ನಟಿ ರಾಧಿಕಾ ಪಂಡಿತ್ ಸಹೋದರ ಗೌರಂಗ್ ಪಂಡಿತ್ ಜೊತೆ ಯಥರ್ವ ಯಶ್

ಕನ್ನಡದ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರು ಇಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಅಣ್ಣನ ಹುಟ್ಟು ಹಬ್ಬದ ಪ್ರಯುಕ್ತ ಫೋಟೋವನ್ನು ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ರಾಧಿಕಾ ಪಂಡಿತ್ ರವರ ಅಣ್ಣ ಗೌರಂಗ್ ಪಂಡಿತ್ ವಿದೇಶದಲ್ಲಿ ನೆಲೆಸಿದ್ದು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಗೌರಂಗ ಪಂಡಿತ್ ಹಾಗೂ ಸಹನ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಮೊದಲನೇ ಮಗಳು ರಿಯ ಪಂಡಿತ್ ಹಾಗೂ ಮಗನ ಹೆಸರು ಆರವ್ ಪಂಡಿತ್ ಇತ್ತೀಚೆಗಷ್ಟೇ ಗೌರಂಗ್ ಪಂಡಿತ್ ಹಾಗು ಸಹನ ದಂಪತಿಗಳು ತಮ್ಮ ಮೊದಲ ಮಗನ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ್ದರು.

 

 

ನಟಿ ರಾಧಿಕಾ ಪಂಡಿತ್ ರವರ ಸಹೋದರ ಗೌರಂಗ್ ಪಂಡಿತ್ ಹಾಗೂ ಸಹನಾ ದಂಪತಿಗಳು ತಮ್ಮ ಮಗಳು ರಿಯಾ ಪಂಡಿತ ಹಾಗೂ ಮಗ ಆರವ್ ಪಂಡಿತ್ ಜೊತೆ ವಿದೇಶದಲ್ಲಿ ವಾಸವಾಗಿದ್ದರು ಕೂಡ ಆಗಾಗ ರಾಧಿಕಾ ಪಂಡಿತ್ ಹಾಗು ಯಶ್ ದಂಪತಿಗಳನ್ನು ಭೇಟಿಯಾಗಿ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಿರುತ್ತಾರೆ. ಈ ಇಬ್ಬರು ಅಣ್ಣ ತಂಗಿಯರ ನಡುವಿನ ಪ್ರೀತಿ ಸಂಬಂಧಗಳು ಹಾಗೆ ಇವೆ. ರಾಧಿಕಾ ಪಂಡಿತ್ ರವರು ಕೂಡ ತಮ್ಮ ಅಣ್ಣ ಗೌರಂಗ್ ಪಂಡಿತ್ ಹಾಗೂ ಅವರ ಪತ್ನಿ ಸಹನಾ ಪಂಡಿತ್ ಹಾಗು ಮಕ್ಕಳು ರಿಯಾ ಹಾಗೂ ಆರವ್ ಪಂಡಿತ್ ರವರ ಹುಟ್ಟು ಹಬ್ಬಗಳಿಗೆ ಶುಭಾಶಯಗಳು ಶುಭಾಶಯಗಳನ್ನು ಕೋರುತ್ತಿರುತ್ತಾರೆ.

 

 

ರಾಧಿಕಾ ಪಂಡಿತ್ ಅವರು ತಮ್ಮ ಕುಟುಂಬದೊಡನೆ ಉತ್ತಮ ಒಡನಾಟವನ್ನು ಹೊಂದಿದ್ದು ಆಗಾಗ ತಮ್ಮ ತಂದೆ ತಾಯಿಯರನ್ನು ಕೂಡ ಭೇಟಿ ಮಾಡುತ್ತಿರುತ್ತಾರೆ. ನಟಿ ರಾಧಿಕಾ ಪಂಡಿತ್ ಅವರು ತಾಯಿಯಾಗಿ ಬಡ್ತಿ ಪಡೆದಾಗಿನಿಂದ ತಮ್ಮ ಹೊಸ ಜೀವನದಲ್ಲಿ ತಮ್ಮ ಇಬ್ಬರು ಮಕ್ಕಳ ಲಾಲನೆ ಪಾಲನೆಯ ಬಿಸಿಯಾಗಿದ್ದಾರೆ. ನಟಿ ರಾಧಿಕಾ ಪಂಡಿತ್ ರವರು ಹಾಗೂ ಯಶ್ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ನಟಿಸುತ್ತಿದ್ದಾಗ ಅದರಲ್ಲಿ ಬರುತ್ತಿದ್ದ ಒಂದು ಹಾಡು ವರ್ಷಕ್ಕೊಂದು ಪಾಪು ಕೊಡ್ತೀಯಾ ಎನ್ನುವ ಹಾಗೆ ರಾಧಿಕಾ ಪಂಡಿತ್ ಅವರಿಗೇ ವರ್ಷಕ್ಕೊಂದು ಎನ್ನುವಂತೆ ಇಬ್ಬರು ಮಕ್ಕಳಾದವು.

 

 

ಯಶ್ ರವರ ಕೆಜಿಎಫ್ ಚಾಪ್ಟರ್ 2 ಚಿತ್ರವು ಕೂಡ ಪ್ರಪಂಚದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿತ್ತು, ಇದರಿಂದ ಯಶ್ ರವರು ಪ್ರಪಂಚದಾದ್ಯಂತ ಜನಪ್ರಿಯರಾದರು ವರ್ಡ್ ಫೇಮಸ್ ಆಗಿದ್ದಾರೆ. ಈ ಎಲ್ಲಾ ಬ್ಯುಸಿ ಶೆಡ್ಯೂಲ್ ಗಳಲ್ಲಿ ನಟ ಯಶ್ ರವರು ತಮ್ಮ ಮಕ್ಕಳ ಜೊತೆ ಆಟವಾಡುತ್ತಿರುತ್ತಾರೆ ಇಂತಹ ವಿಡಿಯೋಗಳನ್ನು ತಮ್ಮ ಸೋಶಿಯಲ್ ಖಾತೆಗಳನ್ನು ಕೂಡ ಹಂಚಿಕೊಳ್ಳುತ್ತಾರೆ.

 

 

ನಟಿ ರಾಧಿಕಾ ಪಂಡಿತ್ ರವರು ತಾವು ವಿವಾಹವಾದ ನಂತರ ನಿರೂಪ ಭಂಡಾರಿ ಅವರ ಜೊತೆ ಆದಿಲಕ್ಷ್ಮಿ ಪುರಾಣ ಎನ್ನುವ ಒಂದು ಚಿತ್ರದಲ್ಲಿ ಮತ್ತೆ ಕಾಣಿಸಿಕೊಂಡಿದ್ದರು ಇದಾದ ನಂತರ ಅವರು ಮತ್ತೆ ಯಾವ ಚಿತ್ರಗಳನ್ನು ಕಾಣಿಸಿಕೊಂಡಿಲ್ಲ. ನಟಿ ರಾಧಿಕಾ ಪಂಡಿತ್ ರವರ ವಯಸ್ಸು 38 ಆಗಿದ್ದು ಅವರ ಅಭಿಮಾನಿಗಳು ಇಂದಿಗೂ ಕೂಡ ರಾಧಿಕಾ ಪಂಡಿತ್ ರವರ ಅಭಿನಯವನ್ನು ನೋಡುವುದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ.

Be the first to comment

Leave a Reply

Your email address will not be published.


*