ತನ್ನ ಹುಟ್ಟು ಹಬ್ಬದ ದಿನ ಭರ್ಜರಿ ಡ್ಯಾನ್ಸ್ ಮಾಡಿದ ಪ್ರಿಯಾಂಕ ಉಪೇಂದ್ರ

ನಟಿ ಪ್ರಿಯಾಂಕ ಉಪೇಂದ್ರ ತಮ್ಮ ಅಭಿಮಾನಿಗಳ ಜೊತೆ ತಮ್ಮ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಅವರ ಪತಿ ಉಪೇಂದ್ರ ಕೂಡ ಅವರ ಹುಟ್ಟುಹಬ್ಬವನ್ನು ಸರ್ಪ್ರೈಸಿಂಗ್ ಆಗಿ ಪ್ಲಾನ್ ಮಾಡಿ ಅದ್ದೂರಿಯಾಗಿ ಆಚರಿಸಿದ್ದಾರೆ. ಅಭಿಮಾನಿಗಳು ಕೂಡ ಪ್ರಿಯಾಂಕ ಉಪೇಂದ್ರ ರವರ ಹುಟ್ಟುಹಬ್ಬಕ್ಕೆ ಆಗಮಿಸಿ ಅವರಿಗೆ ಉಡುಗೊರೆಗಳನ್ನು ನೀಡಿದ್ದಾರೆ. ಇವರ ಹೊಸ ಚಿತ್ರದ ಚಿತ್ರತಂಡವು ಕೂಡ ಇವರಿಗೆ ಒಂದು ಸರ್ಪ್ರೈಸ್ ಉಡುಗೊರೆಯನ್ನು ನೀಡಿದೆ ಇದರಿಂದ ಪ್ರಿಯಾಂಕ ಉಪೇಂದ್ರ ತುಂಬಾ ಖುಷಿಪಟ್ಟಿದ್ದಾರೆ.

 

 

ನಟಿ ಪ್ರಿಯಾಂಕ ಉಪೇಂದ್ರ ಖ್ಯಾತ ನಿರ್ದೇಶಕ ಪಿ ವಾಸು ರವರ ಸಹೋದರನ ಪುತ್ರನಾದ ಗೌತಮ್ ವಿಮಲ್ ನಿರ್ದೇಶನದ ಕೈಮರ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದು ಈ ಚಿತ್ರದ ಚಿತ್ರೀಕರಣ ಇದಾಗಲೇ ಮುಕ್ಕಾಲು ಭಾಗ ಮುಗಿದಿದೆ. ಪ್ರಿಯಾಂಕ ಉಪೇಂದ್ರ ಅವರ ಹುಟ್ಟುಹಬ್ಬ ಇದ್ದ ಕಾರಣ ಕೈಮರ ಚಿತ್ರದ ಹೊಸ ಪೋಸ್ಟರನ್ನು ರಿಲೀಸ್ ಮಾಡುವ ಮೂಲಕ ಕೈಮರ ಚಿತ್ರ ಪ್ರಿಯಾಂಕ ಉಪೇಂದ್ರ ಅವರಿಗೆ ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದೆ.

ವಿಮತ್ತಿ ಯಳಗನ್ ನಿರ್ಮಾಣದ ಚಿತ್ರದಲ್ಲೂ ಕೂಡ ಪ್ರಿಯಾಂಕ ಉಪೇಂದ್ರ ,ಪ್ರಿಯಾಮಣಿ, ಛಾಯಾಸಿಂಗ್ ಮತ್ತಿಎಳಗನ್ ಮುಂತಾದವರು ಲೀಡ್ ರೋಲ್ನಲ್ಲಿ ನಟಿಸುತ್ತಿದ್ದು ಇದೊಂದು ಅಪರೂಪದ ಚಿತ್ರವಾಗಿದೆ ಇದರಲ್ಲಿ ಅನುಭವಿ ಕಲಾವಿದರೆ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ ಈ ಚಿತ್ರಕ್ಕೂ ಕೂಡ ನಿರ್ದೇಶಕರು ಅಂತಹವರನ್ನು ಆರಿಸುತ್ತಿದ್ದಾರೆ. ಅಷ್ಟು ಪಾತ್ರ ದಾರಿಗಳಿಗೂ ಕೂಡ ಪಾತ್ರಧಾರಿಗಳಿಗೂ ಕೂಡ ವಿಶೇಷವಾದ ಪಾತ್ರಗಳನ್ನು ನೀಡಿದ್ದಾರೆ.

 

ಕೈಮರ ಚಿತ್ರದ ಕಥೆಯನ್ನು ವಿಮಲ್ ರವರು ಬರೆದಿದ್ದು ಗುರು ಕಿರಣ್ ರವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಛಾಯಾಗ್ರಹಣವನ್ನು ಮಣಿಕಂಠನ್ ಮಾಡುತ್ತಿದ್ದು ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ವಿನೋದ್ ರವರು ಸಾಹಸ ನಿರ್ದೇಶನವನ್ನು ಕೈಮರ ಚಿತ್ರದಲ್ಲಿ ಮಾಡುತ್ತಿದ್ದಾರೆ. ಪ್ರಿಯಾಂಕ ಉಪೇಂದ್ರ ರವರಿಗೆ ತಮ್ಮ 45ನೇ ವರ್ಷದ ಹುಟ್ಟುಹಬ್ಬದ ತುಂಬಾ ವಿಶೇಷವಾಗಿದ್ದು ತಮ್ಮ ಹುಟ್ಟು ಹಬ್ಬವನ್ನು ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಪ್ರಿಯಾಂಕ ಉಪೇಂದ್ರರವರ ಹುಟ್ಟುಹಬ್ಬಕ್ಕೆ ನಟ ಯಶ್ ಕೂಡ ಆಗಮಿಸಿದ್ದು ಪ್ರಿಯಾಂಕ ಉಪೇಂದ್ರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ.

ಪ್ರಿಯಾಂಕ ಉಪೇಂದ್ರ ರವರ ಮಗಳು ಇದಾಗಲೇ ಪ್ರಿಯಾಂಕ ಉಪೇಂದ್ರ ರವರ ಸಿನಿಮವಾದ ದೇವಕಿ ಚಿತ್ರದಲ್ಲಿ ಇವರ ಮಗಳು ಐಶ್ವರ್ಯ ನಟಿಸಿದ್ದು ಇದೀಗಾಗಲೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಪ್ರಿಯಾಂಕ ಉಪೇಂದ್ರ ರವರು ಕೈಮರ ಉಗ್ರಾವತಾರ ಮಿಸ್ ನಂದಿನಿ ಮುಂತಾದ ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಪ್ರಿಯಾಂಕಾ ಉಪೇಂದ್ರ ರವರಿಗೆ ಕೈಮರ ಚಿತ್ರವು ಹೊಸ ಟೀಸರ್ ಮೂಲಕ ಶುಭಾಶಯಗಳು ತಿಳಿಸಿದ್ದರೆ ಉಗ್ರವತಾರಾ ಚಿತ್ರ ತಂಡ ಒಂದು ಹೊಸ ಸಾಂಗ್ ರಿಲೀಸ್ ಮಾಡಿ ಪ್ರಿಯಾಂಕ ಉಪೇಂದ್ರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದೆ.

 

 

ನಟಿ ಪ್ರಿಯಾಂಕ ಉಪೇಂದ್ರ ಹಾಗೂ ಅವರ ಪತಿ ಉಪೇಂದ್ರ ಸೇರಿದಂತೆ ಅವರ ಮಗಳು ಐಶ್ವರ್ಯ ತಮ್ಮ ಕುಟುಂಬಸ್ಥರು ಬಂಧು ಬಾಂಧವರು ಸ್ನೇಹಿತರು ಸಿನಿರಂಗದ ಕಲಾವಿದರ ಜೊತೆ ತಮ್ಮ 45ನೇ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಇವರ ಹುಟ್ಟು ಹಬ್ಬದ ಬೆನ್ನಲ್ಲೇ ಇವರಿಗೆ ಚಿತ್ರ ತಂಡದವರು ಕೂಡ ಸರ್ಪ್ರೈಸ್ ಆಗಿ ಹೊಸ ಹಾಡು ಹಾಗೂ ಟೀಸರ್ ಮೂಲಕ ಉಡುಗೊರೆಯನ್ನು ನೀಡಿದ್ದು ಪ್ರಿಯಾಂಕ ಉಪೇಂದ್ರ ಇದನ್ನು ನೋಡಿ ಖುಷಿಪಟ್ಟಿದ್ದಾರೆ. ಪ್ರಿಯಾಂಕ ಉಪೇಂದ್ರ ತಮ್ಮ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸ್ವಲ್ಪ ಸಮಯವನ್ನು ಕಳೆದು ತದನಂತರ ತಮ್ಮ ಬರ್ತಡೇ ಪಾರ್ಟಿಯಲ್ಲಿ ಡ್ಯಾನ್ಸ್ ಕೂಡ ಮಾಡಿದ್ದಾರೆ.

Be the first to comment

Leave a Reply

Your email address will not be published.


*