ದರ್ಶನ್ ಪ್ರೆಸ್ ಮೀಟ್ನಲ್ಲಿ ನಾನು ಹೋಗಬೇಕು ಕ್ಯಾಮರಾ ಆಫ್ ಮಾಡ್ರೋ ಅಂದಿದ್ದು ಯಾಕೆ ರಚಿತಾ.?

ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಕ್ರಾಂತಿ ಪ್ರೀ ರಿಲೀಸ್ ಇವೆಂಟ್ ನಲ್ಲಿ ಹಾಜರಿದ್ದು ತಮ್ಮ ಅಭಿಮಾನಿಗಳಿಗೆಲ್ಲ ಸೆಲ್ಫಿ ನೀಡಿ ಸಾಕಾಗಿದ್ದಾರೆ. ರಚಿತಾ ರವರು ವಾಶ್ರೂಮ್ ಗೆ ಹೋಗಲು ಕೂಡ ಬಿಡದೆ ಅಭಿಮಾನಿಗಳು ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರಂತೆ. ಅದಕ್ಕಾಗಿ ರಚಿತಾರ್ ಅವರು ನಾನು ವಾಶ್ ರೂಮ್ ಗೆ ಹೋಗ್ಬೇಕು ಕ್ಯಾಮರಾ ಆಫ್ ಮಾಡಿ ಎಂದು ಜೋರಾಗಿ ಕಿರುಚಿದ್ದಾರೆ. ಎಲ್ಲಾ ಸ್ಟಾರ್ ನಟ ಅಥವಾ ನಟಿಯರಿಗೂ ಅಭಿಮಾನಿಗಳು ಫೋಟೋ ಗಾಗಿ ಬೇಡಿಕೆ ನೀಡುತ್ತಾರೆ. ಅವರಿಗೂ ಕೂಡ ಪ್ರೈವಸಿ ಇರುತ್ತದೆ ಎನ್ನುವುದನ್ನು ಮರೆತು ಅವರ ಹಿಂದೆ ಯಾವಾಗಲೂ ತಿರುಗುತ್ತಿರುತ್ತಾರೆ. ಹಾಗೆ ಇಲ್ಲೊಂದು ದೃಶ್ಯಾವಳಿ ಕೂಡ ನಡೆದಿದೆ.

 

 

ಕ್ರಾಂತಿ ಪ್ರೀ ರಿಲೀಸ್ ಇವೆಂಟ್ ನಲ್ಲಿ ಭಾಗವಹಿಸಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಮಾತನಾಡಿ ಇಲ್ಲಿ ನೆರೆದಿರುವ ಅಭಿಮಾನಿಗಳನ್ನು ನೋಡುವುದಕ್ಕೆ ನನಗೆ ಖುಷಿ ಅನ್ನಿಸುತ್ತಿದೆ. ನನಗೆ ಹೌಸ್ ಫುಲ್ ಎನ್ನುವ ಭಾವನೆಗಳು ಕೂಡ ಬರುತ್ತಿದೆ. ಚಲನಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಆದಾಗ ನಮಗೆ ಎಷ್ಟು ಖುಷಿಯಾಗುತ್ತದೆ. ಕ್ರಾಂತಿ ಸಿನಿಮಾವು ಕೂಡ ಖಂಡಿತವಾಗಿಯೂ ಹೌಸ್ ಫುಲ್ ಆಗುತ್ತದೆ ಎಂದು ನನಗೆ ನಂಬಿಕೆ ಇದೆ.
ಇಲ್ಲಿಗೆ ಬಂದಿರುವ ಎಲ್ಲಾ ಅಭಿಮಾನಿಗಳಿಗೂ ತುಂಬು ಹೃದಯದ ಧನ್ಯವಾದಗಳು ಎಂದಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್.

 

 

ನನ್ನ ಕೈಗೆ ಮೈಕ್ ಕೊಟ್ಟಿದ್ದಾರೆ ಎಂದರೆ ನಾನು ಮಾತನಾಡುತ್ತಲೇ ಇರುತ್ತೇನೆ. ಆದರೆ ಈ ತಂಡದ ಜೊತೆಗೆ ಮಾತನಾಡಲು ನನಗೆ ಭಯವಾಗುತ್ತದೆ. ಏಕೆಂದರೆ ದರ್ಶನ್ ಸರ್ ಈ ತಂಡದಲ್ಲಿ ಇದ್ದಾರೆ ನನಗೆ ದರ್ಶನ್ ಸರ್ ಎಂದರೆ ತುಂಬಾ ಅಭಿಮಾನ ಹಾಗೂ ಗೌರವವಿದೆ ಅದಕ್ಕಾಗಿ ನಾನು ಎದ್ದು ನಿಂತು ಮಾತನಾಡುತ್ತಿದ್ದೆ. ನೀವು ಕುಳಿತುಕೊಳ್ಳಿ ಎಂದಿದ್ದಕ್ಕೆ ನಾನು ಕುಳಿತು ಮಾತನಾಡುತ್ತಿದ್ದೇನೆ ಎಂದರು. ಅಭಿಮಾನಿಗಳೆಲ್ಲರೂ ಡಿಜಿಟಲ್ ಫೀಚರ್ ಮೂಲಕ ನಮ್ಮ ಸಿನಿಮಾವನ್ನು ಪ್ರಮೋಟ್ ಮಾಡುತ್ತಿರುವುದು ನನಗೆ ತುಂಬಾ ಖುಷಿಯಾಗುತ್ತಿದೆ. ಯೌಟ್ಯೂಬ್ ನಲ್ಲಿ ಆಗಾಗ ಕೆಲವರು ಕ್ರಾಂತಿ ಸಿನಿಮಾ ಈ ದಿನ ರಿಲೀಸ್ ಆಗಬಹುದು ಆ ದಿನ ಆಗಬಹುದು ಎಂದು ಹೇಳುತ್ತಲೆ ಇದ್ದರೂ ನಮ್ಮ ತಂಡದ ಕಡೆಯಿಂದ ಯಾವುದೇ ಸೂಚನೆಯನ್ನು ನಾವು ನೀಡಿರಲಿಲ್ಲ.

ಕ್ರಾಂತಿ ಚಿತ್ರ ದ ಪ್ರಮೋಷನ್ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲಿ ನಡೆಯುತ್ತಿದೆ ಒಂದು ಚಿತ್ರದ ಪ್ರಮೋಷನ್ ಈ ರೀತಿಯೂ ನಡೆಯಬಹುದಾ ಎಂದು ನಾನು ಎಂದಿಗೂ ಊಹೆ ಮಾಡಿರಲಿಲ್ಲ ದರ್ಶನ್ ಸರ್ ಎಂದರೆ, ಸಾಕು ಅಷ್ಟೊಂದು ಹವಾ ಕ್ರಿಯೆ ಆಗುತ್ತದೆ ಯಾರೆಲ್ಲಾ ಈ ತಂಡಕ್ಕೆ ಸಪೋರ್ಟ್ ಮಾಡುತ್ತಿದ್ದೀರಾ ಅವರೆಲ್ಲರಿಗೂ ಧನ್ಯವಾದಗಳು ಎಂದರು. ನಾನು ನನ್ನ ಮೊದಲ ಸಿನಿಮಾವನ್ನು ದರ್ಶನ್ ಸರ್ ಜೊತೆಗೆ ನಟಿಸಿದ್ದು ಅದು ಬುಲ್ ಬುಲ್, ಇದು ನನ್ನ ಮೊದಲ ಸಿನಿಮಾವಾಗಿತ್ತು. ಅಂದು ಭಯಪಡುತ್ತ ನಾನು ಅವರ ಜೊತೆಗೆ ನಟಿಸಿದ್ದೆ ನಂತರ ಅಂಬರೀಶ ಸಿನಿಮಾದಲ್ಲೂ ಕೂಡ ದರ್ಶನ್ ಸರ್ ಜೊತೆಗೆ ನಾನು ನಟಿಸಿದೆ ಅವರೆಂದರೆ ನನಗೆ ತುಂಬಾ ಗೌರವ ಹಾಗೂ ಭಯ ಖುಷಿ ಎಲ್ಲ ಒಟ್ಟೊಟ್ಟಿಗೆ ಆಗುತ್ತದೆ. ಈಗ ಐದಾರು ವರ್ಷಗಳ ನಂತರ ನಾನು ಅವರ ಜೊತೆ ಮತ್ತೆ ನಟಿಸುತ್ತಿದ್ದೇನೆ. ನಾನು ಕ್ರಾಂತಿ ಸಿನಿಮಾದ ಮುಹೂರ್ತದ ಸಮಯದಲ್ಲಿ ಅದರ ಬಗ್ಗೆ ತುಂಬಾ ಕುತೂಹಲಕಾರಿಯಾಗಿದ್ದೆ.

 

 

ಹರೀಶ್ ಸರ್ ನಿರ್ದೇಶನದಲ್ಲಿ ನಾನು ಮೊದಲನೇ ಬಾರಿ ನಟಿಸುತ್ತಿದ್ದೇನೆ ಅವರ ಹಾಡುಗಳೆಲ್ಲ ಸೂಪರ್ ಹಿಟ್ ಆಗಿವೆ. ಈ ಚಿತ್ರವನ್ನು ಅದ್ಭುತವಾಗಿ ಚಿತ್ರೀಕರಿಸಿದ್ದಾರೆ ಈ ತಂಡವೇ ತುಂಬಾ ಸಕ್ಕತ್ತಾಗಿತ್ತು. ನಾವು ನಟನೆ ಮಾಡಿರುತ್ತೇವೆ ಆದರೆ ಬೇರೆಯವರು ಹೇಗೆ ನಟಿಸಿರುತ್ತಾರೆ ಎಂಬುದು ನಮಗೆ ಗೊತ್ತಿರುವುದಿಲ್ಲ. ನಾವು ಡಬ್ಬಿಂಗ್ ಸಮಯದಲ್ಲಿ ಇಡಿ ಸಿನಿಮಾದ ನಟನೆಯನ್ನು ನೋಡುತ್ತೇವೆ. ಆಗ ನನಗನಿಸಿದ್ದು ಈ ಸಿನಿಮಾ ಎಷ್ಟು ಚೆನ್ನಾಗಿ ಮೂಡಿ ಬಂದಿದೆ ಎಂದು ಅನಿಸಿತ್ತು ಎಂದಿದ್ದಾರೆ. ಈ ಸಿನಿಮಾದ ಹಾಡುಗಳು ತುಂಬಾ ಚೆನ್ನಾಗಿವೆ. ಹರಿ ಸರ್ ಕಂಪೋಸರ್ ಆಗಿರುವುದರಿಂದ ತುಂಬಾ ಚೆನ್ನಾಗಿ ಬಂದಿರುತ್ತವೆ ಎಂದು ಹೇಳಬಹುದು ಕಾಸ್ಟ್ಯೂಮ್ ಡಿಸೈನಿಂಗ್ ಕೂಡ ತುಂಬಾ ಚೆನ್ನಾಗಿದೆ.

 

ಕ್ರಾಂತಿ ಸಿನಿಮಾದಲ್ಲಿ ಇನ್ಸ್ಪಿರೇಷನ್ ನೀಡುವಂತಹ ಹಲವಾರು ಸೀನುಗಳಿವೆ. ಈ ಸಿನಿಮಾ ಒಂದು ಇನ್ಸ್ಪಿರೇಷನಲ್ ಸಿನಿಮಾ ಎಂದು ಹೇಳಬಹುದು. ರಚಿತಾ ರಾಮ್ ರವರು ಕನ್ನಡ ಫಿಲಂ ಇಂಡಸ್ಟ್ರಿಯ ಕ್ಯಾತ ನಟಿಯಾಗಿದ್ದು ಹಲವಾರು ಚಿತ್ರಗಳಲ್ಲಿ ಖ್ಯಾತ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಚಿತಾ ರಾಮ್ ರವರಿಗೆ ಈಗಾಗಲೇ 30 ವರ್ಷ ವಯಸ್ಸಾಗಿದ್ದು ಅವರು ತಮ್ಮ ಮದುವೆಯ ಬಗ್ಗೆ ಯಾವುದೇ ಮಾತನಾಡುತ್ತಿಲ್ಲ. ಆದ್ದರಿಂದ ಅಭಿಮಾನಿಗಳು ಅವರು ಬೇಗ ಮದುವೆಯಾಗಲಿ ಎಂದು ಆಶಿಸುತ್ತಿದ್ದಾರೆ. ರಚಿತಾ ರಾಮ್ ರವರ ಅಕ್ಕ ನಿತ್ಯ ರಾಮ್ ಈಗಾಗಲೇ ವಿವಾಹವಾಗಿದ್ದು ತಮ್ಮ ಪತಿಯ ಜೊತೆ ವಿದೇಶದಲ್ಲಿ ವಾಸವಾಗಿದ್ದಾರೆ.

Be the first to comment

Leave a Reply

Your email address will not be published.


*