ಭಾರತ ದೇಶದ ಪಿಎಮ್ ಕಿಸಾನ್ ಯೋಜನೆ ಫಲಾನುಭವಿಗಳಾದ ರೈತರಿಗೆ ಕೇಂದ್ರ ಸರ್ಕಾರ ಇದೀಗ ಸಿಹಿ ಸುದ್ದಿ ಒಂದನ್ನು ನೀಡಿದೆ. ಅದೇನೆಂದರೆ ರೈತರಿಗೆ ಸಹಾಯವಾಗಲಿ ಹಾಗೂ ಅವರ ಉತ್ತಮ ಇಳುವರಿಗೆ ಕೇಂದ್ರ ಸರ್ಕಾರದಿಂದ ಸಹಾಯ ಮಾಡಬೇಕು ಎಂದು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿದೆ.
ಕೇಂದ್ರ ಸರ್ಕಾರದ ಮೋದಿ ಸರ್ಕಾರ ರೈತರ ಆದಾಯವನ್ನು ಹೆಚ್ಚಿಸಬೇಕು ರೈತರ ಸಾಲವನ್ನು ತೀರಿಸಲು ಸಹಾಯವನ್ನು ಮಾಡಬೇಕು ಎಂದು ಹಲವಾರು ಯೋಜನೆಗಳನ್ನು ತರಲು ಪ್ರಯತ್ನಿಸುತ್ತಿದೆ. ಹಾಗಾಗಿ ರೈತರಿಗೆ 15 ಲಕ್ಷ ರೂಪಾಯಿಯನ್ನು ಕೃಷಿ ಉದ್ಯಮ ಆರಂಭಿಸಲು ಕೇಂದ್ರ ಸರ್ಕಾರವು ನೀಡುತ್ತಿದೆ. ಈ ಯೋಜನೆಯನ್ನು ರೈತರು ಅನುಭವಿಸಲು ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಪಿ ಎಂ ಕಿಸಾನ್ ಎಫ್ ಪಿ ಓ ಯೋಜನೆಯ ವಿವರ
*ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಎಫ್ ಪೀ ಒ ಯೋಜನೆಯನ್ನು ಪ್ರಾರಂಭಿಸಿದ್ದು ಈ ಯೋಜನೆಯ ಅವಕಾಶವನ್ನು ಎಲ್ಲಾ ರೈತರು ಉಪಯೋಗಿಸಬೇಕು ಎಂದು ಈ ಯೋಜನೆಯನ್ನು ಪ್ರಾರಂಭಿಸಿದೆ.
*ಈ ಯೋಜನೆಯಿಂದ ರೈತರು ಹೊಸ ಕೃಷಿ ಉದ್ಯಮವನ್ನು ಪ್ರಾರಂಭಿಸಲು ಆರ್ಥಿಕ ನೆರವನ್ನು ನೀಡಲಾಗುತ್ತದೆ.
*ಈ ಯೋಜನೆಯ ಪ್ರಯೋಜನ ಪಡೆಯಲು 11 ರೈತರ ಒಟ್ಟಾಗಿ ಕಂಪನಿಯನ್ನು ಸ್ಥಾಪಿಸಬೇಕು
*ಈ ಕಂಪೆನಿಗಾಗಿ ರಸಗೊಬ್ಬರ, ಬೀಜ ,ಔಷಧಿ ಎಲ್ಲವನ್ನು ಖರೀದಿಸಲು ಕೇಂದ್ರ ಸರ್ಕಾರ ಹಣವನ್ನು ನೀಡುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
*ರಾಷ್ಟ್ರೀಯ ಕೃಷಿ ಮಾರುಕಟ್ಟೆ ಅಧಿಕೃತ ವೆಬ್ಸೈಟ್ ಲಾಗಿನ್ ಆಗಿ
*ಎಫ್ ಪಿ ಓ ಕ್ಲಿಕ್ ಮಾಡಬೇಕು
*ನಂತರ ನೋಂದಣಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು
*ನೊಂದಣಿ ಫಾರ್ಮ್ ತೆರೆಯುತ್ತದೆ
*ನೊಂದಣಿ ಫಾರಂ ನಲ್ಲಿ ಕೇಳಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು
*ಐಡಿ ಪ್ರೂಫ್ ಅನ್ನೋ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು
*ಸಲ್ಲಿಸು ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು
ಈ ಯೋಜನೆಗೆ ಯಾರ್ಯಾರು ಅರ್ಹರು
ದೇಶದಲ್ಲಿರುವ ಪ್ರತಿಯೊಬ್ಬ ರೈತನು ಪಿಎಂ ಕಿಸಾನ್ ಎಫ್ಬಿ ಓ ಯೋಜನೆಗೆ ಅರ್ಹನಾಗಿದ್ದಾನೆ.