ಪುನೀತ್ ರಾಜಕುಮಾರ್ ದೈವಭಕ್ತಿ ಅಂತಿಂಥದ್ದಲ್ಲ: ಮಂತ್ರಾಲಯದ ರಾಯರೇ ಅಪ್ಪುವಿನ ಆರಾಧ್ಯ ದೈವ

ಪುನೀತ್ ರಾಜಕುಮಾರ್ ರವರನ್ನು ಕನ್ನಡ ನಾಡು ನಾನಾ ರೀತಿಯಲ್ಲಿ ಕಂಡಿದೆ. ಕನ್ನಡ ಕಂಠೀರವ ಡಾಕ್ಟರ್ ರಾಜಕುಮಾರ್ ಅವರ ಪುತ್ರನನ್ನಾಗಿ ಕಂಡಿದೆ ಬಾಲ ನಟನಿಂದ ಹಿಡಿದು ಪವರ್ ಸ್ಟಾರ್ ಆಗುವವರೆಗೂ ಪುನೀತ್ ನನ್ನು ಕಂಡಿದೆ ಗಾಯಕ ಹಾಗೂ ನಿರ್ದೇಶಕನಾಗಿ ಪುನೀತ್ ರಾಜಕುಮಾರ್ ಕನ್ನಡ ಫಿಲಂ ಇಂಡಸ್ಟ್ರಿಯಲ್ ಗುರುತಿಸಿಕೊಂಡಿದ್ದಾರೆ. ಅದೇ ರೀತಿ ಪುನೀತ್ ರಾಜಕುಮಾರ್ ಒಬ್ಬ ದೈವ ಭಕ್ತನಾಗಿಯು ಗುರುತಿಸಿಕೊಂಡಿದ್ದಾರೆ.

 

 

ಪುನೀತ್ ರಾಜಕುಮಾರ್ ಸಾಮಾನ್ಯರಂತೆಯೇ ಸಾಕಷ್ಟು ಬಾರಿ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ ಹಲವು ಮಠಗಳಿಗೆ ತೆರಳಿ ದೇವರ ಎದುರು ಕೈಮುಗಿದು ನಿಂತಿದ್ದಾರೆ. ಬರೀ ಕರ್ನಾಟಕ ರಾಜ್ಯ ಅಷ್ಟೇ ಅಲ್ಲದೆ ನಾನಾ ರಾಜ್ಯಗಳ ದೇಶಗಳ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆಗಳನ್ನು ನೆರವೇರಿಸಿದ್ದಾರೆ. ದೈವ ಭಕ್ತಿಯ ವಿಚಾರದಲ್ಲಿ ಆ ಪರಮಾತ್ಮನನ್ನು ಈ ಪರಮಾತ್ಮ ಎಂದಿಗೂ ಮರೆತ ವಿಷಯವೇ ಇಲ್ಲ.

 

 

ಅಪ್ಪುವಿನ ಇಷ್ಟ ದೈವದ ವಿಚಾರಕ್ಕೆ ಬಂದರೆ ಅಪ್ಪುವಿನ ಆರಾಧ್ಯ ದೈವವಾದ ಮಂತ್ರಾಲಯದ ರಾಘವೇಂದ್ರ ಸ್ವಾಮಿ ತಮ್ಮ ಬಿಜಿ ಶೆಡ್ಯೂಲ್ ನಲ್ಲೂ ಕೂಡ ಪುನೀತ್ ರಾಜಕುಮಾರ್ ಅವರು ಮಂತ್ರಾಲಯಕ್ಕೆ ಆಗಾಗ ಭೇಟಿ ನೀಡುತ್ತಿದ್ದರು ಮಂತ್ರಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ರಾಯರ ಹಾಡನ್ನು ಕೂಡ ಹಾಡಿದ್ದರು.

 

 

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮೇಲೆ ಡಾಕ್ಟರ್ ರಾಜಕುಮಾರ್ ಅವರಿಗೆ ಇದ್ದಂತಹ ಭಕ್ತಿಯೇ ಪುನೀತ್ ರಾಜಕುಮಾರ್ ಗು ಇದೆ. ಅದೇ ಕಾರಣಕ್ಕೆ ಪುನೀತ್ ರಾಜಕುಮಾರ್ ಗುರುವಾರದಂದು ಮಾಂಸಹಾರವನ್ನು ಸೇವಿಸುತ್ತಿರಲಿಲ್ಲ. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ಡಾಕ್ಟರ್ ರಾಜ್ ಕುಟುಂಬದ ಆರಾಧ್ಯ ದೈವ ವಾಗಿದ್ದು ಅಪ್ಪುವಿನ ಕುಟುಂಬದ ಆರಾಧ್ಯ ದೈವವೂ ಕೂಡ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳೇ ಆಗಿದ್ದರು.

 

 

ಶಬರಿಮಲೆ ಅಯ್ಯಪ್ಪ ಸ್ವಾಮಿ ಕೂಡ ಪುನೀತ್ ರಾಜಕುಮಾರ್ ಗೆ ತುಂಬಾ ಇಷ್ಟವಾದ ದೇವರು ಶಿವರಾಜ್ ಕುಮಾರ್ ರವರ ಜೊತೆಗೆ ಮಾಲಧಾರಿಯಾಗಿ ಇರುಮುಡಿ ಹೊತ್ತು ಅಪ್ಪು ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನವನ್ನು ಮಾಡಿದ್ದರು. ತಿರುಪತಿ ವೆಂಕಟೇಶ್ವರನ ಸನ್ನಿಧಿಯಲ್ಲಿ ಕೂಡ ಪುನೀತ್ ರಾಜಕುಮಾರ್ ಅವರು ದೇವಾಲಯಕ್ಕೆ ಪ್ರದಕ್ಷಿಣೆಯನ್ನು ಹಾಕಿದ್ದಾರೆ. ಚಾಮುಂಡಿ ಬೆಟ್ಟವನ್ನು ಪ್ರತಿವರ್ಷ ಕಾಲ್ನಡಿಗೆಯಲ್ಲೇ ಹತ್ತಿ ಇಳಿಯುವ ವಾಡಿಕೆ ಇದ್ದು ಮೈಸೂರಿನ ಚಾಮುಂಡಿ ಬೆಟ್ಟಕ್ಕೂ ಕೂಡ ಅಪ್ಪುರವರು ಹತ್ತಿದ್ದಾರೆ.

 

ಅಪ್ಪು ದಾರವಾಡದ ನುಗ್ಗೆಕೆರೆ ಹನುಮಂತ ಮಂದಿರಕ್ಕೂ ಕೂಡ ಭೇಟಿ ನೀಡಿ ಆಂಜನೇಯನಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿದ್ದರು. ಪುನೀತ್ ರಾಜಕುಮಾರ್ ರವರ ದೈವ ಭಕ್ತಿ ಅವರ ಅಗಾಧ ಅಭಿಮಾನಿಗಳ ರೀತಿಯೇ ಅಪಾರವಾಗಿತ್ತು. ಅಪ್ಪುವಿಗೆ ದೇವರ ಮೇಲೆ ಇಷ್ಟೆಲ್ಲ ಭಕ್ತಿ ಇದ್ದರೂ ಆ ದೇವರು ಅಪ್ಪುವಿಗೆ ಇನ್ನ 10 ನಿಮಿಷಗಳ ಕಾಲಾವಧಿಯನ್ನು ಕೊಟ್ಟಿದ್ದಿದ್ದರೆ ಅವರು ಈಗ ನಮ್ಮ ಜೊತೆ ಇರುತ್ತಿದ್ದರು ಆದರೆ ಏನು ಮಾಡುವುದು ವಾಸ್ತವ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾಗಿದೆ.

Be the first to comment

Leave a Reply

Your email address will not be published.


*