‘Papa Pandu’ actor Chidananda’s painful words:ಪಾಪಾ ಪಾಂಡು’ ಯಾರಿಗೆ ಗೊತ್ತಿಲ್ಲ ಹೇಳಿ..? ‘ಪಾಪಾ ಪಾಂಡು’ ಹಾಸ್ಯ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸಿತ್ತು. ಈ ಧಾರಾವಾಹಿಯಲ್ಲಿ ಮೃದು ಸ್ವಭಾವದ ಪಾಂಡು ಪಾತ್ರಕ್ಕೆ ಜೀವ ತುಂಬಿದವರು ನಟ ಚಿದಾನಂದರವರು. ‘ಪಾಪಾ ಪಾಂಡು’ ಧಾರಾವಾಹಿ ಮುಗಿದು ವರ್ಷಗಳು ಕಳೆದರೂ ಚಿದಾನಂದರವರು ಜನ ಅವರನ್ನು ‘ಪಾಪಾ ಪಾಂಡು’ ಎಂದೇ ಗುರುತಿಸುತ್ತಿದ್ದರು..! ಈ ಧಾರಾವಾಹಿ ಅವರಿಗೆ ಅಷ್ಟರ ಮಟ್ಟಿಗೆ ಖ್ಯಾತಿ ತಂದುಕೊಟ್ಟಿತ್ತು.
‘ಪಾಪಾ ಪಾಂಡು’ ಖ್ಯಾತಿಯ ನಟ ಚಿದಾನಂದ ಮತ್ತು ನಿಜ ಜೀವನದ ಪತ್ನಿ ಕವಿತಾ ಪ್ರಸ್ತುತ ‘ಜೋಡಿ ನಂ 1’ ಸೀಸನ್ 2 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ‘ಜೋಡಿ ನಂ 1’ ಸೀಸನ್ 2 ರ ವೇದಿಕೆಯಲ್ಲಿ ನಟ ಚಿದಾನಂದ ಅವರು ತಮ್ಮ ಜೀವನದ ಕಹಿ ಸತ್ಯವನ್ನು ಬಹಿರಂಗಪಡಿಸಿದರು. ನಟ ಚಿದಾನಂದ ಅವರು ಸ್ವಂತ ಮನೆ ನಿರ್ಮಿಸಿ ಮಾರಾಟ ಮಾಡಿರುವ ಬಗ್ಗೆ ನೋವಿನಿಂದ ಮಾತನಾಡಿದರು.
ಇವತ್ತಿನವರೆಗೂ ಹೇಳದೇ ಇರುವ ಸತ್ಯ ಏನು ಎಂದು ಪ್ರಶ್ನೆ ಕೇಳಿದಾಗ ಸ್ವಂತ ಮನೆ ಕಟ್ಟಿಸಿ ಕವಿತಾಳನ್ನು ಗಾಜಿನ ಗೊಂಬೆಯಂತೆ ನೋಡಿಕೊಳ್ಳಬೇಕು ಎಂದಿದ್ದೆ. ಮನೆ ಕಟ್ಟಿಸಿದೆ. ಮನೆ ಕಟ್ಟಿಸಿ ಸ್ವಲ್ಪ ದಿನ ಅಲ್ಲಿದ್ವಿ. ಆಮೇಲೆ ಮಾರಿಬಿಟ್ವಿ ಆ ಸತ್ಯ ಸುಳ್ಳಾಗಿಯೇ ಉಳಿದಿದೆ,” ಎಂದು ಚಿದಾನಂದ ನೋವಿನಿಂದ ನುಡಿದರು.