನಡುವೆ ಸಾಂಪ್ರದಾಯಿಕವಾಗಿ ಮತ್ತು ಸರಳವಾಗಿ ಮಾಡಿದ್ದಾರೆ. ಗೃಹಪ್ರವೇಶ ಸಮಾರಂಭದಲ್ಲಿ ಅವರ ಪತ್ನಿ ನಟಿ ಪ್ರಿಯಾಂಕಾ ಉಪೇಂದ್ರ ಕೂಡ ಪತಿಯೊಂದಿಗೆ ಸಕಲ ಶುಭ ಕಾರ್ಯಗಳನ್ನು ಮಾಡಿದರು. ಇನ್ನು ಮನೆಯಲ್ಲಿ ಉಪೇಂದ್ರ ಅವರ ಸಹ ಕುಟುಂಬ ವಾಸವಾಗಲಿದೆ.
ಇನ್ನು ಉಪೇಂದ್ರ ಅವರು ಸಿನಿಮಾ ಹಾಗೂ ರಾಜಕೀಯದಲ್ಲಿ ಬ್ಯುಸಿಯಾಗಿದ್ದು, ಇದೀಗ ಅಭಿಮಾನಿಗಳ ಮನೆಮನೆಗೆ ತೆರಳಿ ತಮ್ಮ ಪಕ್ಷದ ಪ್ರಚಾರ ಮಾಡಲಿದ್ದಾರೆ ಎಂಬ ಸುದ್ದಿ ಹರಡಿದೆ. ಇದೀಗ ಹೊಸ ಮನೆಗೆ ಕಾಲಿಟ್ಟಿರುವ ನಟ ಉಪೇಂದ್ರ ಅವರು ರಾಜಕೀಯದಲ್ಲಿ ಯಾವ ರೀತಿ ಯಶಸ್ಸನ್ನು ಕಾಣುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಇನ್ನು ಇವರ ಹೊಸ ಮನೆಗೆ ಹಲವಾರು ಅಭಿಮಾನಿಗಳು ಇವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ಕೂಡ ಹೇಳಿದ್ದಾರೆ. ಇನ್ನು ಹೊಸ ಮನೆಗೆ ತೆರಳಿದ ನಂತರ ಇವರಿಗೆ ರಾಜಕೀಯವಾಗಿ ಹೇಗೆ ಮತ್ತು ಯಾವ ರೀತಿ ಯಶಸ್ಸು ಸಿಗುತ್ತದೆ ಎಂಬುದನ್ನು ನೋಡಬೇಕಾಗಿದೆ. ಒಟ್ಟಾರೆಯಾಗಿ ರೆಸಾರ್ಟ್ ಒಂದರಲ್ಲಿ ನೆಲೆಸಿದ್ದ ಉಪೇಂದ್ರ ಕುಟುಂಬ ಇದೀಗ ಸ್ವಂತ ಮನೆಯಲ್ಲಿ ನೆಲೆಸಲಿದೆ.