ಶಿವಮೊಗ್ಗ– ಭದ್ರಾವತಿ ನಗರಗಳ ಮಧ್ಯೆ ಇರುವ ಸೋಗಾನೆ ಬಳಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. 449 ಕೋಟಿ ವೆಚ್ಚದಲ್ಲಿ 778 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ.

ಇಂದು ಬೆಳಗ್ಗೆ 11.40ಕ್ಕೆ ವಿಶೇಷ ವಿಮಾನದ ಮೂಲಕ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಬಂದಿಳಿದರು. ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ವೈ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ ಪ್ರಧಾನಿ ಟರ್ಮಿನಲ್ ವೀಕ್ಷಣೆ ಮಾಡಿದರು.

 

 

ವಿಮಾನ ವಿಲ್ದಾಣದ ಉದ್ಘಾಟನೆಗೆಂದು ಶಿವಮೊಗ್ಗಕ್ಕೆ ಆಗಮಿಸಿರುವ ಪ್ರಧಾನಿ ಮೋದಿಗೆ ಶ್ರೀಗಂಧದ ಉಡುಗೊರ ನೀಡಲಾಯಿತು. ವಿಮಾನ ನಿಲ್ದಾಣದ ಟರ್ಮಿನಲ್ ಮಾದರಿಯನ್ನು ಕಲಾವಿದರು ಶ್ರೀಗಂಧದಲ್ಲಿ ನಿರ್ಮಾಣ ಮಾಡಿದ ಉಡುಗೊರೆಯನ್ನು ವುಧಾನಿ ಮೋದಿಗೆ ನೀಡಿದರು. ಶ್ರೀಗಂಧದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಮಾದರಿಯ ಪ್ರತಿಕೃತಿ ನಿರ್ಮಾಣವಾಗಿದ್ದರೆ ಸರಣಿಯ ಕೆಳಭಾಗವನ್ನು ಬೀಟೆ ಹಾಗೂ ಶಿವನ ಮರದಿಂದ ತಯಾರಿಸಲಾಗಿದೆ. ಸಾಗರದ ಕಲಾವಿದರು ಈ ವಿಶೇಷ ಕಲಾಕೃತಿ ಪ್ರಹಿಸಿದ್ದಾರೆ.

ಶ್ರೀಗಂಧದ ಉಡುಗೊರೆಯ ಜೊತೆಗೆ ಅಡಕೆ ಹಾಳೆಯಲ್ಲಿ ಮಾಡಿರುವ ಪೇಟ ಹಾಗೂ ಅಡಕೆಯಲ್ಲಿ ಮಾಡಿರುವ ಹಾರ ಹಾಕಿ ಪ್ರಧಾನಿ ಮೋದಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

 

 

ಬಳಿಕ ‘ಸಿರಿಗನ್ನಡಂ ಗೆಲೆ’ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ, ಶಿವಮೊಗ್ಗದ ಜನರ ಹಲವು ವರ್ಷಗಳ ಬೇಡಿಕೆ ಈಡೇರಿದೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವರಾದ ನಾರಾಯಣಗೌಡ, ಭೈರತಿ ಬಸವರಾಜ್‌, ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತಿತರರು ಈ ಸಂದರ್ಭ ವೇದಿಕೆಯಲ್ಲಿದ್ದರು. ಇದೇವೇಳೆ ನರೇಂದ್ರ ಮೋದಿಯವರು ಶಿವಮೊಗ್ಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ, ಉದ್ಘಾಟನೆ ನೆರವೇರಿಸಿದರು.

Leave a comment

Your email address will not be published. Required fields are marked *