ಈ ಹಿಂದೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣರವರು ಒಂದು ಸಂದರ್ಶನದಲ್ಲಿ ಕಾಂತರಾ(Kantara) ಬಗ್ಗೆ ಮಾತನಾಡಿ ಎಂದು ಕೇಳಿದಾಗ ನಾನಿನ್ನು ಕಾಂತರಾ ಸಿನಿಮಾವನ್ನು ನೋಡಿಲ್ಲ ಎಂದು ಹೇಳಿದ್ದರು. ಇದರಿಂದ ನೆಟ್ಟಿಗರು ಹಾಗೂ ರಿಷಬ್ ಶೆಟ್ಟಿ (Rishabh Shetty) ಅವರ ಅಭಿಮಾನಿಗಳು ರಶ್ಮಿಕಾ ಮೇಲೆ ಕೆಂಡಮಂಡಲವಾಗಿದ್ದರು. ಆದರೆ ಇದೀಗ ನಟಿ ರಶ್ಮಿಕಾ ಮಂದಣ್ಣ ತಾವೇ ಪ್ರೆಸ್ ಮೀಟ್ ಒಂದನ್ನು ಕರೆಸಿ ನಾನು ಕಾಂತರಾ ಸಿನಿಮಾ ನೋಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ರಶ್ಮಿಕಾ ರವರ ಮೊದಲ ಸಿನಿಮಾ ಕಿರಿಕ್ ಪಾರ್ಟಿಯ ನಿರ್ದೇಶಕರಾದ ರಿಶಬ್ ಶೆಟ್ಟಿ ಅವರ ಚಿತ್ರವು ಪ್ರಪಂಚದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಇನ್ನೂ ಸದ್ದು ಮಾಡುತ್ತಿದೆ ಇಂತಹ ಸಿನಿಮಾವನ್ನು ರಶ್ಮಿಕಾರವರು ನೋಡಿಲ್ಲ ಎಂದು ಉಡಾಫೆಯಾಗಿ ಉತ್ತರವನ್ನು ಕೊಟ್ಟಿದ್ದರು.
ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ರಚಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು ,ಮಲಯಾಳಂ ಮುಂತಾದ ಪಂಚಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಎಲ್ಲಾ ಭಾಷೆಯವರು ಈ ಚಿತ್ರವನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಹಲವಾರು ಭಾಷೆಗಳ ನಟ ನಟಿಯರು ನಿರ್ಮಾಪಕರು ತಂತ್ರಜ್ಞರು ಈ ಚಿತ್ರವನ್ನು ನೋಡಿ ರಿಷಬ್ ಶೆಟ್ಟಿ ಅವರಿಗೆ ಕಾಲ್ ಮಾಡಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ತಮಿಳು ಚಿತ್ರರಂಗದ ಖ್ಯಾತಿಯ ರಚನೆ ಅವರು ಕೂಡ ರಿಷಬ್ ಶೆಟ್ಟಿಗೆ ಕಾಲ್ ಮಾಡಿ ಮನೆಗೆ ಕರೆಸಿ ಕಾಂತಾರದ ಬಗ್ಗೆ ಮಾತನಾಡಿದರು. ತೆಲುಗು ನಟ ಪ್ರಭಾಸ್ ಕೂಡ ಕಾಂತರಾ ಸಿನಿಮಾವನ್ನು ನೋಡಿ ಅದರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕನ್ನಡದ ಸೂಪರ್ ಸ್ಟಾರ್ ಗಳಾದ ಯಶ್ ಹಾಗೂ ಕಿಚ್ಚ ಸುದೀಪ್ ಕೂಡ ಕಾಂತಾರದ ಬಗ್ಗೆ ಮಾತನಾಡಿ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಹೀಗೆ ಹತ್ತು ಹಲವು ಜನ ಕಾಂತರಾ ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಬಾಕ್ಸ್ ಆಫೀಸ್ ನಲ್ಲಿ ಇಂದಿಗೂ ತನ್ನೆಲ್ಲ ನಾಗಲೋಟವನ್ನು ನಿಲ್ಲಿಸದೆ ಕಾಂತಾರಾ ಮುನ್ನುಗ್ಗುತ್ತಿದೆ. ಕಾಂತರಾ ಸಿನಿಮಾ ಇನ್ನು ಹಲವು ಜನರ ವೀಕ್ಷಣೆಯ ಲಿಸ್ಟ್ ನಲ್ಲಿ ಕುಳಿತಿದೆ ಕೆಲವೊಬ್ಬರಿಗೆ ಟಿಕೆಟ್ ಸಿಗದೆ ಪರದಾಡುತ್ತಿದ್ದಾರೆ. ಇದೀಗಾಗಲೇ ಕಾಂತಾರ ಸಿನಿಮಾ ಓ ಟಿ ಟಿ ಯಲ್ಲೂ ಕೂಡ ರಿಲೀಸ್ ಆಗಿ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದೆ.
ಪ್ರಪಂಚದಾದ್ಯಂತ ಹೀಗೆ ಸದ್ದು ಮಾಡಿರುವ ಕಾಂತಾರ ಸಿನಿಮಾವನ್ನು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇನ್ನು ನೋಡಿಲ್ಲವಂತೆ ಹಾಗೆಯೇ ಅದರ ಬಗ್ಗೆ ಒಮ್ಮೆ ಕೂಡ ರಶ್ಮಿಕ ಮಂದಣ್ಣ ಮಾತನಾಡಿಲ್ಲ. ರಶ್ಮಿಕಾ ಮಂದಣ್ಣರವರು ನಟಿಸಿರುವ ಮೊದಲ ಚಿತ್ರಕ್ಕೆ ಆಯ್ಕೆಮಾಡಿಕೊಂಡು ಅವಕಾಶ ನೀಡಿದ ನಿರ್ದೇಶಕ ರಿಷಬ್ ಶೆಟ್ಟಿ ಅವರ ಚಿತ್ರವನ್ನು ನೋಡುವಷ್ಟು ಪುರುಸೊತ್ತಿಲ್ಲ ರಶ್ಮಿಕಾಗೆ ಎಂದು ನೆಟ್ಟಿಗರು ಎಲ್ಲಾ ಕಡೆ ಟ್ರೋಲ್ ಮಾಡಿದ್ದರು.
ಕಾಂತರಾ ಸಿನಿಮಾವನ್ನು ನೋಡಿದ್ದೀರಾ ಎಂದು ಒಂದು ಸಂದರ್ಶನದಲ್ಲಿ ಕೇಳಿದಾಗ ರಶ್ಮಿಕ ಮಂದಣ್ಣ ಅದಕ್ಕೆ ಉಡಾಫೆ ಆಗಿ ಉತ್ತರವನ್ನು ನೀಡಿ ರಿಷಬ್ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದ್ದರು. ತಾವು ಹತ್ತಿ ಬಂದ ಏಣಿಯನ್ನು ಕಾಲಿನಲ್ಲಿ ಒದೆಯುತ್ತಿದ್ದಾರೆ. ಹಾಗೂ ತಾವು ಬೆಳೆದು ಬಂದ ಹಾದಿಯನ್ನು ಮರೆತು ತಮ್ಮನ್ನು ಕನ್ನಡ ಇಂಡಸ್ಟ್ರಿಗೆ ಪರಿಚಯ ಮಾಡಿಕೊಟ್ಟ ನಿರ್ದೇಶಕರ ಬಗ್ಗೆ ಕಿಂಚಿತ್ತಾದರೂ ರಶ್ಮಿಕಾಗೆ ಪ್ರಾಮಾಣಿಕತೆ ಇಲ್ಲ ಎಂದು ನೆಟ್ಟಿಗರು ಎಲ್ಲಾ ಕಡೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಈ ಹಿಂದೆ ಕರ್ಲಿ ಟೇಲ್ಸ್ ಎನ್ನುವ ಸಂದರ್ಶನ ಒಂದರಲ್ಲಿ ಆಂಕರ್ ನೀವು ನಡೆದು ಬಂದ ಹಾದಿಯ ಬಗ್ಗೆ ನಿಮ್ಮ ಸಿನಿ ಜರ್ನಿಯ ಬಗ್ಗೆ ಮಾತನಾಡಿ ಎಂದಾಗ ರಶ್ಮಿಕ ಮಂದಣ್ಣರವರು ನನ್ನ ಕಾಲೇಜಿನಲ್ಲಿ ಫ್ರೆಶ್ ಫೇಸ್ ಎಂಬ ಸ್ಪರ್ಧೆ ನಡೆದಿತ್ತು ಅದಕ್ಕೆ ಭಾಗವಹಿಸುವಂತೆ ನನ್ನ ಶಿಕ್ಷಕರೆಲ್ಲರೂ ಒತ್ತಾಯಿಸಿದರು ನನಗೆ ಇಷ್ಟವಿಲ್ಲದಿದ್ದರೂ ಅದಕ್ಕೆ ನನ್ನ ಫೋಟೋವನ್ನು ನೀಡಿದ್ದೆ ಅದರಲ್ಲಿ ನಾನು ಆಯ್ಕೆಯಾಗಿ ನನ್ನ ಫೋಟೋ ಎಲ್ಲಾ ಕಡೆ ಹರಿದಾಡಿತ್ತು.
ನಂತರ ಈ ನಿರ್ದೇಶಕರ ಕಡೆಯಿಂದ ನನಗೆ ಕಾಲ್ ಬಂತು ನಂತರ ನಾನು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಎಂದು ಉಡಾಫೆ ಆಗಿ ಉತ್ತರಿಸಿದ್ದಾರೆ. ಈ ಸಂದರ್ಶನದಲ್ಲಿ ರಶ್ಮಿಕಾ ರವರು ವ್ಯಂಗ್ಯವಾಗಿ ಮಾತನಾಡಿದ್ದು ಎಲ್ಲಾ ಕಡೆ ಈ ವಿಡಿಯೋ ವೈರಲ್ ಆಗಿತ್ತು.ಹಾಗೆಯೇ ಇವರು ಹೇಳಿದ್ದ ಹೇಳಿಕೆಯ ಬಗ್ಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಹೆಡ್ಲೈನ್ಸ್ನಲ್ಲಿ ಬಂದಿದ್ದು ರಕ್ಷಿ ತ್ ಶೆಟ್ಟಿ (Rakshith shetty)ಹಾಗೂ ರಿಷಬ್ ಶೆಟ್ಟಿ ಅವರ ಅಭಿಮಾನಿಗಳು ರಶ್ಮಿಕ ಮಂದಣ್ಣ ಮೇಲೆ ಕಿಡಿ ಕಾರಿದ್ದರು.
ಆದರೆ, ಇದೀಗ ನಟಿ ರಶ್ಮಿಕಾ ಮಂದಣ್ಣ ತಾನು ಕಾಂತಾರ ಸಿನಿಮಾ ನೋಡಿರುವುದಾಗಿ ಪ್ರೆಸ್ ಮೀಟ್ ಕರೆದು ಕಾಂತಾರ ಸಿನಿಮಾ ನೋಡಿದ್ದೇನೆ ತುಂಬಾ ಚೆನ್ನಾಗಿದೆ. ಈ ಮೊದಲೇ ರಿಷಬ್ ಶೆಟ್ಟಿಗೆ(Rishabh Shetty) ನಾನು ಕಾಂತಾರ ಸಿನಿಮಾದ ಬಗ್ಗೆ ಮೆಸೇಜ್ ಮಾಡಿದ್ದೇನೆ. ಅವರು ಕೂಡ ಧನ್ಯವಾದಗಳು ಎಂದು ರಿಪ್ಲೈ ಮಾಡಿದ್ದಾರೆ. ಕಾಂತಾರ ಟೀಮ್ ಎಂದರೆ, ನನಗೆ ತುಂಬಾ ಇಷ್ಟ ನನ್ನ ಬಗ್ಗೆ ಈ ಹಿಂದೆ ತುಂಬಾ ರುಮರ್ಸ್ ಹಬ್ಬಿದ್ದವು ನಾನು ಇದೀಗಾಗಲೇ ಸಿನಿಮಾ ನೋಡಿ ಅವರಿಗೆ ಮೆಸೇಜ್ ಮಾಡಿರುವುದರಿಂದ ರೂಮರ್ಸ್(rumours) ಬಗ್ಗೆ ನಾನೇನು ಹೇಳುವುದಿಲ್ಲ ಅದೆಲ್ಲವನ್ನು ಅವರಿಗೆ ಬಿಟ್ಟಿರುತ್ತೇನೆ. ಕಾಂತರಾ ಬಿಡುಗಡೆಯಾದ ಎರಡು ಮೂರು ದಿನದ ನಂತರ ನನ್ನನ್ನು ಸಿನಿಮಾ ನೋಡಿದ್ದೀರಾ ಎಂದು ಕೇಳಿದ್ದರು ಆಗ ನಾನು ನೋಡಿರಲಿಲ್ಲ ಇದೀಗ ನಾನು ಕಾಂತರಾ (kantara)ಸಿನಿಮಾವನ್ನು ನೋಡಿದ್ದೇನೆ. ಜನರಿಗೆ ಒಳಗೆ ಏನು ನಡೆಯುತ್ತದೆ ಎಂಬುದು ಗೊತ್ತಿಲ್ಲ ಅವರು ಎಲ್ಲಾ ಕಡೆ ಕ್ಯಾಮರಾ ಇಟ್ಟು ನೋಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಎಲ್ಲರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಎಂದು ನಟಿ ರಶ್ಮಿಕಾ ಮಂದಣ್ಣ(rashmika mandanna) ತೆಲುಗುನಲ್ಲಿ ಉತ್ತರಿಸಿದ್ದಾರೆ.
Rashmika Mandanna on Kantara: ನಾನು ಕಾಂತರಾ ಸಿನಿಮಾ ನೋಡಿ ರಿಷಬ್ ಶೆಟ್ಟಿಗೆ ಮೆಸೇಜ್ ಮಾಡಿದ್ದೇನೆ ಎಂದ ರಶ್ಮಿಕಾ ಮಂದಣ್ಣ