ಇದೀಗ ಚಿತ್ರರಂಗದಲ್ಲಿ ಇರುವ ಹಾಟ್ ಟ್ರೆಂಡಿಂಗ್ ಟಾಪಿಕ್ ಎಂದರೆ ಅದು ರಶ್ಮಿಕಾ ಮಂದಣ್ಣ, ನಟಿ ರಶ್ಮಿಕ ಮಂದಣ್ಣ ಕನ್ನಡವನ್ನು ಅಲ್ಲ ಗಳೇದಿದ್ದರೂ ಹಾಗೆ ರಿಶಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ರವರ ಬಗ್ಗೆ ಕರ್ಲಿ ಟೈಲ್ಸ್ ಎನ್ನುವ ಸಂದರ್ಶನದಲ್ಲಿ ಕೆಟ್ಟದಾಗಿ ಮಾತನಾಡಿದರು ಈ ಬೆನ್ನಲ್ಲೆ ಕನ್ನಡಿಗರು ಅವರ ಎಲ್ಲಾ ಸಿನಿಮಾಗಳನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕಾಗಿ ಒತ್ತಾಯಿಸುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರನ್ನು ಮದುವೆಯಾಗುತ್ತಾರೆ ಎನ್ನುವ ಸುದ್ದಿ ಎಲ್ಲಾ ಕಡೆ ಹಬ್ಬಿತ್ತು ಆದರೆ ಇದೀಗ ನಟಿ ರಶ್ಮಿಕ ಮಂದಣ್ಣ ಹಾಗೂ ನಟಾ ರಕ್ಷಿತ್ ಶೆಟ್ಟಿ, ಸೀಕ್ರೆಟ್ ಆಗಿ ಮದುವೆಯಾಗಿ ಅಭಿಮಾನಿಗಳಿಗೆಲ್ಲ ಶಾಕ್ ನೀಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು ಕಿರಿಕ್ ಪಾರ್ಟಿ ಸಿನಿಮಾವನ್ನೂ ಕಾಂತರಾ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶಿಸಿದ್ದರು ರಕ್ಷಿತ್ ಶೆಟ್ಟಿ ರವರ ನಾಯಕತ್ವದಲ್ಲಿ ಕಿರಿಕ್ ಪಾರ್ಟಿ ಚಿತ್ರಮೂಡಿ ಬಂದಿತ್ತು ನಿರ್ದೇಶಕ ರಿಶಬ್ ಶೆಟ್ಟಿ ಹಾಗೂ ನಟ ರಕ್ಷಿತ್ ಶೆಟ್ಟಿ ರಶ್ಮಿಕ ಮಂದಣ್ಣ ರವರಿಗೆ ಕಿರಿಕ್ ಪಾರ್ಟಿ ಚಿತ್ರಕ್ಕೆ ಆಫರ್ ನೀಡಿದರು ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಟಿ ರಶ್ಮಿಕ ಮಂದಣ್ಣ ಕೂಡ ಎಲ್ಲ ಕಡೆ ಪ್ರಖ್ಯಾತಿಯನ್ನು ಪಡೆದುಕೊಂಡು ತದ ನಂತರ ತೆಲುಗು ಇಂಡಸ್ಟ್ರಿಗು ಕೂಡ ಹೋದರು.
ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣರವರಿಗೆ ಕಿರಿಕ್ ಪಾರ್ಟಿ ಚಿತ್ರದ ಶೂಟಿಂಗ್ ಸಮಯದಲ್ಲಿ ಪ್ರೀತಿಯಾಗಿ ಇವರಿಬ್ಬರು ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು ಆದರೆ ಅದ್ಯಾವುದೋ ವೈಯಕ್ತಿಕ ಕಾರಣದಿಂದ ಇವರಿಬ್ಬರೂ ತಮ್ಮ ಎಂಗೇಜ್ಮೆಂಟ್ ಅನ್ನು ಕ್ಯಾನ್ಸಲ್ ಮಾಡಿಕೊಂಡರು ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಕೊಂಡಿದ್ದೆ ತಡ ನಟಿ ರಶ್ಮಿಕಾ ಮಂದಣ್ಣ ತೆಲುಗು ನಟ ವಿಜಯ್ ದೇವರಕೊಂಡ ಜೊತೆ ಎಲ್ಲಾ ಕಡೆ ತಿರುಗಾಡಲು ಶುರು ಮಾಡಿದರು.
ರಶ್ಮಿಕ ಮಂದಣ್ಣ ಹಲವಾರು ಸಂದರ್ಶನಗಳಲ್ಲಿ ಮಾತನಾಡಿ ನನಗೆ ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸಲು ಇಷ್ಟವಿರಲಿಲ್ಲ ಆದರೆ ಕೂಡ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಬಲವಂತ ಮಾಡಿ ಚಿತ್ರದಲ್ಲಿ ನಟಿಸಲು ಹೇಳಿದರು ಆದ್ದರಿಂದ ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸಿದೆ ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ನನಗೆ ಕನ್ನಡ ಮಾತನಾಡುವುದು ತುಂಬಾ ಕಷ್ಟ ಬೇರೆಲ್ಲ ಭಾಷೆಗಳು ಕನ್ನಡಕ್ಕಿಂತಲೂ ಸುಲಭವಾಗಿರುತ್ತವೆ ಎಂದು ಕೂಡ ಹೇಳಿದ್ದಾರೆ. ಈ ಮಾತಿನಿಂದ ಕನ್ನಡಿಗರಿಗೆ ತುಂಬಾ ಬೇಸರವಾಗಿ ಇವರನ್ನು ಎಲ್ಲಾ ಕಡೆ ಟ್ರೋಲ್ ಮಾಡುತ್ತಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಆಗಿಂದಾಗೆ ಕನ್ನಡಿಗರನ್ನು ಕೆಣಕುತ್ತಿರುವ ಕಾರಣ ನಟಿ ರಶ್ಮಿಕಾ ಮಂದಣ್ಣ ರವರನ್ನು ಕನ್ನಡ ಇಂಡಸ್ಟ್ರಿಯಿಂದ ಬ್ಯಾನ್ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ರವರು ನಟಿಸುವ ಯಾವುದೇ ಜಾಹೀರಾತುಗಳ ಪ್ರಾಡಕ್ಟ್ ಗಳನ್ನು ನಾವು ಖರೀದಿಸುವುದಿಲ್ಲ ಹಾಗೂ ಅವರು ನಟಿಸುವ ಯಾವ ಸಿನಿಮಾಗಳನ್ನು ಕರ್ನಾಟಕದಲ್ಲಿ ರಿಲೀಸ್ ಆಗಲು ಬಿಡುವುದಿಲ್ಲ ಎಂದು ಕನ್ನಡಿಗರು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ಒಂದು ಪ್ರತಿಷ್ಠಿತ ಆಭರಣಗಳಿಗೆ ಅಂಬಾಸಿಡರ್ ಆಗಿದ್ದರು ಆ ಪ್ರತಿಷ್ಠಿತ ಕಂಪನಿ ಕೂಡ ಇದೀಗ ನಟಿ ರಶ್ಮಿಕ ಮಂದಣ್ಣ ರವರನ್ನು ಅಂಬಾಸಿಡರ್ ಪಟ್ಟದಿಂದ ತೆಗೆದುಹಾಕಿ ತೆಲುಗು ನಟಿ ತ್ರಿಶಾ ಅವರನ್ನು ಜಾಹೀರಾತಿಗೆ ಸೇರ್ಪಡೆಗೊಳಿಸಿಕೊಂಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗಷ್ಟೇ ವಿಜಯ್ ದೇವರಕೊಂಡ ರವರ ಜೊತೆ ಮಾಲ್ಡೀವ್ಸ್ ಪ್ರವಾಸಕ್ಕೂ ಕೂಡ ತೆರಳಿದ್ದರು. ಈ ಹಿನ್ನೆಲೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಎಲ್ಲಾ ಕಡೆ ಹಬ್ಬಿತು ಆದರೆ ಇದರ ಬಗ್ಗೆ ನಟಿ ರಶ್ಮಿಕ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಯಾವುದೇ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿರಲಿಲ್ಲ ಇದೀಗ ಇದ್ದಕ್ಕಿದ್ದ ಹಾಗೆ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ರಕ್ಷಿತ್ ಶೆಟ್ಟಿ ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನುವ ವಿಡಿಯೋ ಎಲ್ಲಾ ಕಡೆ ವೈರಲಾಗುತ್ತಿದೆ. ಈ ವಿಡಿಯೋವನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ಈ ವಿಡಿಯೋ ತುಂಬಾ ಹಳೆಯ ವಿಡಿಯೋ ಎಂದು ತಿಳಿದು ಬಂದಿದ್ದು ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ಆದ ಸಮಯದಲ್ಲಿ ಅವರಿಬ್ಬರು ಲೈವ್ ಬಂದು ಮಾತನಾಡಿದ ವಿಡಿಯೋ ಇದಾಗಿತ್ತು ಇದೀಗ ಅಭಿಮಾನಿಗಳು ಈ ವಿಡಿಯೋವನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.