ರಾಧಿಕಾ ಯಾರೋ ನನಗೆ ಗೊತ್ತೇ ಇಲ್ಲ ಎಂದ ಕುಮಾರಸ್ವಾಮಿಗೆ ತಿರುಗೇಟು ನೀಡಿದ ರಾಧಿಕಾ ಕುಮಾರಸ್ವಾಮಿ

ನಟಿ ರಾಧಿಕಾ ಕುಮಾರಸ್ವಾಮಿರವರು ಚಿಕ್ಕ ವಯಸ್ಸಿನಿಂದಲೂ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಾ ಸ್ಯಾಂಡಲ್ವುಡ್ನಲ್ಲಿ ತಮ್ಮ ಚಾಪನ್ನು ಮೂಡಿಸಿದ್ದಾರೆ. ಹಲವಾರು ವರ್ಷಗಳ ತನಕ ಅಜ್ಞಾತವಾಸದಲ್ಲಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಇತ್ತೀಚಿಗಷ್ಟೇ ಹಲವು ಸಿನಿಮಾಗಳ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ಕೂಡ ಖುಷಿಯಿಂದ ಇವರ ಸಿನಿಮಾವನ್ನು ನೋಡುತ್ತಿದ್ದು ಇದೀಗ ರಾಧಿಕಾ ಕುಮಾರಸ್ವಾಮಿರವರ ಪತಿ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿರವರು ರಾಧಿಕಾ ಯಾರು ನನಗೆ ಗೊತ್ತಿಲ್ಲ ಎನ್ನುವ ಮಾತನಾಡಿದ್ದು ಈ ವಿಚಾರ ದಿನದಿಂದ ದಿನಕ್ಕೆ ಗಂಭೀರವಾಗುತ್ತಲೇ ಹೋಗುತ್ತಿದೆ.

 

 

ಇಷ್ಟು ದಿನಗಳ ಕಾಲ ರಾಧಿಕಾ ಕುಮಾರಸ್ವಾಮಿಗೆ ಆಸರೆಯಾಗಿ ಇದ್ದ ಕುಮಾರಸ್ವಾಮಿರವರು ಇದೀಗ ರಾಧಿಕಾ ಯಾರು ನಿನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇಷ್ಟು ದಿನಗಳವರೆಗೂ ಕುಮಾರಸ್ವಾಮಿಯವರನ್ನು ನಂಬಿಕೊಂಡು ಜೀವಿಸುತ್ತಿದ್ದ ರಾಧಿಕಾ ಇದೀಗ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಇವರಿಬ್ಬರ ಕೇಸ್ ದೊಡ್ಡ ಮಟ್ಟದಲ್ಲಿ ಸಾಗುತ್ತಿದೆ ಇದೊಂದು ಹೈ ಪ್ರೊಫೈಲ್ ಕೇಸ್ ಆಗಿದ್ದು ರಾಧಿಕಾ ಕುಮಾರಸ್ವಾಮಿರವರಿಗೆ ಎಚ್‌ಡಿ ಕುಮಾರಸ್ವಾಮಿರವರು ಸಪೋರ್ಟ್ ಮಾಡುತ್ತಾರೆ ಈ ಕೇಸ್ ಅಷ್ಟು ದೊಡ್ಡದೇನು ಆಗುವುದಿಲ್ಲ ಎಂದು ಎಲ್ಲರೂ ನಂಬಿಕೆ ಇಟ್ಟುಕೊಂಡಿದ್ದರು.

ಇದೀಗ ಎಲ್ಲರ ಊಹೇ ತಪ್ಪಾಗಿತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರವರು ಒಂದು ಸಂದರ್ಶನದಲ್ಲಿ ರಾಧಿಕಾ ಅವರ ಬಗ್ಗೆ ಕೇಳಿದಾಗ ಯಾರಪ್ಪ ರಾಧಿಕಾ ನನಗೆ ಗೊತ್ತೇ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ಹೇಳುವ ಮೂಲಕ ಕುಮಾರಸ್ವಾಮಿ ರಾಧಿಕಾರವರಿಗೆ ದೊಡ್ಡ ಮಟ್ಟಿಗೆ ಟಾಂಗ್ ನೀಡಿದ್ದಾರೆ. ಈ ಘಟನೆಯು ನೆನ್ನೆಯಷ್ಟೇ ನಡೆದಿದ್ದು ರಾಧಿಕಾ, ಕುಮಾರಸ್ವಾಮಿ ರವರ ಮಾತನ್ನು ಕೇಳಿಸಿಕೊಂಡು ಬೇಸರವನ್ನು ವ್ಯಕ್ತಪಡಿಸಿದ್ದಾರೆ ಅದಕ್ಕೆ ತಿರುಗೇಟು ನೀಡಬೇಕು ಎಂದು ರಾಧಿಕಾ ಕೂಡ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

 

 

ಎಲ್ಲರಿಗೂ ಗೊತ್ತಿರುವ ಹಾಗೆ ರಾಧಿಕಾರವರು ಕುಮಾರಸ್ವಾಮಿಯವರ ಎರಡನೇ ಹೆಂಡತಿಯಾಗಿದ್ದಾರೆ. ರಾಧಿಕಾ ಹಾಗೂ ಕುಮಾರಸ್ವಾಮಿ ಜೊತೆಗಿರುವ ಹಾಗೂ ತಮ್ಮ ಮಗಳ ಬರ್ತಡೇ ಯನ್ನು ಸೆಲೆಬ್ರೇಟ್ ಮಾಡಿರುವ ಫೋಟೋ ಹಾಗೂ ವಿಡಿಯೋಗಳು ಎಲ್ಲಾ ಕಡೆ ವೈರಲ್ ಆಗಿವೆ. ರಾಧಿಕಾ ಅವರು ತಮ್ಮ ಮಗಳಿಗೆ ಶಮಿಕ ಕೆ ಸ್ವಾಮಿ ಎಂದು ಹೆಸರಿಟ್ಟಿದ್ದಾರೆ. ಆರಂಭದಲ್ಲಿ ರಾಧಿಕಾ ಹಾಗೂ ಕುಮಾರಸ್ವಾಮಿ ರವರ ಸಂಬಂಧ ಚೆನ್ನಾಗಿ ಇದ್ದು ಇತ್ತೀಚೆಗೆ ಇವರಿಬ್ಬರ ಸಂಬಂಧ ಸರಿ ಇಲ್ಲ ಎಂದು ಹೇಳಲಾಗುತ್ತಿದೆ.

ಇದೀಗ ರಾಧಿಕಾ ರವರ ಹೆಸರು ವಂಚನೆಯ ಪ್ರಕರಣದಲ್ಲಿ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿರವರ ಸಂಬಂಧದ ಬಗ್ಗೆ ಕೂಡ ಮಾತು ಕಥೆಗಳು ಆರಂಭವಾಗಿದೆ. ನೆನ್ನೆ ಅಷ್ಟೇ ಸಂದರ್ಶನವೊಂದರಲ್ಲಿ ಕುಮಾರಸ್ವಾಮಿರವರನ್ನು ವಂಚನೆಯ ಪ್ರಕರಣದಲ್ಲಿ ರಾಧಿಕಾರವರು ಹೆಸರು ಕೇಳಿ ಬರುತ್ತಿದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಾರೆ ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ ರಾಧಿಕಾ ಯಾರೆಂದು ನನಗೆ ಗೊತ್ತೇ ಇಲ್ಲ ಅವರ ಪರಿಚಯ ಕೂಡ ನನಗೆ ಇಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

 

 

ನಾನು ರಾಧಿಕಾ ಜೊತೆಗಿಲ್ಲ ನಾವಿಬ್ಬರೂ ದೂರವಾಗಿದ್ದೇವೆ ನಾವಿಬ್ಬರು ಮಾತನಾಡುತ್ತಿಲ್ಲ ಎಂಬುದನ್ನು ಕುಮಾರಸ್ವಾಮಿರವರು ಪರೋಕ್ಷವಾಗಿ ಸ್ಪಷ್ಟನೆ ಮಾಡಿದ್ದಾರೆ. ಇದಕ್ಕೆ ರಾಧಿಕಾ ಕುಮಾರಸ್ವಾಮಿ ರವರು ಪ್ರತಿಕ್ರಿಯೆ ನೀಡಿದ್ದು ಕುಮಾರಸ್ವಾಮಿ ನನ್ನ ಜೀವನದಲ್ಲಿ ಬರುವುದಕ್ಕಿಂತ ಮೊದಲೇ ನಾನು ಸ್ಟಾರ್ ಆಗಿದ್ದೆ ಈಗಲೂ ಕೂಡ ನಾನು ಸ್ಟಾರ್ ನನ್ನನ್ನು ನಾನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ನನಗೆ ಯಾರ ಸಪೋರ್ಟ್ ಕೂಡ ಬೇಕಾಗಿಲ್ಲ. ಯಾರು ಏನೇ ಹೇಳಿದರೂ ಕೂಡ ನಿಜ ಏನೆಂಬುದು ಇಡೀ ಕರ್ನಾಟಕಕ್ಕೆ ಗೊತ್ತಿದೆ ಎಂದು ರಾಧಿಕಾ ಕುಮಾರಸ್ವಾಮಿ ತಮ್ಮ ಪತಿ ಕುಮಾರಸ್ವಾಮಿರವರಿಗೆ ಬಿಸಿ ಮುಟ್ಟಿಸಿದ್ದಾರೆ.

1 Comment

  1. ಒಂದು ಹೆಣ್ಣಿಗೆ ಗಂಡನಾಗಿ, ಆ ಹೆಣ್ಣಿನ ಮಗುವಿನ ತಂದೆಯಾಗಿ, ಆಕೆ ಯಾರು ಎಂದು ಗೊತ್ತಿಲ್ಲ ಎನ್ನುವ ಈ ಸುಳ್ಳು ಮೋಸಗಾರ ಮನುಷ್ಯ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಆಗಲು ಯೋಗ್ಯವೇ?

Leave a Reply

Your email address will not be published.


*