ಹೊರದೇಶದಲ್ಲಿ ಸ್ನೇಹಿತರೊಡನೆ ಕಾಲ ಕಳೆಯುತ್ತಿರುವ ಅಪ್ಪು ಮಗಳು ದೃತಿ. ಫೋಟೋಗಳು ವೈರಲ್

ಅಭಿಮಾನಿಗಳ ಪಾಲಿನ ಪ್ರೀತಿಯ ಆರಾಧ್ಯ ದೈವ ರಾಜಕುಮಾರ್ ಕುಟುಂಬದ ಪಾಲಿನ ಪ್ರೀತಿಯ ಅಪ್ಪು ನಮ್ಮನ್ನಗಲಿ ಒಂದು ವರ್ಷವೇ ಕಳೆಯಿತು. ಇಂದು ಅಪೂರ್ವ ಪುಣ್ಯತಿಥಿ. ಅಪ್ಪು ಎಂತಹ ಫ್ಯಾಮಿಲಿ ಮ್ಯಾನ್ ಎನ್ನುವುದು ನಮಗೆಲ್ಲ ಗೊತ್ತೇ ಇದೆ. ಅಪ್ಪುರವರು ಎಷ್ಟೇ ಬ್ಯುಸಿ ಇದ್ದರೂ ಯಾವುದೇ ಕೆಲಸ ಇದ್ದರೂ ಎಂದಿಗೂ ತಮ್ಮ ಕುಟುಂಬಕ್ಕೆ ಸಮಯವನ್ನು ಕೊಡದೆ ಇರುತ್ತಿರಲಿಲ್ಲ.

 

 

ಅಪ್ಪು ಎಲ್ಲಾ ಅಭಿಮಾನಿಗಳಿಗೂ ಮೊದಲು ಹೇಳುತ್ತಿದ್ದ ಒಂದೇ ಮಾತು ಎಂದರೆ, “ಮೊದಲು ನೀವು ನಿಮ್ಮ ಕುಟುಂಬವನ್ನು ಪ್ರೀತಿಸಿ, ನಂತರ ನನ್ನನ್ನು ಪ್ರೀತಿಸಿ” ಎಂದೇ ಹೇಳುತ್ತಿದ್ದರು. ಅಪ್ಪುರವರು ಅಶ್ವಿನಿರವರನ್ನು ಪ್ರೀತಿಸಿ ಮದುವೆಯಾದರು ಇವರಿಬ್ಬರದ್ದು ಲವ್ ಮ್ಯಾರೇಜ್ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಎನ್ನುವ ವಿಚಾರ ಕೂಡ ನಮಗೆಲ್ಲರಿಗೂ ಗೊತ್ತೇ ಇದೆ.

ಅಪ್ಪು ಕಿರಿಯ ಮಗಳು ವಂದಿತಾ ಬೆಂಗಳೂರಿನಲ್ಲಿ ಓದುತ್ತಿದ್ದು ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಹಿರಿಯ ಮಗಳು ದೃತಿ, ವಿದೇಶದಲ್ಲಿ ಓದುತ್ತಿದ್ದಾರೆ. ತಂದೆಯಾ ಆಸೆ ಅಂತೆ ಇಬ್ಬರೂ ಹೆಣ್ಣು ಮಕ್ಕಳು ಕೂಡ ತುಂಬಾ ಚೆನ್ನಾಗಿ ಓದುತ್ತಿದ್ದಾರೆ. ಇನ್ನು ಮಕ್ಕಳು ಕೂಡ ಅಶ್ವಿನಿರವರಿಗೆ ಧೈರ್ಯವನ್ನು ತುಂಬಿದ್ದಾರೆ. ನಾವು ಎಲ್ಲಾ ದುಃಖದಿಂದ ಹೊರಗೆ ಬರಬೇಕು ನಾವೆಲ್ಲರೂ ಧೈರ್ಯದಿಂದ ಇರಬೇಕು ಅಪ್ಪನ ಕನಸುಗಳನ್ನು ಈಡೇರಿಸಬೇಕು ಎಂದು ಧೃತಿ ತಮ್ಮ ತಾಯಿಗೆ ಹೇಳಿದ್ದಾರೆ.

 

 

ದೃತಿ ಹೊರದೇಶದಲ್ಲಿ ತಮ್ಮ ಸ್ನೇಹಿತರೊಡಗೂಡಿ ಖುಷಿ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. ದೃತಿ ಓದುವುದರಲ್ಲೂ ಕೂಡ ಮುಂದೆ ಇದ್ದಾರೆ. ಹಾಗೆಯೇ ಸ್ಪೋರ್ಟ್ಸ್ ನಲ್ಲೂ ಕೂಡ ಮುಂದೆ ಇದ್ದಾರೆ. ದೃತಿ ಕೂಡ ಪರಿಸರ ಪ್ರೇಮಿಯಾಗಿದ್ದು ಗಿಡ-ಮರಗಳನ್ನು ಬೆಳೆಸುತ್ತಾರೆ.

 

 

ದೃತಿ ಪಾರ್ಕ್, ಸಿನಿಮಾ, ಹೋಟಲ್, ಟ್ರಕ್ಕಿಂಗ್ ಅಂತ ಜೀವನವನ್ನು ಸಕ್ಕತ್ ಎಂಜಾಯ್ ಮಾಡುತ್ತಿದ್ದಾರೆ. ದೃತಿ ರವರು ತಮ್ಮ ಸ್ನೇಹಿತರ ಜೊತೆ ಇರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದ್ದು. ಅಭಿಮಾನಿಗಳು ಅವರ ಫೋಟೋಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Be the first to comment

Leave a Reply

Your email address will not be published.


*