Radhika Pandit Birthday Post: ಸ್ಯಾಂಡಲ್ ವುಡ್ ಸ್ಟಾರ್ ನಟಿ ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.ಮದುವೆಯ ನಂತರ ಚಿತ್ರರಂಗದಿಂದ ದೂರವೇ ಉಳಿದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಲೇ ಇದ್ದಾರೆ. ಮತ್ತು ನಾಳೆ ಮಾರ್ಚ್ 7 ರಂದು ರಾಧಿಕಾ ಪಂಡಿತ್ ಅವರ ಹೂಟು ಹಬ್ಬ. ಈ ಬಗ್ಗೆ ನಟಿ ಪೋಸ್ಟ್ ಹಂಚಿಕೊಂಡಿದ್ದಾರೆ.

 

 

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ರಾಧಿಕಾ ಪಂಡಿತ್

ಕನ್ನಡದ ನೆಚ್ಚಿನ ನಟಿ ರಾಧಿಕಾ ಪಂಡಿತ್ ನಾಳೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಆದರೆ ನಟಿ ತನ್ನ ಹುಟ್ಟುಹಬ್ಬದಂದು ಮನೆಯಲ್ಲಿ ಇರುವುದಿಲ್ಲ ಎಂದು Instagram (Radhika Pandit Instagram) ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ.

 

 

ಹುಟ್ಟುಹಬ್ಬದ ಸಂಭ್ರಮದಲ್ಲಿ ಮನೆಯಲ್ಲಿ ಇರುವುದಿಲ್ಲ ಎಂದು ನಟಿ ರಾಧಿಕಾ ಹೇಳಿದ್ದಾರೆ

ರಾಧಿಕಾ ಪಂಡಿತ್ ಮಾರ್ಚ್ 7 ರಂದು ತಮ್ಮ 38 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಈ ಹುಟ್ಟುಹಬ್ಬದ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಇರುವುದಿಲ್ಲ ಎಂದು ಸ್ವತಃ ರಾಧಿಕಾ ಪಂಡಿತ್ ಹೇಳಿದ್ದಾರೆ.

 

 

View this post on Instagram

 

A post shared by Radhika Pandit (@iamradhikapandit)

 

ಈ ಬಗ್ಗೆ ನಟಿ ತಮ್ಮ ಹುಟ್ಟುಹಬ್ಬದ ಮೊದಲ ದಿನವೇ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಮೊದಲ ಬಾರಿಗೆ ನಟಿ ಮನೆಯಿಂದ ದೂರವಾಗಲಿದ್ದಾರೆ. “ನನ್ನ ಹುಟ್ಟುಹಬ್ಬದಂದು ನಾನು ಮೊದಲ ಬಾರಿಗೆ ಮನೆಯಿಂದ ಹೊರಗುಳಿಯುತ್ತೇನೆ, ಇದು ನನ್ನ ಪ್ರೀತಿಯ ಅಭಿಮಾನಿಗಳಿಗೆ ನಿರಾಶೆಯಾಗುತ್ತದೆ ಎಂದು ನನಗೆ ತಿಳಿದಿದೆ. ಹಾಗಾಗಿ ಇಲ್ಲಿ ಚಟುವಟಿಕೆಯನ್ನು ಇಟ್ಟುಕೊಳ್ಳುತ್ತೇನೆ. ಈ ಮೂಲಕ ನಾವು ನಾಳೆ ಸಂಪರ್ಕದಲ್ಲಿರಬಹುದು” ಎಂದು ನಟಿ ಪೋಸ್ಟ್ ಮಾಡಿದ್ದಾರೆ.

 

 

ಈ ಪೋಸ್ಟ್ ನೋಡಿದ ಅಭಿಮಾನಿಗಳು ಇಂದು ರಾಧಿಕಾ ಪಂಡಿತ್ ಅವರಿಗೆ ಅಡ್ವಾನ್ಸ್ ವಿಶ್ ಮಾಡುತ್ತಿದ್ದಾರೆ. ಹುಟ್ಟು ಹಬ್ಬದ ಪ್ರಯುಕ್ತ ಮಾರ್ಚ್ 7 ರಂದು ಅಭಿಮಾನಿಗಳ ವತಿಯಿಂದ ರಕ್ತದಾನ ಶಿಬಿರವನ್ನು ಕೋಲಾರದ “ಲಯನ್ಸ್ ರಕ್ತ ನಿಧಿ” ನಲ್ಲಿ ಏರ್ಪಡಿಸಿದ್ದರೆ. ಇನ್ನು ಕೆಲವರು “ನೀವ್ ಬಿಡಿ ಇನ್ನ ಅಭಿಮಾನಿಗಳು ಯಾಕ್ ಬೇಕು ಸುಮಾರು 3 ವರ್ಷ ಇಂದಾ ನೀನು ನಿನ್ನ ಗಂಡ ಹಿಂಗೆ ಅಭಿಮಾನಿಗಳಿಗೆ ಕಾಗೆ ಹರ್ಸ್ತಿದಿರಾ. ಯೆಲ್ಲಾ ಬಂದ್ಮೇಲೆ ಬರ್ತ್ ಡೇಗೆ ಫಾರಿನ್ ಗೆ ಹೋಗ್ಬೇಕು. ಫ್ಯಾನ್ಸ್ ನಿಮ್ನ ಯೇಸ್ಟ್ ಇಷ್ಟ ಪಡ್ತಾರೆ ಅಂತ ಗೊತ್ತು ಅದ್ರೂ ಫ್ಯಾನ್ಸ್ ನಾ ದೂರ ಇದ್ದೀರಾ . ಹಿಂಗೇ ಅದ್ರೆ ಯಾರು ನಿಮ್ಮ ನೆನಪಿಟ್ಕೊಳಲ್ಲ. ಅಭಿಮಾನಿಗಳ ಜೊತೆ ಟಚ್ ಅಲ್ಲಿ ಇರೋದು ಅಂದ್ರೆ ನಾಯಿಗೆ ಬಿಸ್ಕೆಟ್ ಹಾಕ್ದಂಗೆ ಪ್ರೊಫೈಲ್ ಅಲ್ಲಿ ಒಂದ್ ಪಿಕ್ ಹಾಕಿ ಸುಮ್ನಾಗೋದಲ್ಲಾ. ದೊಡ್ಡಮನೆ ಅವ್ರ್ನ ನೋಡಿ ಸ್ವಲ್ಪ ಅದ್ರೂ ಕಲೀರಿ. ಹತ್ತಿದ ಹೆಣಿಯನ್ನ ಓದಿತಿರಾ ಹುಷಾರು” ಎಂದು ಬೇಸರ ತೋರಿಸಿದ್ದಾರೆ.

Leave a comment

Your email address will not be published. Required fields are marked *