ಇದ್ದಕ್ಕಿದ್ದ ಹಾಗೆ ಮಧ್ಯರಾತ್ರಿ ತಮ್ಮ ತಂಗಿಯರಿಗೆ ಆಸ್ತಿಯನ್ನು ಬರೆದು ಸೂಸೈಡ್ ಮಾಡಿಕೊಳ್ಳುವ ನಿರ್ಧಾರ ಮಾಡಿದ ನಟಿ ಪಾರುಲ್ ಯಾದವ್

ನಟಿ ಪಾರುಲ್ ಯಾದವ್ ಎಂಬ ಹೆಸರು ಕೇಳಿದೊಡನೆ ಕನ್ನಡದ ಪ್ಯಾರ್ಗೆ ಆಗ್ಬಿಟ್ಟೈತೆ ಹಾಡು ನೆನಪಾಗಿಬಿಡುತ್ತದೆ. ಸ್ಯಾಂಡಲ್ ವುಡ್ ನಲ್ಲಿ ಈ ಹಾಡಿನ ಮೂಲಕ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದ ಪಾರುಲ್ ನಂತರ ಅನೇಕ ಅವಕಾಶಗಳನ್ನು ಕೂಡ ಪಡೆದುಕೊಂಡರು. ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಸಿನಿಮಾಗಳಲ್ಲು ಕೂಡ ಪಾರುಲ್ ನಟಿಸಿದ್ದರು. ಇದೀಗ ನಟಿ ಪಾರುಲ್ ಮಧ್ಯರಾತ್ರಿ ಇದ್ದಕ್ಕಿದ್ದ ಹಾಗೆ ತನ್ನ ಆಸ್ತಿಯನ್ನು ತಮ್ಮ ಇಬ್ಬರು ತಂಗಿಯರಿಗೆ ಹಂಚಿ ತಾವು ಬದುಕುವುದೇ ಇಲ್ಲವೆಂಬ ಮಾತುಗಳನ್ನು ಕೂಡ ಆಡಿದ್ದಾರೆ.

 

 

ಪಾರುಲ್ ಯಾದವ್ ರವರು ತಮ್ಮ ತಂಗಿಯರಿಗೆ ಮಧ್ಯರಾತ್ರಿಯ ಆಸ್ತಿಯನ್ನು ಬರೆದು ಭಾವುಕರಾಗಿ ಮಾತನಾಡಿದ್ದಾರೆ. ಈ ಮಾತುಗಳು ಎಲ್ಲರ ಮನಸ್ಸನ್ನು ಕೂಡ ಮನಕಲಕುವ ರೀತಿಯಲ್ಲಿ ಮಾಡುತ್ತದೆ. ನಟಿ ಪಾರುಲ್ ಯಾದವ್ರವರು ಜಿಮ್ ಮಾಡುತ್ತಿದ್ದರು ಆರೋಗ್ಯಕರ ಕೆಲಸಗಳನ್ನು ಮಾಡುತ್ತಾ ತಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಂಡಿದ್ದರು ಅವರೇ ಹೇಳಿಕೊಂಡಿರುವ ಪ್ರಕಾರ ಬೇರೆಬೇರೆ ಕೆಟ್ಟ ರೀತಿಯ ಅಭ್ಯಾಸಗಳಿಂದ ನಾನು ದೂರವೇ ಇದ್ದೇನೆ ನನ್ನ ಜೀವನದಲ್ಲಿ ನಾನು ಆರೋಗ್ಯಯುತವಾದ ಜೀವನವನ್ನು ನಡೆಸಬೇಕು ಎಂದು ಹೀಗೆ ಬದುಕುತ್ತಿದ್ದೇನೆ ಎಂದಿದ್ದರು.

 

 

View this post on Instagram

 

A post shared by Parul Yadav (@theparulyadav)

 

ಆದರೆ ನಟಿ ಪಾರುಲ್ ಯಾದವ್ರವರ ಜೀವನದಲ್ಲಿ ಒಂದು ಘಟನೆ ನಡೆದಿತ್ತು ಆ ಘಟನೆಯಿಂದ ಇವರ ಜೀವನವೇ ಸಂಪೂರ್ಣವಾಗಿ ಬದಲಾಗಿ ಹೋಗಿತ್ತು. ಕಳೆದ ಲಾಕ್ಡೌನ್ ಸಮಯದಲ್ಲಿ ಇವರಿಗೆ ಕರೋನ ಸೋಂಕು ಕೂಡ ತಗಲಿದ್ದು ಅವರು ಉಳಿಯುವುದೇ ಇಲ್ಲ ಎನ್ನುವ ಹಾಗೆ ತೀರ ಅನಾರೋಗ್ಯಕ್ಕೆ ತಲುಪಿದ್ದರು ತಮಗೆ ಆದ ನೋವುಗಳ ಬಗ್ಗೆ ಮಧ್ಯರಾತ್ರಿ ನೆನಪಿಸಿಕೊಂಡು ಕಣ್ಣೀರಿಟ್ಟ ನಟಿ ಪಾರುಲ್ ಯಾದವ್ ನನಗೆ ಕರೋನ ಇದೆ ನಾನು ಇನ್ನು ಬದುಕುವುದಿಲ್ಲ ಎಂದಿದ್ದಾರೆ.

 

 

ನಟಿ ಪಾರುಲ್ ಯಾದವ್ ಮಧ್ಯರಾತ್ರಿ ತಮ್ಮ ನೋವಿನ ಘಟನೆಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕಿ ನನಗೆ ಮಾತ್ರವಲ್ಲದೆ ನಮ್ಮ ಮನೆಯಲ್ಲಿ ಹಲವು ಜನರಿಗೆ ಕರೋನ ಸೋಂಕು ಬಂದಿದೆ ಮನೆಯಲ್ಲಿ ಕೆಲಸದವರಿಗೂ ಕೂಡ ಸೋಂಕು ತಗಲಿದೆ ಎರಡನೇ ಅಲೆ ಕರೋನ ಇದ್ದಾಗ ನಮಗೆ ಭಯವೂ ಕೂಡ ಆಗಿತ್ತು. ನಮ್ಮ ತಾಯಿಗೆ ಈಗಾಗಲೇ ಎರಡು ಬಾರಿ ಕ್ಯಾನ್ಸರ್ ಬಂದು ತದನಂತರ ಗುಣಮುಖರಾಗಿದ್ದರು ಅವರಿಗೂ ಕೂಡ ಕರೋನ ಸೋಂಕು ಬಂದಿದ್ದು ನನಗೆ ತುಂಬಾ ಭಯವಾಗಿತ್ತು. ನನಗೆ ಎಲ್ಲರಿಗಿಂತ ಹೆಚ್ಚು ಸೋಂಕು ಉಂಟಾಗಿ ಹಲವಾರು ಲಕ್ಷಣಗಳು ಕೂಡ ಕಾಣಿಸಿಕೊಂಡು ನಾನು ಬದುಕುವುದೇ ಇಲ್ಲ ಎನ್ನುವ ಮಟ್ಟಿಗೆ ಹೋಗಿದ್ದೆ ನನಗೆ ಒಮ್ಮೆಲೆ ಹಲವಾರು ಲಕ್ಷಣಗಳು ಕಾಣಿಸಿಕೊಂಡವು ಊಟಾ ರುಚಿಸುತ್ತಿರಲಿಲ್ಲ ಯಾವುದೇ ವಾಸನೆ ಕೂಡ ತಿಳಿಯುತ್ತಿರಲಿಲ್ಲ ಗಂಟಲು ನೋಯುತ್ತಿತ್ತು ವಿಪರೀತ ಜ್ವರ ವಾಂತಿ ತಲೆ ಸುತ್ತು ಎಲ್ಲವೂ ಕೂಡ ಒಮ್ಮೆಲೆ ಬಂದಿದ್ದವು.

 

 

View this post on Instagram

 

A post shared by Parul Yadav (@theparulyadav)

ಈ ಕರೋನಾದಿಂದ ನಾನು ಕುಗ್ಗಿ ಹೋಗಿದ್ದೆ ನಾನು ಮಧ್ಯರಾತ್ರಿ ವಿಪರೀತ ಜ್ವರ ಬಂದು ಸುಸ್ತಾಗಿ ಬಿಟ್ಟಿದ್ದೇನೆ. ಬದುಕುವುದೇ ಸಂದೇಹ ಎನಿಸಿಬಿಟ್ಟಿತ್ತು ಕೈಕಾಲು ಎಲ್ಲಾ ನಡುಗುತ್ತಿದ್ದವು. ಡಾಕ್ಟರ್ಗೂ ಕೂಡ ಫೋನ್ ಮಾಡಿದೆ ಅವರು ಕೂಡ ಧೈರ್ಯವಾಗಿ ಇರಿ ನೀವು ಬದುಕುತ್ತೀರಾ ಎಂದು ಹೇಳಿದರು ರಾತ್ರಿ ನಾನು ಎಷ್ಟು ಕಷ್ಟ ಪಟ್ಟೆ ಎಂದರೆ ನಾನೇ ಸುಸೈಡ್ ಮಾಡಿಕೊಂಡು ಸತ್ತು ಹೋಗೋಣ ಎನಿಸಿತು ನನ್ನ ಪರಿಚಯದವರೊಬ್ಬರಿಗೆ ಮೇಲ್ ಒಂದನ್ನು ಕಳಿಸಿ ಆಸ್ತಿಯನ್ನೆಲ್ಲ ನನ್ನ ತಂಗಿಯರಿಗೆ ಹಂಚಿ ಬಿಡಿ ಎಂದು ಕೂಡ ತಿಳಿಸಿದ್ದೆ.

 

 

ಈ ವಿಚಾರವನ್ನು ತಿಳಿದುಕೊಂಡ ನನ್ನ ತಂಗಿಯರು ಕೂಡ ರೋಧಿಸುತ್ತಿದ್ದರು. ಆ ಸಮಯ ನನಗೆ ತುಂಬಾ ಕಷ್ಟ ಅನಿಸಿತ್ತು ಬೆಳಗ್ಗೆ ಎದ್ದಾಗ ನಾನು ಸ್ವಲ್ಪ ಚೇತರಿಸಿಕೊಂಡಿದ್ದೆ ಆಗ ನಾನು ಬದುಕುತ್ತೇನೆ ಎಂಬ ಭರವಸೆಯೂ ಕೂಡ ಇತ್ತು. ನಾನು ಆರೋಗ್ಯವಾಗಿ ಇದ್ದೆ ಯೋಗ ಮಾಡುತ್ತಿದ್ದೆ ಉತ್ತಮ ಆಹಾರವನ್ನು ಸೇವಿಸುತ್ತಿದ್ದೆ ಕೆಟ್ಟ ಅಭ್ಯಾಸಗಳೇ ಇರಲಿಲ್ಲ ನನಗೆ ಆದರೂ ಕೂಡ ಕರೋನ ಹಿಮ್ಮಾರಿಯಾಗಿ ನನ್ನ ಬೆನ್ನತ್ತಿ ಬಿಟ್ಟಿತ್ತು ಇದೀಗ ಕರೋನದಿಂದ ಗುಣಮುಖಳಾಗಿ ನಾನು ನನ್ನ ಜೀವನದಲ್ಲಿ ಖುಷಿಯನ್ನು ಕಾಣುತ್ತಿದ್ದೇನೆ.

 

 

ನಾನು ಈ ಮೊದಲು ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಾಗ ಕಿರಿಕಿರಿಯನ್ನು ಅನುಭವಿಸುತ್ತಿದ್ದೆ ಆದರೆ ಆ ವಿಚಾರದಲ್ಲೂ ಕೂಡ ನಾನು ಖುಷಿಯಾಗಿದ್ದೇನೆ. ಕರೋನ ನನಗೆ ದೊಡ್ಡ ಪಾಠವನ್ನೇ ಕಲಿಸಿದೆ ನಾನು ಈಗ ತುಂಬಾ ಬದಲಾಗಿದ್ದೇನೆ ಕರೋನಾ ಸಾಮಾನ್ಯ ಜನರಿಂದ ಹಿಡಿದು ಸ್ಟಾರ್ ನಟರವರೆಗೂ ಎಲ್ಲರನ್ನು ತನ್ನ ಕಾಲಿಗೆ ಬಂದು ಬೀಳುವಂತೆ ಮಾಡಿಕೊಂಡು ಬಿಟ್ಟಿತ್ತು. ಹಣ ಆಸ್ತಿಗಿಂತ ಆರೋಗ್ಯವೇ ದೊಡ್ಡದು ಎಂದು ನಾನು ಅರ್ಥ ಮಾಡಿಕೊಂಡೆ ಆದರೆ ಕರೋನಾದಿಂದ ಈಗಾಗಲೇ ಹಲವಾರು ಜನರು ಮರಣವನ್ನು ಹೊಂದಿದ್ದು ಕುಟುಂಬದವರನ್ನು ಅನಾಥರನ್ನಾಗಿ ಮಾಡಿ ಹೋಗಿದ್ದಾರೆ. ಇದೆಲ್ಲವನ್ನು ನೋಡಿದಾಗ ಒಂದು ರೀತಿ ಬೇಜಾರು ಕೂಡ ಆಗುತ್ತದೆ ಆದರೆ ಆ ದೇವರು ನನ್ನನ್ನು ಬದುಕಿಸಿ ಬಿಟ್ಟಿದ್ದಾನೆ ಅದರಿಂದ ನನಗೆ ಸ್ವಲ್ಪ ಖುಷಿಯಾಗುತ್ತದೆ ಎಂದಿದ್ದಾರೆ

Be the first to comment

Leave a Reply

Your email address will not be published.


*