ನಟ ಪ್ರೇಮ್ ಮಗಳು ಅಮೃತ ಪ್ರೇಮ್ ಡಾಲಿ ಧನಂಜಯ್(dolly Dhananjay) ನಿರ್ಮಾಣದ ಟಗರು ಪಲ್ಯ(tagaru palya) ಎಂಬ ಚಿತ್ರದಲ್ಲಿ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಟಗರು ಪಲ್ಯ ಚಿತ್ರದಲ್ಲಿ ಡಾಲಿ ಧನಂಜಯ್ ರವರ ನಿರ್ಮಾಣದಲ್ಲಿ ಮೂಡಿಬಂದಿದ್ದ ಬಡವ ರಾಸ್ಕಲ್(badava rascal) ಚಿತ್ರದ ನಾಗಭೂಷಣ್ ಅವರು ನಾಯಕನಟನಾಗಿ ನಟಿಸುತ್ತಿದ್ದಾರೆ. ಟಗರು ಪಲ್ಯ ಚಿತ್ರವನ್ನು ಡಾಲಿ ಧನಂಜಯ್ ರವರೇ ನಿರ್ಮಾಣ ಮಾಡುತ್ತಿದ್ದು ಇತ್ತೀಚಿಗಷ್ಟೇ ಪ್ರೇಮ ಮಗಳು ಅಮೃತ ಪ್ರೇಮ್ ಟಗರು ಪಲ್ಯ ಚಿತ್ರಕ್ಕೆ ಕೇಳಿದ್ದ ಸಂಭಾವನೆ ವಿಚಾರವಾಗಿ ಸುದ್ದಿಯಲ್ಲಿದ್ದರು ಅಮೃತಾ ಪ್ರೇಮ್ ರವರು ಏನು ಓದುತ್ತಿದ್ದಾರೆ ಅವರ ವಯಸ್ಸೆಷ್ಟು ಎಂಬೆಲ್ಲ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿತ್ತು ಇದೀಗ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.
ನೆನಪಿರಲಿ ಪ್ರೇಮ್ ಮಗಳು ಅಮೃತ ಪ್ರೇಮ್ ಡಾಲಿ ಧನಂಜಯ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಟಗರು ಪಲ್ಯ ಚಿತ್ರದ ನಾಯಕ ನಟಿಯಾಗಿ ಆಯ್ಕೆಯಾಗಿದ್ದು ಇತ್ತೀಚಿಗಷ್ಟೇ ಲಂಗ ದಾವಣಿ ತೊಟ್ಟು ಹಳ್ಳಿ ಹುಡುಗಿಯ ರೀತಿಯಲ್ಲಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು ಆ ಫೋಟೋಗಳು ಎಲ್ಲಾ ಕಡೆ ವೈರಲ್ ಆಗಿದ್ದವು ಡಾಲಿ ಧನಂಜಯ್ ರವರು ಇದೀಗಾಗಲೇ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದು ಅಮೃತ ಅಯ್ಯಂಗಾರ್(Amrita Iyengar) ರವರ ಜೊತೆಗೆ ಬಡವ ರಾಸ್ಕಲ್ ಎನ್ನುವ ಚಿತ್ರವನ್ನು ನಿರ್ಮಾಣ ಮಾಡಿದ್ದರು. ತದನಂತರ ಹೆಡ್ ಬುಶ್(head bush) ಚಿತ್ರವನ್ನು ಕೂಡ ನಿರ್ಮಾಣ ಮಾಡಿದ್ದರು ಇದೀಗ ಟಗರು ಪಲ್ಯ ಚಿತ್ರದ ನಿರ್ಮಾಣವನ್ನು ಮಾಡಲಿದ್ದಾರೆ.
ಸ್ಯಾಂಡಲ್ ವುಡ್ನ ಚಾಕ್ಲೆಟ್ ಬಾಯ್ ಎಂದೆ ಹೆಸರನ್ನು ಪಡೆದುಕೊಂಡಿದ್ದ ನೆನಪಿರಲಿ ಪ್ರೇಮ ರವರು ಹಲವಾರು ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಚೌಕ ಮಳೆ ನೆನಪಿರಲಿ ಚಾರ್ಮಿನಾರ್ ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ ಪಲ್ಲಕ್ಕಿ ಗುಣವಂತ ಹೊಂಗನಸು ಸವಿ ಸವಿ ನೆನಪು ಚಂದ್ರ ಶತ್ರು ದಳಪತಿ ಲೈಫ್ ಜೊತೆ ಒಂದ್ ಸೆಲ್ಫಿ ಮುಂತಾದ ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ.
ಡಾಲಿ ಧನಂಜಯ್ ರವರು ತಮ್ಮ ಡಾಲಿ ಪ್ರೊಡಕ್ಷನ್ ಹೌಸ್ ಮೂಲಕ ಹೊಸಬರಿಗೆ ಅವಕಾಶ ನೀಡಬೇಕು ಎಂದುಕೊಂಡಿದ್ದರು ಆದ್ದರಿಂದಲೇ ತಮಗೆ ಬಂದ ಕಥೆಯಾದ ಟಗರು ಪಲ್ಯ ಚಿತ್ರದ ಕಥೆಯನ್ನು ನಟ ಪ್ರೇಮ್ ಮಗಳು ಅಮೃತ ರವರ ನಾಯಕತ್ವದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಅಮೃತ ಪ್ರೇಮ್ ರವರನ್ನು ಸ್ಯಾಂಡಲ್ವುಡ್ ಗೆ ಪರಿಚಯ ಮಾಡಿಕೊಡುತ್ತಿದ್ದು ಇದರ ವಿಚಾರವಾಗಿ ನಟ ಪ್ರೇಮ್ ಕೂಡ ಖುಷಿಪಟ್ಟಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನೆನಪಿರಲಿ ಪ್ರೇಮ ರವರು ಒಂದಾನೊಂದು ಕಾಲದಲ್ಲಿ ಟಾಪ್ ನಟನಾಗಿ ಮೆರೆಯುತ್ತಿದ್ದರು ಆದರೆ ಇತ್ತೀಚೆಗೆ ಅವರ ಬೇಡಿಕೆ ಕಮ್ಮಿಯಾಗಿದ್ದು ಅವರು ಅಲ್ಲಿಲ್ಲಿ ಒಂದೊಂದು ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಮಗಳು ಅಮೃತಾ ಪ್ರೇಮ್ ರವರನ್ನು ಡಾಲಿ ನಿರ್ಮಾಣದ ಟಗರು ಪಲ್ಯ ಚಿತ್ರದ ಮೂಲಕ ಪರಿಚಯಿಸುತ್ತಿದ್ದು ಪ್ರೇಮ ಮಗಳು ಅಮೃತ ಪ್ರೇಮ್ (nenapirali Prem daughter Amrutha Prem)ರವರಿಗೆ ಇದೀಗ 21 ವರ್ಷ ವಯಸ್ಸಾಗಿದ್ದು(age) ಬೆಂಗಳೂರಿನ ಖ್ಯಾತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫೈನಲ್ ಇಯರ್ ನಲ್ಲಿ ಇಂಜಿನಿಯರಿಂಗ್ (education)ಅನ್ನು ಓದುತ್ತಿದ್ದಾರೆ.