Pawan Wodeyar – Apeksha daughter’s Naming Ceremony:ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಪವನ್ ಒಡೆಯರ್ ಮತ್ತು ನಟಿ ಅಪೇಕ್ಷಾ ಪುರೋಹಿತ್ ತಮ್ಮ ಮುದ್ದಾದ ಮಗಳಿಗೆ ಚೆಂದದ ಹೆಸರಿಟ್ಟಿದ್ದಾರೆ. ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ಇತ್ತೀಚೆಗೆ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದರು. ಹೆಣ್ಣು ಮಗುವಿನ ಪೋಷಕರಾದರು. ಇದೀಗ ಹೆಣ್ಣು ಮಗುವಿಗೆ ನಾಮಕರಣ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗಿದೆ.
ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ತಮ್ಮ ಮಗಳಿಗೆ ‘ಯಾದ್ವಿ’ ಎಂದು ಹೆಸರಿಟ್ಟಿದ್ದಾರೆ. ಮಗುವಿಗೆ ಹೆಸರಿಡುವ ವಿಡಿಯೋವನ್ನು ಅಪೇಕ್ಷಾ ಪುರೋಹಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಅವಳು ನಮ್ಮ ಜೀವನದ ಹೊಸ ಪ್ರೀತಿ, ರಾಜಕುಮಾರಿ ಮತ್ತು ಶೌರ್ಯನ ಸಹೋದರಿ. ಅಪೇಕ್ಷಾ ಪುರೋಹಿತ್, ಅವಳನ್ನು ನಾವು ಯದ್ವಿ ಒಡೆಯರ್ ಎಂದು ಕರೆಯುತ್ತೇವೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಪೇಕ್ಷಾ ಪುರೋಹಿತ್ ಮತ್ತು ಪವನ್ ಒಡೆಯರ್ 2018 ರಲ್ಲಿ ವಿವಾಹವಾದರು. ದಂಪತಿಗೆ ಈಗಾಗಲೇ ಶೌರ್ಯ ಎಂಬ ಮಗನಿದ್ದಾನೆ. ಕಳೆದ ಜುಲೈನಲ್ಲಿ ಹೆಣ್ಣು ಮಗು ಜನಿಸಿತ್ತು. ಹೆಣ್ಣು ಮಗುವಿಗೆ ಈಗ ‘ಯದ್ವಿ’ ಎಂದು ನಾಮಕರಣ ಮಾಡಲಾಗಿದೆ.
View this post on Instagram
Supar sir prbhu kunigal
Super sir god bles you sir prabhu kunigal