ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿಗಳಿಗೆ ಕಳೆದ ವರ್ಷವಷ್ಟೇ ಗಂಡು ಮಗು ಜನಿಸಿತು ಕುಮಾರಸ್ವಾಮಿ ಮೊಮ್ಮಗನ ಜನನದ ವಿಚಾರವಾಗಿ ಅವರ ಅಭಿಮಾನಿಗಳು ರಾಜಕೀಯ ಪಕ್ಷದವರು ಮಗುವಿಗೆ ಹಾರೈಸಿದ್ದರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಖಿಲ್ ರವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದರು ನಿಖಿಲ್ ಕುಮಾರಸ್ವಾಮಿ ತಮ್ಮ ಪತ್ನಿ ರೇವತಿಯ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಿದ್ದರು. ಇದಾದ ಒಂದು ವಾರಕ್ಕೆ ರೇವತಿ ಗಂಡು ಮಗುವಿಗೆ ಜನ್ಮ ನೀಡಿದರು
ಖಾಸಗಿ ಆಸ್ಪತ್ರೆಯ ವೈದ್ಯರು ಕೂಡ ಮಾತನಾಡಿ ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ದೇವೇಗೌಡರ ಮರಿ ಮೊಮ್ಮಗ ಜನಿಸಿದ್ದರಿಂದ ದೇವೇಗೌಡರ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು ಗಂಡು ಮಗು ಜನಿಸಿದ್ದರಿಂದ ದೇವೇಗೌಡ ಕುಟುಂಬದವರೆಲ್ಲರೂ ಖುಷಿಪಟ್ಟಿದ್ದಾರೆ. ತಮ್ಮ ಮೊಮ್ಮಗವನ್ನು ಎತ್ತಿಕೊಂಡು ದೇವೇಗೌಡ ಹಾಗೂ ಕುಮಾರಸ್ವಾಮಿ ಫೋಟೋಗೆ ಪೋಸ್ ನೀಡಿದ್ದಾರೆ.
ಕಳೆದ ತಿಂಗಳಷ್ಟೇ ನಿಖಿಲ್ ಹಾಗೂ ರೇವತಿ ದಂಪತಿಗಳು ತಮ್ಮ ಮುದ್ದು ಮಗನ ನಾಮಕರಣ ಶಾಸ್ತ್ರವನ್ನು ಕೂಡ ಅದ್ದೂರಿಯಾಗಿ ನೆರವೇರಿಸಿದ್ದರು ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ನ ಗಣ್ಯರು ರಾಜಕೀಯ ವ್ಯಕ್ತಿಗಳು ತಮ್ಮ ಕುಟುಂಬದ ಆಪ್ತರು ಸ್ನೇಹಿತರು ನೆಂಟರು ಬಂಧುಬಾಂಧವರು ಎಲ್ಲರೂ ಕೂಡ ಆಗಮಿಸಿ ರೇವತಿ ಹಾಗೂ ನಿಖಿಲ್ ಮಗನ ನಾಮಕರಣ ಶಾಸ್ತ್ರವನ್ನು ಸಂಪೂರ್ಣ ಮಾಡಿದರು ಕುಮಾರಸ್ವಾಮಿ ತಮ್ಮ ಮೊಮ್ಮಗನಿಗೆ ಹವ್ಯಾಸ ಎಂದು ನಾಮಕರಣವನ್ನು ಮಾಡಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಕೂಡ ನಿಖಿಲ್ ದಂಪತಿಗೆ ಗಂಡು ಮಗು ಜನಿಸಿದ್ದರಿಂದ ಖುಷಿಪಟ್ಟಿದ್ದಾರೆ. ಕಳೆದ ತಿಂಗಳಷ್ಟೇ ರಾಧಿಕಾ ಅನಿತಾ ಕುಮಾರಸ್ವಾಮಿಗೆ ಕರೆ ಮಾಡಿ ತಾವು ಕೂಡ ಮೊಮ್ಮಗವನ್ನು ನೋಡಲು ಬರುತ್ತೇನೆ ಎಂದು ಹೇಳಿದ ಆಡಿಯೋ ಎಲ್ಲಾ ಕಡೆ ವೈರಲ್ ಆಗಿತ್ತು ಇದೀಗ ರಾಧಿಕಾ ಕುಮಾರಸ್ವಾಮಿ ತಮ್ಮ ಮಗುವನ್ನು ನೋಡಲು ಹೋಗಿದ್ದಾರೆ. ದಂಪತಿಗಳಿಗೆ ಶುಭಾಶಯವನ್ನು ಕೋರಿ ಹೂಗುಚ್ಛವನ್ನು ಕೂಡ ನೀಡಿದ್ದಾರೆ.