ಹಿಂದಿಯಲ್ಲಿ ಪ್ರಸಾರವಾದ ರಾಧಾಕೃಷ್ಣ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿದೆ. ಈ ಧಾರಾವಾಹಿ ಪ್ರತಿದಿನ ರಾತ್ರಿ 10.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಧಾಕೃಷ್ಣ ಧಾರಾವಾಹಿ ಜನರಿಗೆ ಇಷ್ಟವಾಗಿದೆ. ಅದರಲ್ಲೂ ಕೃಷ್ಣ ಮತ್ತು ರಾಧಾ ಪಾತ್ರದಲ್ಲಿ ನಟಿಸಿದ ನಟರು ಕನ್ನಡಿಗರ ಮನ ಗೆದ್ದಿದ್ದಾರೆ. ನಟಿ ಮಲ್ಲಿಕಾ ಸಿಂಗ್ ರಾಧಾ ಪಾತ್ರದಲ್ಲಿ ನಟಿಸಿದ್ದಾರೆ. ನೋಡಲು ಮುದ್ದಾಗಿರುವ ನಟಿ ಮಲ್ಲಿಕಾ ಬಹಳ ಜನಪ್ರಿಯರಾಗಿದ್ದಾರೆ. ರಾಧಾಕೃಷ್ಣ ಧಾರಾವಾಹಿಯಲ್ಲಿ ಮಲ್ಲಿಕಾ ಸಿಂಗ್ ಸ್ಯಾಂಡಲ್ ವುಡ್ ಗೆ ಎಂಟಿ ಕೊಟ್ಟಿದ್ದಾರೆ. ಸಿನಿಮಾ ಮೂಲಕ ಜನರಿಗೆ ಹತ್ತಿರವಾಗಲು ಸಿದ್ಧರಾಗಿದ್ದಾರೆ
.
ನಟಿ ಈಗ ಕನ್ನಡ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಆ ಮೂಲಕ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ತಮ್ಮ ಮೊದಲ ಕನ್ನಡ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಸಿಂಪಲ್ ಸುನಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮಲ್ಲಿಕಾ ಸಿಂಗ್ ಕನ್ನಡ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎಂದು ‘ಸಿನಿಮಾ ಎಕ್ಸ್ ಪ್ರೆಸ್’ ವರದಿ ಮಾಡಿದೆ.
ಇತ್ತೀಚೆಗಷ್ಟೇ ವಿನಯ್ ರಾಜ್ಕುಮಾರ್ ಅಭಿನಯದ ಹೊಸ ಸಿನಿಮಾ ಲಾಂಚ್ ಆಗಿದೆ. ಸಿಂಪಲ್ ಸುನಿ ನಿರ್ದೇಶನದ ಹೊಸ ಚಿತ್ರದಲ್ಲಿ ವಿನಯ್ ಗೆ ಜೋಡಿಯಾಗಿ ತಮಿಳಿನ ‘ವಿಕ್ರಮ್’ ನಟಿ ಸ್ವಾತಿಷ್ಠಾ ಕೃಷ್ಣನ್ ನಟಿಸಲಿದ್ದಾರೆ ಎಂದು ಘೋಷಿಸಲಾಗಿತ್ತು. ಇದಾದ ನಂತರ ಚಿತ್ರಕ್ಕೆ ಹೊಸ ನಾಯಕಿ ಎಂಟ್ರಿ ಕೊಟ್ಟಿದ್ದಾರೆ.
ಈ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ಗೆ ಇಬ್ಬರು ನಾಯಕಿಯರು ಇರಲಿದ್ದಾರೆ. ವಿನಯ್ ಜೊತೆ ಸ್ವಾತಿಷ್ಠ ಕೃಷ್ಣನ್-ಮಲ್ಲಿಕಾ ಸಿಂಗ್ ಡ್ಯುಯೆಟ್ ಹಾಡಲಿದ್ದಾರೆ. ನಾಯಕಿ ಸ್ವಾತಿಷ್ಠ ಪತ್ರಕರ್ತೆಯ ಪಾತ್ರದಲ್ಲಿ ನಟಿಸಿದರೆ, ಮಲ್ಲಿಕಾ ಕಾಶ್ಮೀರಿ ಹುಡುಗಿಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಈಗ ಸಿಂಪಲ್ ಸುನಿ ನಿರ್ದೇಶನದ ಈ ಹೊಸ ಲವ್ ಸ್ಟೋರಿಯಲ್ಲಿ ಈ ಮೂವರು ಅಷ್ಟರ ಮಟ್ಟಿಗೆ ಮೋಡಿ ಮಾಡುತ್ತಾರೆಯೇ ಕಾದು ನೋಡಬೇಕು.
ವಿನಯ್ ರಾಜ್ಕುಮಾರ್ಗೆ ಜೋಡಿಯಾದ ‘ರಾಧಾ ಕೃಷ್ಣ’ ಧಾರವಾಹಿ ನಟಿ ಮಲ್ಲಿಕಾ ಸಿಂಗ್