ಅಪ್ಪು ತಮ್ಮ ಅಭಿಮಾನಿ ಹಾಗೂ ಕುಟುಂಬವನ್ನು ಆಗಲಿ ಇದೀಗಾಗಲೇ ಒಂದುವರೆ ವರ್ಷವೇ ಕಳೆದು ಹೋಯಿತು ಆದರೂ ಕೂಡ ಅವರ ನೆನಪು ಇನ್ನೂ ಮಾಸಿಲ್ಲ ಅಪ್ಪೂರವರ ಹೆಸರಿನಲ್ಲಿ ಅವರ ಅಭಿಮಾನಿಗಳು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇದೀಗ ರಾಮಚಂದ್ರ ಗುರೂಜಿಯವರು ಸಾಯಿಬಾಬಾ ಆತ್ಮವನ್ನು ಕರೆಸಿ ಮಾತನಾಡಿ ಫೇಮಸ್ ಆಗಿದ್ದರು ಆದರೆ ಇದೀಗ ರಾಮಚಂದ್ರ ಗುರೂಜಿ ರವರು ಅಪ್ಪುವಿನ ಆತ್ಮದ ಬಳಿ ಮಾತನಾಡಲು ಮುಂದಾಗಿದ್ದಾರೆ.
ಕಳೆದ ತಿಂಗಳು ಅಮೆರಿಕಾದ ಚಾರ್ಲಿ ಚಿಟ್ದಿಂದ ಪ್ಯಾರಾ ನಾರ್ಮಲ್ ತಜ್ಞ ಅಪ್ಪು ಆತ್ಮದ ಜೊತೆ ಮಾತನಾಡಿದ್ದಾರೆ ಎನ್ನುವ ವಿಡಿಯೋ ಎಲ್ಲಾ ಕಡೆ ವೈರಲಾಗಿತ್ತು ಯಂತ್ರದ ಸಹಾಯದಿಂದ ತಾವು ಆತ್ಮದ ಜೊತೆ ಮಾತನಾಡುತ್ತೇವೆ ಎಂದು ಅಮೆರಿಕಾದ ಚಾರ್ಲಿ ಎಂಬ ಪ್ಯಾರಾ ನಾರ್ಮಲ್ ತಜ್ಞ ಹೇಳಿಕೊಂಡಿದ್ದರು ಚಾರ್ಲಿ ರವರು ಕೇಳಿದ ಪ್ರಶ್ನೆಗಳಿಗೆ ಯಂತ್ರದ ಮೂಲಕ ಕೆಲವೊಂದು ಉತ್ತರಗಳು ಕೂಡ ಕೇಳಿ ಬರುತ್ತಿದ್ದವು. ಇದು ಅಪ್ಪುವಿನ ಆತ್ಮ ಎಂದು ತಿಳಿದುಬಂದಿದೆ.
ಈ ವಿಡಿಯೋಗೆ ಕೆಲವರು ಸಮ್ಮತಿಯನ್ನು ಸೂಚಿಸಿದ್ದರು ಆದರೆ ಇಂದು ಕೆಲವರು ಈ ವಿಡಿಯೋವನ್ನು ಟೀಕೆ ಮಾಡಿದ್ದರು ಇದರ ಹಿನ್ನೆಲೆ ರಾಮಚಂದ್ರ ಗುರೂಜಿ ಅಪ್ಪುವಿನ ಆತ್ಮದ ಜೊತೆ ಮಾತನಾಡಿರುವುದಾಗಿ ಹೇಳಿದ್ದಾರೆ. ಈ ಹಿಂದೆ ಸಾಯಿಬಾಬಾರವರ ಆತ್ಮವನ್ನು ಜೀವಂತ ವ್ಯಕ್ತಿಯ ದೇಹದೊಳಗೆ ಕರೆಸಿ ಮಾತನಾಡಿಸಿದ್ದ ರಾಮಚಂದ್ರ ಗುರೂಜಿ ರವರ ಕುರಿತಾಗಿ ಪರ ಹಾಗೂ ವಿರೋಧಗಳು ವ್ಯಕ್ತವಾಗಿದ್ದವು.
ಇದೀಗ ಮತ್ತೆ ಪುನೀತ್ ಆತ್ಮವನ್ನು ಕರೆಸುವುದು ರಾಮಚಂದ್ರ ಗುರೂಜಿಗಳು ತಿಳಿಸಿದ್ದಾರೆ. ಅಮೆರಿಕಾದ ದಗ್ನಾ ಚಾರ್ಲಿ ಯಂತ್ರದ ಮೂಲಕ ಪುನೀತ್ ಆತ್ಮದ ಜೊತೆ ಮಾತನಾಡಿದ್ದು ಅದರಲ್ಲಿ ಯಾವುದೇ ಕ್ಲಾರಿಟಿ ಇಲ್ಲ ಇದೀಗ ತಾನು ಜೀವಂತ ವ್ಯಕ್ತಿಯ ದೇಹದ ಒಳಗೆ ಅಪ್ಪುವಿನ ಆತ್ಮವನ್ನು ಕರೆಸಿ ಮಾತನಾಡಿಸುತ್ತೇನೆ ಎಂದು ರಾಮಚಂದ್ರ ಗುರೂಜಿ ರವರು ತಿಳಿಸಿದ್ದಾರೆ.
ಇದೀಗಾಗಲೇ ಈ ವಿಡಿಯೋಗೆ ಸಾಕಷ್ಟು ಮಂದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ತಮ್ಮ ಪ್ರೀತಿಯ ಅಪ್ಪು ಏನು ಮಾತನಾಡುತ್ತಾರೆ ಎನ್ನುವುದನ್ನು ಕೇಳಬೇಕು ಎಂದು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಇನ್ನೂ ಕೆಲವರು ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡುವುದಾದರೆ ಈಗಲೇ ಮಾತನಾಡಿ ಮೊದಲು ಹೇಳಿ ಆಮೇಲೆ ಮಾತನಾಡುವುದಲ್ಲ ಎಂದು ಹೇಳಿದ್ದಾರೆ. ಇದರ ಕುರಿತು ಅಪ್ಪು ಕುಟುಂಬ ಹಾಗೂ ಶಿವಣ್ಣ ಯಾವುದೇ ಹೇಳಿಕೆಯನ್ನು ಕೂಡ ನೀಡಿಲ್ಲ