ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್ ಎಂದೇ ಖ್ಯಾತರಾಗಿರುವ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ಸಹೋದರಿ ಕನಿಕಾ ಚಂದ್ರನ್ ಅವರ ವಿವಾಹ ಇತ್ತೀಚೆಗೆ ನಡೆದಿದ್ದು, ಸ್ವತಃ ಸಹೋದರಿ ಮದ್ವೇಲಿ ರಾಗಿಣಿ ವಧುವಿನಂತೆ ಮಿಂಚಿದ್ದಾರೆ. ಜನವರಿ ತಿಂಗಳಲ್ಲಿ ರಾಗಿಣಿ ಚಂದ್ರನ್ ಅವರ ಮನೆಯಲ್ಲಿ ಕನಿಕಾ ಮತ್ತು ಸುದರ್ಶನ್ ಜೈನ್ ಅವರ ನಿಶ್ಚಿತಾರ್ಥ ಸರಳವಾಗಿತ್ತು. ಜುಲೈ ಆರಂಭದಲ್ಲಿ ಕನಿಕಾ ಅದ್ಧೂರಿಯಾಗಿ ವಿವಾಹವಾದರು.
View this post on Instagram
ಕನಿಕಾ ಮತ್ತು ಸುದರ್ಶನ್ ಅವರದ್ದು ಪ್ರೇಮ ವಿವಾಹ. ಇವರಿಬ್ಬರ ಮದುವೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವಾಗಲೇ ರಾಗಿಣಿ ತಮ್ಮ ಕ್ಯೂಟ್ ಲುಕ್ ನಲ್ಲಿ ಮದುವೆಯಲ್ಲಿ ಮಿಂಚಿದ್ದಾರೆ.ರಾಗಿಣಿ ಅವರು ಬಿಳಿ ಬಣ್ಣದ ರೇಷ್ಮೆ ಸೀರೆಯನ್ನು ಧರಿಸಿದ್ದು, ಅದಕ್ಕೆ ಹೊಂದಿಕೆಯಾಗುವ ಗುಲಾಬಿ ವಿನ್ಯಾಸದ ಕುಪ್ಪಸದೊಂದಿಗೆ ಬಾರ್ಡರ್, ಅಭೂಷಣ್ ಜ್ಯುವೆಲ್ಲರಿಯಿಂದ ಸುಂದರವಾದ ಚಿನ್ನ ಮತ್ತು ವಜ್ರದ ನೆಕ್ಲೇಸ್, ಹೊಂದಿಕೆಯಾಗುವ ಕಿವಿಯೋಲೆಗಳು ಮತ್ತು ಬಳೆ.
ರವಿಕೆ, ಸೊಂಟದ ಬೆಲ್ಟ್, ವಂಕಿ ಮತ್ತು ಡಾಬುಗೆ ಹೊಂದಿಕೆಯಾಗುವ ಎರಡು ಕೈಗಳಿಗೆ ಮೆಹೆಂದಿ, ತಲೆಯ ಮೇಲೆ ಹೂವನ್ನು ಹಾಕಿಕೊಂಡು ರಾಗಿಣಿ ಪ್ರಜ್ವಲ್ ಥೇಟ್ ವಧುವಿನಂತೆ ಮಿಂಚುತ್ತಿದ್ದಾರೆ.ರಾಗಿಣಿ ಚಂದ್ರನ್ ಡ್ಯಾನ್ಸರ್, ಕೊರಿಯೋಗ್ರಾಫರ್, ವೆಡ್ಡಿಂಗ್/ಈವೆಂಟ್ಸ್ ಮ್ಯಾನೇಜ್‌ಮೆಂಟ್ ಮತ್ತು ಫಿಟ್‌ನೆಸ್ ಟ್ರೈನರ್ ಕೂಡ ಆಗಿದ್ದಾರೆ. ರಾಗಿಣಿ ಚಂದ್ರನ್ ಮತ್ತು ಕನಿಕಾ ಯು ರಿದಮಿಕ್ಸ್ ಎಂಬ ನೃತ್ಯ ಮತ್ತು ಫಿಟ್‌ನೆಸ್ ಅಕಾಡೆಮಿಯನ್ನು ಸಹ ನಡೆಸುತ್ತಿದ್ದಾರೆ.
ರಾಗಿಣಿ ಕೂಡ ಅದ್ಭುತ ನಟಿ. ಅವರು ಅನೇಕ ಕಿರುಚಿತ್ರಗಳು ಸೇರಿದಂತೆ ಒಂದೆರಡು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ರಾಗಿಣಿ ಶಾನುಭೋಗರ ಮಗಳು ಕೂಡ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾದ ಲುಕ್ ವೈರಲ್ ಆಗಿದೆ.