ಚಪ್ಪಲಿ ಎಸೆದವನ ಕೇಸ್ ಸ್ವತಹ ವಾಪಸ್ ಪಡೆದ ಡಿ ಬಾಸ್ ದರ್ಶನ್: ನೆನ್ನೆ ಹೊಸಪೇಟೆಯಲ್ಲಿ ದರ್ಶನ್ ರಚಿತಾ ರಾಮ್ ಸೇರಿದಂತೆ ಕ್ರಾಂತಿ ಚಿತ್ರತಂಡದವರು ತಮ್ಮ ಕ್ರಾಂತಿ ಚಿತ್ರದ ಬೊಂಬೆ ಬೊಂಬೆ ಹಾಡನ್ನು ರಿಲೀಸ್ ಮಾಡಲು ಹೋಗಿರುವ ವೇಳೆ ಒಂದು ಆಚಾತುರ್ಯ ನಡೆದು ಫ್ಯಾನ್ ವಾರ್ ನಡುವೆ ದರ್ಶನ್ ರವರಿಗೆ ಯಾರೋ ಒಬ್ಬರು ಕಿಡಿಗೇಡಿಗಳು ಚಪ್ಪಲಿಯನ್ನು ಎಸೆದಿದ್ದಾರೆ. ಈ ವೇಳೆ ದರ್ಶನ್ ಅಭಿಮಾನಿಗಳು ಹಾಗೂ ಅಪ್ಪು ಅಭಿಮಾನಿಗಳ ನಡುವೆ ಹೊಸಪೇಟೆಯಲ್ಲಿ ದೊಡ್ಡ ಗಲಾಟೆಯೆ ನಡೆದಿದೆ.
ಈ ವೇಳೆ ಡಿ ಬಾಸ್ ದರ್ಶನ್ ಮಾತನಾಡಿ ಇಂತಹ ಹಲವಾರು ಸಂದರ್ಭಗಳನ್ನು ನಾನು ಈಗಾಗಲೇ ಎದುರಿಸಿದ್ದೇನೆ ಅದರಲ್ಲಿ ಇದು ಕೂಡ ಒಂದು ಎಂದು ಸಮಾಧಾನವಾಗಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲದೆ ಈ ಗಲಾಟೆಯ ವೇಳೆ ರಚಿತಾ ರಾಮ್ ರವರ ಮೇಲೆ ಏನಾದರೂ ಎಸೆಯುತ್ತಾರೆ ಎಂದು ಅವರನ್ನು ಪ್ರೊಟೆಕ್ಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಅಭಿಮಾನಿಗಳು ದರ್ಶನ್ ಸಪೋರ್ಟಿಗೆ ನಿಂತಿದ್ದಾರೆ.
ಡಿ ಬಾಸ್ ದರ್ಶನ್ ಕನ್ನಡ ಚಿತ್ರರಂಗಕ್ಕೆ ಬಂದಾಗಿನಿಂದಲೂ ಕೂಡ ಒಂದಲ್ಲ ಒಂದು ತೊಂದರೆಗಳನ್ನು ಎದುರಿಸುತ್ತಲೆ ಮುನ್ನುಗ್ಗುತ್ತಿದ್ದಾರೆ. ಇದೀಗ ಹೊಸಪೇಟೆಯಲ್ಲಿ ಡಿ ಬಾಸ್ ದರ್ಶನ್ ಅವರ ಮೇಲೆ ಚಪ್ಪಲಿಯನ್ನು ಎಸೆದಿರುವ ವಿಡಿಯೋ ಎಲ್ಲಾ ಕಡೆ ವೈರಲ್ಲಾಗಿದ್ದು ಅವರ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ನೋಡಿದ ಕಿಚ್ಚ ಸುದೀಪ್ ಅಭಿಮಾನಿಗಳು ಕೂಡ ದರ್ಶನ್ ಗೆ ಬೆಂಬಲವನ್ನು ಸೂಚಿಸುತ್ತಿದ್ದಾರೆ.
ಡಿ ಬಾಸ್ ದರ್ಶನ್ ರವರಿಗೆ ಗುಂಪಿನಲ್ಲಿ ನಿಂತು ಹೊಡೆದಿರುವ ವ್ಯಕ್ತಿ ಅಪ್ಪು ಅಭಿಮಾನಿ ಎನ್ನುವ ವದಂತಿಗಳು ಕೇಳಿ ಬರುತ್ತಿವೆ ಆದರೆ ಚಪ್ಪಲಿ ಎಸೆದವನು ಯಾರ ಅಭಿಮಾನಿ ಎಂದು ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ ಯಾರದೇ ಅಭಿಮಾನಿಯಾಗಿದ್ದರೂ ಕೂಡ ಎಲ್ಲಾ ಅಭಿಮಾನಿಗಳಿಗೂ ಒಂದೊಂದು ಧ್ಯೇಯ ವಿರುತ್ತದೆ ಆದರೆ ಈಗ ಯಾವುದಕ್ಕೂ ಸಲ್ಲದವನು ಪುನೀತ್ ರಾಜಕುಮಾರ್ ರವರ ಹಲವಾರು ಕೆಲಸಗಳನ್ನು ದರ್ಶನ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದೀಗ ಡಿ ಬಾಸ್ ದರ್ಶನ್ ಮೇಲೆ ಚಪ್ಪಲಿ ಎಸೆದವನು ವಿರುದ್ಧ ದರ್ಶನ್ ಅಭಿಮಾನಿಗಳು ಎಫ್ಐಆರ್ ಕೂಡ ದಾಖಲೆಸಿದ್ದರು ಅವನನ್ನು ಪೊಲೀಸರು ಕೂಡ ಬಂಧಿಸಿದ್ದರು ಆದರೆ ಡಿ ಬಾಸ್ ದರ್ಶನ್ ಈ ಕೇಸನ್ನು ವಾಪಸ್ ಪಡೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ