ನಟ ದುನಿಯಾ ವಿಜಯ್(duniya Vijay) ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ವಿಚಾರಗಳಿಂದಲೂ ಕೂಡ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಅವರ ಮೊದಲನೇ ಹೆಂಡತಿ (duniya Vijay first wife)ನಾಗರತ್ನ ರವರ ಜಗಳದ ಮೂಲಕ ಸುದ್ದಿಯಲ್ಲಿದ್ದ ನಟ ದುನಿಯಾ ವಿಜಯ್ ಇದೀಗ ಹಲ್ಲೇ ಪ್ರಕರಣದಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 2018ರಲ್ಲಿ ಪಾನಿಪುರಿ ಕಿಟ್ಟಿ(pani puri Kitty) ಎನ್ನುವವರು ದುನಿಯಾ ವಿಜಯ್ ಮೇಲೆ ಹಲ್ಲೆಯನ್ನು ಮಾಡಿದ್ದರು ಈ ಕುರಿತು ಪೊಲೀಸ್ ಸ್ಟೇಷನ್ನಲ್ಲಿ ದೂರು ಕೂಡ ದಾಖಲಾಗಿದ್ದು ಇದೀಗ ಈ ಕೇಸ್ ಮತ್ತೆ ರಿ ಓಪನ್ ಆಗಿದೆ.

 

 

ದುನಿಯಾ ವಿಜಯ್ ಹಾಗೂ ಪಾನಿಪುರಿ ಕಿಟ್ಟಿ ನಡುವಿನ ಕಿತ್ತಾಟದ ಕೇಸ್ ಮತ್ತೆ ಮರುಜೀವ ಪಡೆದುಕೊಂಡಿದೆ. ದುನಿಯಾ ವಿಜಯ್ ರವರನ್ನು ಬೆದರಿಸಿ ಕಾರಿಗೆ ಹಾನಿಯನ್ನು ಕೂಡ ಮಾಡಿದ್ದರಿಂದ ಜಿಮ್ ಟ್ರೈನರ್ ಸೇರಿದಂತೆ ಅಲ್ಲಿ ಕೆಲಸ ಮಾಡುವ ಇಬ್ಬರ ವಿರುದ್ಧ ಪೊಲೀಸರು ಕೇಸ್ ಅನ್ನು ದಾಖಲಿಸಿದ್ದಾರೆ. ದುನಿಯಾ ವಿಜಯ್ ಸೆಪ್ಟೆಂಬರ್ 23 2018 ರಂದು ಅವರ ಮಗ(duniya Vijay son Samrat) ಸಾಮ್ರಾಟ್ ಜೊತೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನಕ್ಕೆ ಹೋಗಿದ್ದರು ಅಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತ್ತಿತ್ತು ಆ ಕಾರ್ಯಕ್ರಮಕ್ಕೆ ದುನಿಯಾ ವಿಜಯ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು ಈ ವೇಳೆ ದುನಿಯಾ ವಿಜಯ್ ಆ ಸ್ಥಳಕ್ಕೆ ತೆರಳುತ್ತಿದ್ದಂತೆ ಸ್ಥಳದಲ್ಲಿದ್ದ ಮಾರುತಿ ಗೌಡ ಎಂಬಾತ ದುನಿಯ ವಿಜಯ್ ರವರ ಮೇಲೆ ಕೆಲವು ನಿಂದನಾತ್ಮಕ ಮಾತುಗಳನ್ನು ಆಡಿದ್ದಾರೆ.

 

 

ಇಷ್ಟೇ ಅಲ್ಲದೆ ದುನಿಯಾ ವಿಜಯ್ ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ಭಾಗವಹಿಸಲು ಹೋಗುತ್ತಿರುವಾಗ ಅವರಿಗೆ ಜೀವ ಬೆದರಿಕೆಯನ್ನು ಕೂಡ ಹಾಕಿದ್ದಾರಂತೆ. ಇದನ್ನು ನೋಡಿದ ದುನಿಯಾ ವಿಜಯ್ ಅಭಿಮಾನಿಗಳು, ಮಾರುತಿ ಗೌಡನನ್ನು ಸುತ್ತುವರೆದಿದ್ದು ನಂತರ ದುನಿಯಾ ವಿಜಯ್ ರವರನ್ನು ಸೇಫಾಗಿ ಕಾರಿನಲ್ಲಿ ಕೂರಿಸಿ ಕಳುಹಿಸಿದ್ದಾರೆ.ತದನಂತರ ಮಾರುತಿ ಗೌಡನ ಸಂಬಂಧಿ ಪಾನಿಪುರಿ ಕಿಟ್ಟಿ ಪೊಲೀಸರನ್ನು ಸಂಪರ್ಕಿಸಿ ವಿಜಯ್ ಗೌಡನನ್ನು ಅಪಹರಿಸಿದ್ದಾರೆ ಎಂದು ದೂರನ್ನು ನೀಡಿದ್ದಾರೆ. ಈ ವೇಳೆ ಪೊಲೀಸರು ದುನಿಯಾ ವಿಜಯ್ ರನ್ನು ಠಾಣೆಗೆ ವಿಚಾರಣೆಗಾಗಿ ಬರಬೇಕೆಂದು ಹೇಳಿದ್ದಾರೆ. ಪೊಲೀಸರ ಮಾತಿಗೆ ಬೆಲೆ ಕೊಟ್ಟು ವಿಜಯ್ ಕೂಡ ಮಾರುತಿ ಗೌಡ ಅವರನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

 

 

ದುನಿಯಾ ವಿಜಯ್ ಪೊಲೀಸ್ ಸ್ಟೇಷನ್ ಗೆ ಬಂದ ತಕ್ಷಣವೇ ಕಿಟ್ಟಿ ಹಾಗು ಅವರ ಸಹಾಯಕರು ದುನಿಯಾ ವಿಜಯ್ ಗೆ ಪೋಲಿಸರ ಮುಂದೆಯೇ ಬೆದರಿಕೆ ಹಾಕಿದ್ದಾರೆ ಅಷ್ಟೇ ಅಲ್ಲದೆ ಪೊಲೀಸರ ಮುಂದೆ ದುನಿಯಾ ವಿಜಯ್ ರವರ ಕಾಲಿಗೆ ಹಾನಿ ಮಾಡಿದ್ದಾರೆ ಎಂದು ದುನಿಯಾ ವಿಜಯ್ ಆರೋಪಿಸಿದ್ದಾರೆ. ಈ ಅಪಹರಣದ ಹಿನ್ನೆಲೆಯಲ್ಲಿ ವಿಜಯ್ ಮತ್ತು ಇತರರನ್ನು ಪೊಲೀಸರು ಬಂಧಿಸಿದ್ದರು ತದನಂತರ ಕಿಟ್ಟಿ ಮಾರುತಿ ಗೌಡ ಇವರೆಲ್ಲರೂ ದುನಿಯಾ ವಿಜಯ್ ಮೇಲೆ ದೂರನ್ನು ನೀಡಿದ್ದಾರೆ.

 

 

ಇಷ್ಟೆಲ್ಲಾ ಪ್ರಕರಣಗಳು ನಡೆದ ನಂತರವೂ ಕೂಡ ಕಿಟ್ಟಿ ಅವರು ನ್ಯಾಯಾಲಯದಲ್ಲಿ ನ್ಯಾಯ ಕೇಳಲು ಹೋಗಿದ್ದು ಅವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ರದ್ದುಗೊಳಿಸಲಾಗಿದೆ. ಕಿಟ್ಟಿ ರವರ ಎಫ್ಐಆರ್ ಅನ್ನು ರದ್ದುಗೊಳಿಸಿದ್ದರಿಂದ ದುನಿಯಾ ವಿಜಯ್ ಅದರ ಬಗ್ಗೆ ನ್ಯಾಯ ಕೇಳಲು ಹೈಕೋರ್ಟ್ ಮೊರೆ ಹೋಗಿದ್ದು ನ್ಯಾಯಾಲಯವು ಮತ್ತೆ ಎಫ್ ಐ ಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ ಕೋರ್ಟ್ ಆದೇಶ ನೀಡಿದ ನಂತರ ಪೊಲೀಸರು ಮತ್ತೊಮ್ಮೆ ಮಾರುತಿ ಗೌಡ ಕಿಟ್ಟಿ ಮುಂತಾದವರ ಮೇಲೆ ಹೊಸದಾಗಿ ಮತ್ತೆ ಎಫ್ಐಆರ್ ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿಕೆಯನ್ನು ಕೂಡ ನೀಡಿದ್ದಾರೆ.

 

 

ದುನಿಯಾ ವಿಜಯ್ ಅಲ್ಲೇಯ ಪ್ರಕರಣ ಇದೀಗ ಮತ್ತೆ ರಿ ಓಪನ್ ಆಗಿದ್ದು ಅದರ ಬಗ್ಗೆ ಪಾನಿಪೂರಿ ಕಿಟ್ಟಿ ಮಾತನಾಡಿ ನಟ ದುನಿಯಾ ವಿಜಯ್ ಗೆ ಮಾಡಲು ಕೆಲಸ ಇಲ್ಲ ಹಾಗಾಗಿ ಈ ಕೇಸನ್ನು ಮತ್ತೆ ರಿ ಓಪನ್ ಮಾಡಿಸಿದ್ದಾರೆ. ಅಂದು ನಾನು ದುನಿಯಾ ವಿಜಯ್ ಮೇಲೆ ಹಲ್ಲೆ ಮಾಡಲು ಹೋಗಿರಲಿಲ್ಲ ಬದಲಾಗಿ ದುನಿಯ ವಿಜಯ್ ನನ್ನ ತಮ್ಮನ ಮೇಲೆ ಹಲ್ಲೆ ಮಾಡಿದ್ದರು ದುನಿಯಾ ವಿಜಯ್ ಮಗ ಸಾಮ್ರಾಟ್ ಗೆ ಕೂಡ ಜೀವ ಬೆದರಿಕೆ ಹಾಕಿದ್ದೇನೆ ಎಂದು ಕಂಪ್ಲೇಂಟ್ ನಲ್ಲಿ ರಿಜಿಸ್ಟರ್ ಮಾಡಿದ್ದಾರೆ ಆ ವಿಡಿಯೋದಲ್ಲಿ ಎಲ್ಲಿ ಕೂಡ ಸಾಮ್ರಾಟ್ ಕಾಣಿಸುತ್ತಿಲ್ಲ ಎಷ್ಟು ಸುಳ್ಳು ಹೇಳುತ್ತಿದ್ದಾರೆ ಎಂದು ಈ ಮೂಲಕವೇ ತಿಳಿದುಕೊಳ್ಳಬಹುದು.

 

 

ನಾವಿಬ್ಬರೂ ಯಾವುದೇ ರಾಜೀ ಕಾರ್ಯವನ್ನು ಕೂಡ ಮಾಡಿಕೊಂಡಿಲ್ಲ ನಾನು ಕಾನೂನು ಮೂಲಕವೇ ಹೋರಾಡುತ್ತೇನೆ. ಒಂದು ಕಾಲದಲ್ಲಿ ನಾನು ಹಾಗೂ ದುನಿಯಾ ವಿಜಯ್ ಒಂದೇ ಕಡೆ ವರ್ಕೌಟ್ ಮಾಡುತ್ತಿದ್ದೆವು ಆದರೆ ಇದೀಗ ಅವರ ಬಗ್ಗೆ ಮಾತನಾಡಲು ನನಗೆ ಬೇಸರವಾಗುತ್ತಿದೆ. ಕನ್ನಡದ ಹೀರೋಗಳು ಯಾರು ಈ ರೀತಿ ಇಲ್ಲ ದುನಿಯಾ ವಿಜಯ್ (duniya Vijay)ಅನ್ನು ಸ್ಯಾಂಡಲ್ವುಡ್ ಹೀರೋಗೆ (sandalwood Hero)ಹೋಲಿಸುವ ಯಾವುದೇ ಅರ್ಹತೆ ಇಲ್ಲ ಹಾಗಾಗಿ ನಾನು ಕಾನೂನು ಮುಖೇನವೇ ಹೋರಾಟ ನಡೆಸಿ ನ್ಯಾಯವನ್ನು ಪಡೆದುಕೊಳ್ಳುತ್ತೇನೆ ಎಂದು ಪಾನಿಪೂರಿ ಕಿಟ್ಟಿ(pani puri Kitty) ಮಾತನಾಡಿದ್ದಾರೆ.

Leave a comment

Your email address will not be published. Required fields are marked *