ದರ್ಶನ್ ರವರ ಕ್ರಾಂತಿ ಸಿನಿಮಾ ಜನವರಿ 26 ಗಣರಾಜ್ಯೋತ್ಸವದಂದು ಬಿಡುಗಡೆಯಾಗಲು ಸಜ್ಜಾಗಿದೆ. ನೆನ್ನೆ ಎಷ್ಟೇ ಕ್ರಾಂತಿ ಸಿನಿಮಾದ ಟ್ರೈಲರ್ ಕೂಡ ಬಿಡುಗಡೆಯಾಗಿ ಉತ್ತಮ ರೀತಿಯಲ್ಲಿ ವ್ಯೂಸ್ ಕಂಡಿದೆ. ನಂಬರ್ ಒನ್ ಟ್ರೆಂಡಿಂಗ್ ಟಾಪಿಕ್ ಎಂದರೆ ಅದು ಕ್ರಾಂತಿ ಸಿನಿಮಾ ದರ್ಶನ್ ರವರ ಕ್ರಾಂತಿ ಸಿನಿಮಾದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ ಟ್ರೆಂಡಿಂಗ್ ನಂಬರ್ 1 ಸ್ಥಾನವನ್ನು ಗಿಟ್ಟಿಸಿಕೊಂಡಿವೆ ಕ್ರಾಂತಿ ಸಿನಿಮಾ ಸಾಕಷ್ಟು ದಾಖಲೆಗಳನ್ನು ಸೃಷ್ಟಿಸಿ ಮುನ್ನುಗ್ಗುತ್ತದೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ.
ಕ್ರಾಂತಿ ಸಿನಿಮಾದ ನಾಯಕನಟಿ ರಚಿತಾ ರಾಮ್ ಕೂಡ ದರ್ಶನ್ ರವರ ರೀತಿ ಹಲವಾರು ಸಂದರ್ಶನಗಳಲ್ಲಿ ಭಾಗಿಯಾಗಿ ಮಾತನಾಡಿ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದಾರೆ. ಕ್ರಾಂತಿ ಸಿನಿಮಾದ ಇಡೀ ಚಿತ್ರತಂಡ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದೆ. ಯೂಟ್ಯೂಬ್ ಓಪನ್ ಮಾಡಿ ನೋಡಿದರೆ ಪ್ರತಿಯೊಂದು ಚಾನೆಲ್ನಲ್ಲೂ ಕೂಡ ಡಿ ಬಾಸ್ ದರ್ಶನ್ ಅವರ ಸಂದರ್ಶನದ ತುಣುಕುಗಳು ಹರಿದಾಡುತ್ತವೆ.
ದರ್ಶನ್ ರಚಿತಾ ರಾಮ್ ಮಾತ್ರವಲ್ಲದೆ ಕ್ರಾಂತಿ ಸಿನಿಮಾದ ಇಡೀ ಚಿತ್ರತಂಡದ ಜೊತೆಗೆ ಡಿ ಬಾಸ್ ಅಭಿಮಾನಿಗಳು ಕೂಡ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುವಲ್ಲಿ ಬಿಜಿಯಾಗಿದ್ದಾರೆ. ರಚಿತಾ ರಾಮ್ ಕೂಡ ಕ್ರಾಂತಿ ಸಿನಿಮಾದ ಹಾಡುಗಳಿಗೆ ಡಬ್ಸ್ಮ್ಯಾಶ್ ಅಥವಾ ರೀಲ್ಸ್ ಮಾಡುತ್ತಾರೆ ಇದರಿಂದ ಕ್ರಾಂತಿ ಸಿನಿಮಾ ಇನ್ನಷ್ಟು ಅಭಿಮಾನಿಗಳಿಗೆ ತಲುಪುತ್ತದೆ ಎಂದು ಅವರ ನಂಬಿಕೆಯಾಗಿದೆ.
ದರ್ಶನ್ ರವರು ಯಾವುದೇ ರಿವರ್ಸ್ ಸೇಲ್ ಗೆ ಬರದೇ ಒಂದೇ ಬಾರಿ ಬಂದು ಡ್ಯಾನ್ಸ್ ಮಾಡಿ ಒಂದೇ ಟೇಕ್ ತೆಗೆದುಕೊಂಡು ಕಂಪ್ಲೀಟ್ ಮಾಡುತ್ತಾರೆ ಎಂದು ಕ್ರಾಂತಿ ಚಿತ್ರತಂಡದವರು ಹೇಳಿದರು ಕೂಡ ದರ್ಶನ್ ಒಪ್ಪಿಕೊಳ್ಳದೆ ನನಗೆ ಡ್ಯಾನ್ಸ್ ಮಾಡಲು ಬರುವುದಿಲ್ಲ ಎಂದೇ ಹೇಳುತ್ತಿದ್ದಾರೆ. ಕ್ರಾಂತಿ ಸಿನಿಮಾದ ಟ್ರೈಲರ್ ರಿಲೀಸ್ ಆದ ನಂತರ ದರ್ಶನ್ ರವರ ಬಾಡಿ ಬಿಲ್ಡಿಂಗ್ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಇದರ ಬಗ್ಗೆ ದರ್ಶನ್ ಕೂಡ ಪ್ರತಿಕ್ರಿಯಿಸಿ ಟ್ರೈಲರ್ ನಲ್ಲಿ ಕಾಣಿಸುವ ಬಾಡಿ ಬಿಲ್ಡಿಂಗ್ ಮಾಡುವುದಕ್ಕೆ ನಾನು ಕರೋನಾ ಸಮಯದಿಂದಲೂ ಸಾಕಷ್ಟು ಕಷ್ಟ ಪಟ್ಟಿದ್ದೇನೆ ನೀವು ದುಡ್ಡು ಕೊಟ್ಟು ಸಿನಿಮಾ ಒಂದು ನೋಡಲು ಬರುತ್ತೀರಿ ನಾನು ಕೂಡ ಏನನ್ನಾದರೂ ತೋರಿಸಬೇಕು ಹಾಗಾಗಿ ಬಾಡಿ ಬಿಲ್ಡಿಂಗ್ ಮಾಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.