ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ನೆನಪಿರಲಿ ಪ್ರೇಮ್ ಎಲ್ಲರಿಗೂ ಚಿರಪರಿಚಿತ ನೆನಪಿರಲಿ ಪ್ರೇಮ್(nenapirali Prem) ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಮಿಂಚಿದರು. ಇದೀಗ ಇವರು ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಆದರೂ ಕೂಡ ಆಗಾಗೆ ಹಲವು ಸಿನಿಮಾಗಳಲ್ಲಿ ನೆನಪಿರಲಿ ಪ್ರೇಮ್ ರವರು ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ನಮಗೆಲ್ಲ ತಿಳಿದಿರುವಂತೆ ಇತ್ತೀಚಿಗಷ್ಟೇ ನೆನಪಿರಲಿ ಪ್ರೇಮ್ ಮಗಳು ಅಮೃತ(Amruta Prem) ಒಂದು ಹೊಸ ಸಿನಿಮಾಕ್ಕೆ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಅವರು ತಮ್ಮ ಹೊಸ ಸಿನಿಮಾಗೆ ಅತಿ ಹೆಚ್ಚು ಸಂಭಾವನೆಯನ್ನು ಎಕ್ಸ್ಪೆಕ್ಟ್ ಮಾಡುತ್ತಿದ್ದು ನಿರ್ದೇಶಕರು ಕೂಡ ಇವರು ಕೇಳಿದ ಸಂಭಾವನೆಗೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ನಟ ನೆನಪಿರಲಿ ಪ್ರೇಮ್ ರವರು ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ ಇತ್ತೀಚಿಗಷ್ಟೇ ಚೌಕ ಚಿತ್ರದಲ್ಲೂ ಕೂಡ ನಟ ಡಿ ಬಾಸ್ ದರ್ಶನ್, ಪ್ರಜ್ವಲ್ ದೇವರಾಜ್, ಕಾಶಿನಾಥ್ ಮುಂತಾದ ಮೇರು ನಟರ ಜೊತೆ ನಟಿಸಿದ್ದರು ನೆನಪಿರಲಿ ಪ್ರೇಮ್ 2004ರಲ್ಲಿ ಪ್ರಾಣ ಎನ್ನುವ ಚಿತ್ರದ ಮೂಲಕ ಕನ್ನಡ ಫಿಲಂ ಇಂಡಸ್ಟ್ರಿ ಗೆ ಎಂಟ್ರಿ ಕೊಟ್ಟಿದ್ದರು ತದನಂತರ ನೆನಪಿರಲಿ ಎಂಬ ಚಿತ್ರದ ಮೂಲಕ ಇವರು ಪ್ರಖ್ಯಾತಿಯನ್ನು ಪಡೆದುಕೊಂಡರು ಅಷ್ಟೇ ಅಲ್ಲದೆ ನಟಿ ಅಮೂಲ್ಯ ಜಗದೀಶ್(actress Amulya Jagadish) ಜೊತೆ ಮಳೆ ಎನ್ನುವ ಚಿತ್ರದಲ್ಲೂ ಕೂಡ ನಟಿಸಿದ್ದರು ಚಾರ್ಮಿನಾರ್, ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ಪಲ್ಲಕ್ಕಿ, ಗುಣವಂತ, ಹೊಂಗನಸು ,ಸವಿ ಸವಿ ನೆನಪು, ಚಂದ್ರ, ಶತ್ರು, ದಳಪತಿ ,ಲೈಫ್ ಜೊತೆ ಒಂದ್ ಸೆಲ್ಫಿ ಮುಂತಾದ ಚಿತ್ರಗಳಲ್ಲಿ ನಟ ಪ್ರೇಮ್ ಕುಮಾರ್ ಅವರು ನಟಿಸಿದ್ದಾರೆ.
ಇದೀಗ ನಟ ಪ್ರೇಮ್ ರವರ ಮಗಳು ಅಮೃತ ಪ್ರೇಮ್ ಹೊಸ ಚಿತ್ರರಂಗಕ್ಕೆ ನಾಯಕಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದ್ದಾರೆ. ಡಾಲಿ ಧನಂಜಯ್ ರವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ “ಟಗರು ಪಲ್ಯ” ಎನ್ನುವ ಚಿತ್ರದಲ್ಲಿ ಅಮೃತ ಪ್ರೇಮ್ ನಾಯಕ ನಟಿಯಾಗಿ ಆಯ್ಕೆಯಾಗಿದ್ದು ಈಗಾಗಲೇ ಲಂಗ ದಾವಣಿಯನ್ನು ತೊಟ್ಟು ಹಳ್ಳಿ ಹುಡುಗಿಯ ಅವತಾರದಲ್ಲಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ.
ಟಗರು ಪಲ್ಯ ಚಿತ್ರದಲ್ಲಿ ಡಾಲಿ ಧನಂಜಯ್ ರವರು ನಾಯಕನಟನಾಗಿ ನಟಿಸುತ್ತಿದ್ದು ಈ ಚಿತ್ರಕ್ಕೆ ಪ್ರೇಮ್ ರವರ ಮಗಳು ಅಮೃತ ಪ್ರೇಮ್ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ. ನೆನಪಿರಲಿ ಪ್ರೇಮ್ ಮಗಳು ಕನ್ನಡ ಚಿತ್ರರಂಗಕ್ಕೆ ನಾಯಕನಟಿಯಾಗಿ ಪಾದರ್ಪಣೆ ಮಾಡುವಷ್ಟು ದೊಡ್ಡವಳಾಗಿ ಬೆಳೆದು ನಿಂತಿದ್ದಾಳೆ ಎಂಬುವುದು ನೆನಪಿರಲಿ ಪ್ರೇಮ ರವರ ಅಭಿಮಾನಿಗಳಿಗೂ ಕೂಡ ಆಶ್ಚರ್ಯ ತರುವಂತದ್ದಾಗಿದೆ. ಹಾಗೆಯೇ ಮುಂದಿನ ಜೀವನದಲ್ಲಿ ಇವರು ಕನ್ನಡ ಚಿತ್ರರಂಗದ ಸ್ಟಾರ್ ನಟ ನಟಿಯಾಗಿ ಮೆರೆಯುವುದರಲ್ಲಿ ಯಾವುದೇ ಶಂಕೆ ಇಲ್ಲ.
ನಟ ಡಾಲಿ ಧನಂಜಯ್ ಇದೀಗಾಗಲೇ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ ಈ ಹಿಂದೆ ಬಡವ ರಾಸ್ಕಲ್ ಎನ್ನುವ ಚಿತ್ರವನ್ನು ಅಮೃತ ಅಯ್ಯಂಗಾರ್ ರವರ ಜೊತೆ ನಿರ್ಮಾಣಯನ್ನು ಮಾಡಿದ್ದರು ಇದೀಗ ನಟ ನೆನಪಿರಲಿ ಪ್ರೇಮ್ ರವರ ಮಗಳು ಅಮೃತ ಪ್ರೇಮ್ ರವರು ಕನ್ನಡ ಚಿತ್ರರಂಗಕ್ಕೆ ಡಾಲಿ ಧನಂಜಯ್(Dali dananjay) ಮಾಡಿದ ಟಗರು ಪಲ್ಯ(tagaru palya) ಚಿತ್ರದ ಮೂಲಕ ಪಾದರ್ಪಣೆ ಮಾಡುತ್ತಿರುವುದು ನಟ ಪ್ರೇಮ್ ರವರಿಗೂ ಕೂಡ ಖುಷಿಯನ್ನು ತಂದಿದೆ.
ಇದೀಗ ನೆನಪಿರಲಿ ಪ್ರೇಮ್ ಮಗಳು ಅಮೃತ ಪ್ರೇಮ್ ಮೊದಲ ಚಿತ್ರವಾದ ಟಗರು ಪಲ್ಯ ಚಿತ್ರಕ್ಕೆ ಕೇಳಿರುವ ಸಂಭಾವನೆಯನ್ನು ನೋಡಿದಾಗ ಎಲ್ಲರಿಗೂ ಶಾಕ್ ಆಗುತ್ತದೆ. ಟಗರು ಪಲ್ಯ ಚಿತ್ರದ ನಾಯಕನಟಿ ಅಮೃತ ಪ್ರೇಮ್ ಇದೀಗ ನಿರ್ಮಾಪಕರ ಬಳಿ ತನ್ನ ಮೊದಲನೇ ಸಿನಿಮಾಕ್ಕಾಗೆ 10 ಲಕ್ಷ ರೂಪಾಯಿ ಸಂಭಾವನೆಯನ್ನು ಕೇಳುತ್ತಿದ್ದಾರೆ. ಅಮೃತ ಪ್ರೇಮ್(Prem daughter Amrutha Prem) ತಮ್ಮ ಮೊದಲ ಸಿನಿಮಾ ಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಂಭಾವನೆಯನ್ನು ಕೇಳುತ್ತಿರುವುದು ಟಗರು ಪಲ್ಯ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಿಗೂ ಕೂಡ ಶಾಕ್ ಆಗಿದೆ.